
ಅಂಕೋಲಾ: ಹಳ್ಳಿಯ ಹೆಣ್ಣು ಮಗಳೊಬ್ಬಳು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಭೆಯಲ್ಲಿ, ತಾನು 5 ನೇ ತರಗತಿ ಫೇಲ್ ಆದವಳಾದರೂ ದೆಹಲಿಗೆ ಹೋಗಿ ರಾಷ್ಟ್ರ ಭಾಷೆಯಲ್ಲೂ ಮಾತನಾಡಬಲ್ಲೆ ಎಂದು ಪಂಚ ಭಾಷೆಗಳ ಡೈಲಾಗ್ ರೂಪದಲ್ಲಿ ಅಬ್ಬರಿಸಿದ್ದ ವಿಸ್ಮಯ ವಾಹಿನಿ ಲೈವ್ ವಿಡಿಯೋ ತುಣುಕು ಎಲ್ಲಡೆ ಸಖತ್ ವೈರಲ್ ಆಗಿತ್ತು. ಇದೀಗ ಗಣೇಶೋತ್ಸವ ಮೆರವಣಿಗೆಯಲ್ಲೂ ಅದೇ ಮಹಿಳೆಯ ವೇಷ ತೊಟ್ಟು, ಅವಳ ಧ್ವನಿ ಮತ್ತೆ ಪ್ರತಿಧ್ವನಿಸುವಂತೆ ಮಾಡಿರುವುದು ಹಳ್ಳಿ ಹಳ್ಳಿಗಳಲ್ಲಿ ಹೋರಾಟದ ಕಿಚ್ಚು ಹೆಚ್ಚಿಸುತ್ತಿದ್ದು, ಕೇಣಿ ಬಂದರು ವಿರೋಧಿ ಹೋರಾಟ ಸಮಿತಿಗೆ ಮತ್ತಷ್ಟು ಬಲ ನೀಡಿದಂತಾಗಿದೆ .
ಅಂಕೋಲಾ ತಾಲೂಕಿನ ಕೇಣಿಯಲ್ಲಿ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಗೆ ಕಳೆದ ಸುಮಾರು 10 ತಿಂಗಳಿoದ ಸ್ಥಳೀಯ ಮೀನುಗಾರರ ನೇತೃತ್ವದಲ್ಲಿ,ಅಕ್ಕ ಪಕ್ಕದ ಹಳ್ಳಿಗಳ ರೈತರು ಕೂಲಿ ಕಾರ್ಮಿಕರು ಮತ್ತಿತರರ ಭಾರಿ ವಿರೋಧ ಕೇಳಿ ಬರುತ್ತಲೇ ಇತ್ತು. ಈ ವೇಳೆ ಸಭೆಯಲ್ಲಿ ಒಬ್ಬರಿಗಿಂತ ಒಬ್ಬರು ತಮ್ಮದೇ ಶೈಲಿಯಲ್ಲಿ ಮುಕ್ತವಾಗಿ ಮಾತನಾಡಿದ್ದರು. ಅಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಗ್ರಿಬೈಲಿನ ಸವಿತಾ ಕಲ್ಮಠ ಎನ್ನುವ ಹೆಣ್ಣು ಮಗಳೊಬ್ಬಳು ಸಭೆಯಲ್ಲಿ ಧುತ್ತನೆ ಪ್ರವೇಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಳು.
ಆರಂಭದಲ್ಲಿ ಅವಳೇ ಹೇಳಿಕೊಂಡAತೆ ನಾನು ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಇಲ್ಲಿನ ಸಭೆಯ ಲೈವ್ ವಿಡಿಯೋ ವಿಸ್ಮಯ ಟಿವಿ ಮೂಲಕ ವೀಕ್ಷಿಸುತ್ತಿದ್ದಾಗ,ಬೆಳಿಗ್ಗೆಯಿಂದ ಚಹಾ ಊಟ ತಿಂಡಿ ವಿರಾಮ ಏನು ಇಲ್ಲದೇ ಕುಳಿತಿರುವ ಮೀನುಗಾರ ಮಹಿಳೆಯರು ಮತ್ತಿತರರ ಕಣ್ಣೀರು ನೋಡಿದೆ. ಹಾಗಾಗಿ ನಾನು ನಮ್ಮ ಊರಿನವರ ಜೊತೆ ಎದ್ದು ಬಂದು ಇಲ್ಲಿ ಮಾತನಾಡುತ್ತಿರುವೆ. ಜೀವನದಲ್ಲಿ ನಾನು ಸಾಕಷ್ಟು ನೊಂದಿರುವೆ ಎಂದು ನಿರರ್ಗಳವಾಗಿ ಮಾತು ಮುಂದುವರಿಸುತ್ತಾ,ನಾನು ಐದನೇ ಕ್ಲಾಸ್ ಫೇಲಾಗಿರಬಹುದು, ಆದರೆ ನಮ್ಮ ಕನ್ನಡ ಭಾಷೆ ದೆಹಲಿ ಮಟ್ಟದಲ್ಲಿ ಅರ್ಥವಾಗದಿದ್ದರೆ, ನಾನು ಅಲ್ಲಿ ಹೋಗಿ ಹಿಂದಿಯಲ್ಲಿಯೂ ಮಾತನಾಡುವೆ.
ಕೇವಲ ಕನ್ನಡವನ್ನು ಅಷ್ಟೇ ಅಲ್ಲದೇ, ಹಿಂದಿ ,ಕೊಂಕಣಿ, ಮರಾಠಿ, ತಮಿಳು , ತೆಲುಗು ಭಾಷೆಗಳಲ್ಲಿಯೂ ಬೇಕಾದರೂ ಮಾತನಾಡಬಲ್ಲೆ ಎಂದು,ಮೀನುಗಾರರು ಬಡ ರೈತರು, ಕೂಲಿಕಾರರು ಮತ್ತಿತರರು ಬಂದರು ಯೋಜನೆಯಿಂದ ಬೀದಿ ಪಾಲಾಗುವುದನ್ನು ತಪ್ಪಿಸಬೇಕು ಎಂದು ತಮ್ಮ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಹಳ್ಳಿ ಹೆಣ್ಣು ಮಗಳ ಈ ದ್ದಿಟ್ಟ ನಡೆ ನುಡಿಗಳು ಹಲವರ ರೋಮಾಂಚನ ಗೊಳಿಸಿತ್ತು. ವಿಸ್ಮಯ ವಾಹಿನಿಯ ಲೈವ್ ವಿಡಿಯೋ ತುಣುಕುಗಳು ಈ ಮೂಲಕ ಎಲ್ಲೆಡೆ ವೈರಲ್ ಆಗಿತ್ತು.
ಹಳ್ಳಿ ಹೆಣ್ಣು ಮಗಳ ಧೈರ್ಯದ ನುಡಿಗಳು , ಬೆಳೆಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶ ಮೂರ್ತಿ ವಿಸರ್ಜನೆಯಂತ ಭವ್ಯ ಮೆರವಣಿಗೆಯಲ್ಲಿಯೂ ಕಂಡು ಬಂದಿದ್ದು,ಅಲ್ಲಿನ ಸಹೃದಯಿ ಕಲಾವಿದ ಸವಿತಾ ಕಲ್ಮಠರ ವೇಷ ತೊಟ್ಟು ,ಅಂದಿನ ಅವಳ ಮನದಾಳದ ಮಾತು ರೋಷ ಅವೇಷಗಳ ಧ್ವನಿ ಮತ್ತೊಮ್ಮೆ ಪ್ರತಿದ್ವನಿಸುವಂತೆ ಮಾಡಿದರೆ,ತಳಗದ್ದೆ ಊರ ನಾಗರಿಕರು ಸ್ವಯಂ ಪ್ರಜ್ಞೆಯಿಂದ ತಮ್ಮ ಜನಾಂಗದ ತಮ್ಮ ನೆರೆಹೊರೆಯವರ ನೋವು ಮತ್ತು ಕಷ್ಟಗಳಿಗೆ ನಾವು ಧ್ವನಿಯಾಗುತ್ತೇವೆ ಎಂಬ ಸಂದೇಶ ನೀಡಿದಂತಿತ್ತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ