
ಕುಮಟಾ: ಮೂರುಕಟ್ಟೆಯಲ್ಲಿರುವ ಪುರಸಭೆಯ ರಾಧಾ ಅಣ್ಣಾಪೈ ಸಭಾಭವನದಲ್ಲಿ ಕುಮಟಾ ಪುರಸಭೆಯ ಅಧ್ಯಕ್ಷರಾದ ಸುಮತಿ ಭಟ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಪುರಸಭಾ ಸದಸ್ಯ ರಾಜೇಶ್ ಪೈ ಅವರು ಸೆನೆಟರಿ ಅಧಿಕಾರಿಗಳು ಬಾರದೇ ಸಭೆ ಇಟ್ಟಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಸದಸ್ಯರ ಮೂರು ತಿಂಗಳ ಅವಧಿ ಮಾತ್ರ ಬಾಕಿ ಇದ್ದು ಯಾವುದೇ ಕೆಲಸ ಆಗುತ್ತಿಲ್ಲ ಸುಮ್ಮನೇ ಮೀಟಿಂಗ್ ಮಾಡುವ ಬದಲು ಎಲ್ಲರೂ ಹೋಗಿಬಿಡುವ ಎಂದು ಆಕ್ರೋಶ ಹೊರಹಾಕಿದರು.
ಸದಸ್ಯ ಸಂತೋಷ ನಾಯ್ಕ ಮಾತನಾಡಿ ಯಾರಿಗೆ ಸರಿಯಾದ ಅರ್ಹತೆ ಇದೆ, ಅಂತವರನ್ನು ಸೆನಿಟರಿ ನೇಮಿಸಿ, ಮುನಸಿಪಾರ್ಟಿ ಕೆಲಸ ಆಗಬೇಕಲ್ಲಾ ಎಂದರು. ಇದಕ್ಕೆ ಪುರಸಭಾ ಅಧ್ಯಕ್ಷೆ ಸುಮತಿ ಭಟ್ ಗಲಾಟೆ ಮಾಡುವುದರಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲಾ ಎಲ್ಲರೂ ಸೇರಿ ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ, ಇಲ್ಲಿ ಮೀಟಿಂಗ್ ನಿಯಮಾನುಸಾರ ನಡೆಸಲಾಗುತ್ತಿದೆ. ಹಿಂದಿನ ಮೀಟಿಂಗಿಗೆ ಹೆಲ್ತ್ ಇನಸ್ಪೆಕ್ಟರ್ ವಿನೋದ ಹಾಜರಾಗಬೇಕಿತ್ತು. ಆದರೆ ಅವರು ಹಾಜರಾಗಿಲ್ಲ. ಅವರ ತಪ್ಪಿನ ಬಗ್ಗೆ ಮುಂದಿನ ಮೀಟಿಂಗಲ್ಲಿ ವಿವರ ಕೇಳೋಣಾ ಎಂದರು.
ನೀರು ಸರಬರಾಜು ಸಮಸ್ಯೆ ಮತ್ತು ಭವಿಷ್ಯದ ಯೋಜನೆಗಳು
ರಾ.ಹೆ ಪ್ರಾಧಿಕಾರದ ಇಂಜಿನಿಯರ್ ಅಮರ್ ಅವರು ಹೊನ್ನಾವರದಿಂದ ಕುಮಟಾ ವರೆಗೆ ಹೆದ್ದಾರಿ ಪಕ್ಕ ಹೊಸದಾಗಿ ಡ್ರ‍್ಯಾನೇಜ್ ಸಿಸ್ಟಮ್ ಆರಂಭಿಸಲು ಕುಮಟಾ ಪಟ್ಟಣದಲ್ಲಿ 7 ಕಿ.ಮೀ, ಹೊನ್ಮಾವು, ಮಾನೀರ್ ಬ್ರಿಜ್ ಮಾಡಿ ಹೈವೆ ಸಂಪೂರ್ಣ ಡೆವಲೊಪ್ ಮಾಡುತ್ತಿದ್ದೇವೆ ಎಂದರು. ರಾಜೇಶ ಪೈ ಈ ಡ್ರ‍್ಯಾನೇಜ್ ಬಗ್ಗೆ ನಿಮಗೆ ಅವಕಾಶ ಇರುವ ಬಗ್ಗೆ ದಾಖಲೆಪತ್ರ ನೀಡಿ ಎಂದರು.
ಇದಕ್ಕೆ ಅಮರ್ ಮಾತು ಮುಂದುವರಿಸಿ 2014 ರಲ್ಲಿ ಐ.ಆರ್.ಬಿ ಕಂಪನಿಗೆ ಪ್ರೊಜೆಕ್ಟ್ ನೀಡಿದ್ದು 2016 ರಲ್ಲಿ ಮುಗಿಯಬೇಕಿತ್ತು ಆಗ ಕುಮಟಾ ಬೈಪಾಸ್ ಮಾಡಲು ಸರ್ಕಾರ ಸೂಚಿಸಿ ಇಲ್ಲಿಯ ಯಾವುದೇ ಕೆಲಸ ಮಾಡದಂತೆ ಆದೇಶಿಸಿತ್ತು ನಂತರ ಎನ್.ಎಚ್.ಎ.ಐ ಯಿಂದ ಈಗಾಗಲೇ ಇರುವ ಹೆದ್ದಾರಿ ಅಭಿವೃದ್ಧಿಗೆ ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಈಗ ಅದಕ್ಕೆ ಅಪ್ರುವಲ್ ಬಂದಿದೆ ಎಂದರು.
ಮನೆ ಮೇಲ್ಛಾವಣಿ ದುರಸ್ತಿ ಅರ್ಜಿಗಳ ಪರಿಶೀಲನೆ
ಮುoದಿನ ದಿನಗಳಲ್ಲಿ ಕುಮಟಾ ಪುರಸಭೆ ನಗರಸಭೆಯಾಗಲಿದೆ ಆಗ ಅಳ್ವೆಕೊಡಿ, ಹಂದಿಗೋಣ ಸೇರಿ ನಮ್ಮ ವ್ಯಾಪ್ತಿ ಹೆಚ್ಚಲಿದೆ ಈಗಿರುವ ನೀರು ಸರಬರಾಜಿನ ಪೈಪ್ ತೆಗೆದರೆ ಆಗ ಜನರಿಗೆ ನೀರು ಕೊಡಲು ಏನು ಮಾಡುತ್ತೀರಿ ಎಂದು ರಾಜೇಶ ಪೈ ಎನ್.ಎಚ್.ಎ.ಐ ರವರಿಗೆ ಪ್ರಶ್ನಿಸಿದರು.
ಮುಖ್ಯಾಧಿಕಾರಿ ಮನೆ ಮೇಲ್ಛಾವಣಿ ದುರಸ್ತಿಗೆ 75 ರೂ ಮಂಜೂರಿಗೆ 10 ಜನ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 3 ಜನರ ಅರ್ಜಿ ಸರಿಯಾಗಿದೆ ಎಂದರು ಇದಕ್ಕೆ ಸಂತೋಷ ನಾಯ್ಕ ಮೂವರಿಗೆ ಸಮನಾಗಿ ಮೊತ್ತ ಹಂಚಲು ಸಲಹೆ ನೀಡಿದರು. ಪುರಸಭಾ ವ್ಯಾಪ್ತಿಯ 16 ಅಂಗಡಿಗಳನ್ನು ಹರಾಜು ಮೂಲಕ ನೀಡಿದ್ದು ಅದರಲ್ಲಿ 8 ಅಂಗಡಿ ಪಡೆದು ಟೆಂಡರ್ ದಾರರು ಡಿಫಾಸಿಟ್ ಸಹ ಭರಣ ಮಾಡಿರುತ್ತಾರೆ ಎಂಬ ಮಾತಿಗೆ ರಾಜೇಶ ಪೈ ಈ ಹಿಂದೆ ಹರಾಜು ಪಡೆದವರಿಗೆ ನಂತರ ಬಾಡಿಗೆ ಕಡಿಮೆ ಮಾಡಿ ನೀಡಿದ ಬಗ್ಗೆ ನನ್ನ ಗಮನಕ್ಕಿದೆ ಎಂದರು.
ಈ ಸಂದರ್ಭದಲ್ಲಿ ಕುಮಟಾ ಪುರಸಭಾ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ, ಪುರಸಭಾ ಅಧ್ಯಕ್ಷೆ ಸುಮತಿ ಭಟ್, ಉಪಾಧ್ಯಕ್ಷ ಮಹೇಶ ನಾಯ್ಕ, ಸದಸ್ಯರಾದ ಸೂರ್ಯಕಾಂತ ಗೌಡ, ಮೋಹಿನಿ ಗೌಡ, ರಾಜೇಶ ಪೈ, ಸಂತೋಷ ನಾಯ್ಕ ಸೇರಿದಂತೆ ಇತರ ಸದಸ್ಯರು, ಪುರಸಭಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ, ಕುಮಟಾ