ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲೂಕಾ ಘಟಕ ಉದ್ಘಾಟನೆ : ಸಂಘದ ಕಾರ್ಡ್ ಬಿಡುಗಡೆ
ಯುವ ಜನರಲ್ಲಿ ಮಾನಸಿಕ ಸನ್ನಡತೆಗೆ ಜಾಗೃತಿ ಕಾರ್ಯಕ್ರಮ

ಅಂಕೋಲಾ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ( ಕರ್ನಾಟಕ ವರ್ಕಿಂಗ್ ಜರ್ನಲಿಸ್ಟ್ಸ್ ವಾಯ್ಸ್ ) ಸಂಘಟನೆಯ ಅಂಕೋಲಾ ತಾಲೂಕು ಘಟಕದ ಉದ್ಘಾಟನಾ ಸಮಾರಂಭ, ಸದಸ್ಯರ ಕಾರ್ಡ್ ಬಿಡುಗಡೆ ಮತ್ತು ವಿದ್ಯಾರ್ಥಿ ಯುವಜನರಲ್ಲಿ ಮಾನಸಿಕ ಸನೃಢತೆಗೆ ಜಾಗೃತಿ ಮೂಡಿಸುವ ಉಪನ್ಯಾಸ ಕಾರ್ಯಕ್ರಮ ಸೆಪ್ಟೆಂಬರ್ 12ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಯಿಂದ ಪಟ್ಟಣದ ಶಾಂತಾದುರ್ಗಾ ದೇವಸ್ಥಾನದ ಹತ್ತಿರವಿರುವ ಪಿ.ಎಂ.ಜ್ಯೂನಿಯರ್ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾಭವನದಲ್ದಿ ನಡೆಯಲಿದೆ.
ಸಮಸ್ಯೆಗಳಿಗೂ ಸಾವಿದೆ, ಆತ್ಮಹತ್ಯೆ ಆಯ್ಕೆಯೇ ಅಲ್ಲ
ಅಂಕೋಲಾ ತಹಸೀಲ್ದಾರ ಡಾ.ಚಿಕ್ಕಪ್ನ ನಾಯಕ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಕಾರ್ಡ್ ಬಿಡುಗಡೆ ಮಾಡಲಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ ನಾಯಕ ಸಮಸ್ಯೆಗಳಿಗೂ ಸಾವಿದೆ, ಆತ್ಮಹತ್ಯೆ ಆಯ್ಕೆಯೇ ಅಲ್ಲ ಎನ್ನುವ ವಿಷಯದ ಕುರಿತಂತೆ ಉಪನ್ಯಾಸ ನೀಡಲಿದ್ದಾರೆ.
ಸರ್ವರಿಗೂ ಆದರದ ಆಮಂತ್ರಣ
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಕರಾವಳಿಯ ಉಸ್ತುವಾರಿ ಕುಮಾರ ನಾಯ್ಕ, ಜಿಲ್ಲಾಧ್ಯಕ್ಷ ನಾಗರಾಜ ದೈವಜ್ಞ ಅವರ ಗೌರವ ಉಪಸ್ಥಿತಿ ಇರಲಿದೆ. ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಂಡು ಪ್ರೋತ್ಸಾಹಿಸುವಂತೆ
ಸಂಘಟನೆಯ ಅಂಕೋಲಾ ಘಟಕದ ಅಧ್ಯಕ್ಷ ಮಾರುತಿ ಹರಿಕಂತ್ರ, ಕಾರ್ಯದರ್ಶಿ ಕಿರಣ ಗಾಂವಕರ್ ಮತ್ತು ಸರ್ವ ಸದಸ್ಯರು ಕೋರಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ