Focus News
Trending

ಜೋಯ್ಡಾದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಜೊಯಿಡಾ: ತಾಲೂಕಿನ ಗಾಂಧಿ ಜಯಂತಿ ಪ್ರಯುಕ್ತ ಸಂತರಿಯಿoದ ಜೊಯಿಡಾ ಬರುವ ರಸ್ತೆಯ ಎರಡು ಬದಿಯಲ್ಲಿರುವ ಗಿಡಗಳನ್ನು,ಕಸಗಳನ್ನು ಚಂದ್ರಕಾoತ ದೇಸಾಯಿ ಅವರ ನೇತೃತ್ವದಲ್ಲಿ ಊರಿನ ಜನರ ಸಹಕಾರದೊಂದಿಗೆ ತೆರವುಗೊಳಿಸಿ ಸ್ವಚ್ಚತಾಕಾರ್ಯ ಮಾಡಲಾಗಿದೆ.


ಸಂತರಿಯಿoದ ಜೊಯಿಡಾ ಕೇಂದ್ರಕ್ಕೆ ಬರುವಂತ ಸುಮಾರು 2 ಕಿ.ಮಿ ರಸ್ತೆಯ ಎರಡೂ ಬದಿಯಲ್ಲಿ ವಿವಿಧ ರೀತಿಯ ಕಳೆ ಗಿಡಗಳು ಬೇಳೆದು ತುಂಬಿದ್ದವು. ಈ ಎಲ್ಲವನ್ನು ಸ್ವತಃಹ ಸಾರ್ವಜನಿಕರೇ ಸೇರಿ ಸ್ವಚ್ಚತಾ ಕಾರ್ಯ ನಡೆಸಿ ಸಮಾಜಕ್ಕೆ ಮಾಧರಿಯಾಗುವಂತ ಕೆಲಸವನ್ನು ಮಾಡಿದ್ದಾರೆ.


ಈ ಸಂದರ್ಬದಲ್ಲಿ ಸಾಮಾಜಿಕ ಕಾರ್ಯಕರ್ತ ಚಂದ್ರಕಾoತ ದೇಸಾಯಿ,ಸಂತರಿ ಗ್ರಾಮದ ಪ್ರಶಾಂತ ಧುರಿ,ಅಕ್ಷಯ ಪಟ್ಟೆ, ನಾಗರಾಜ ಪಟ್ಟೆ,ಮೋಹನ ದೇಸಾಯಿ,ಮಂಜುನಾಥ ಸಾವಂತ,ಮಾರುತಿ ಪಾಡ್ಕರ್,ವೈಭವ ಸಿದ್ದೇಕರ,ಸೂರಜ ದೇಸಾಯಿ,ಪ್ರಸಾಧ ಸಾವಂತ,ಮುಖೇಶ ವೇಳಿಪ ಮುಂತಾದವರಿದ್ದರು.

ವಿಸ್ಮಯ ನ್ಯೂಸ್, ಜೋಯ್ಡಾ

Back to top button