
ಅಂಕೋಲಾ : ತಾಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ನೆಲೆ ನಿಂತಿರುವ ಅಸಂಖ್ಯ ಭಕ್ತರ ಆರಾಧ್ಯ ದೇವಿ ಶ್ರೀ ನಾಗಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ದಿನಾಂಕ :22-09-2025 ಸೋಮವಾರ ದಿಂದ 02-10-2025 ಗುರುವಾರ ದವರೆಗೆ 11 ದಿನಗಳ ಕಾಲ 34ನೇ ವರ್ಷದ ದಸರಾ ಮಹೋತ್ಸವ ಅತಿ ವಿಜೃಂಭಣೆಯಿಂದ ನಡೆಯಿಲಿದೆ.

ನಿತ್ಯ ವಿಶೇಷ ಪೂಜೆ
ದಿನಾಂಕ :22-09-2025ರ ಸೋಮವಾರ ಬೆಳಗ್ಗೆ ದೇವತಾ ಪೂಜೆಯೊಂದಿಗೆ ಘಟಸ್ಥಾಪನೆ ಹಾಗೂ ಮಧ್ಯಾಹ್ನ 4:00ಗಂಟೆಗೆ ದೇವಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳರಿಸಿ ಮೆರವಣಿಗೆ ಆರಂಬಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ದೊರೆಯಲಿದೆ. ನಿತ್ಯ ವಿಶೇಷ ಪೂಜೆ ನಡೆಯಲಿದ್ದು ದಿನಾಂಕ :26-09-2025ರ ಶುಕ್ರವಾರ ಮುತ್ತೈದೆರಿಂದ ಅರಸಿನ ಕುಂಕುಮ ಕಾರ್ಯಕ್ರಮ, ದಿನಾಂಕ :01-10-2025 ಬುಧವಾರ ಆಯುಧ ಪೂಜೆ, ದಿನಾಂಕ :02-10-2025 ಗುರುವಾರ ದಸರಾ ಮಹೋತ್ಸವ ನಡೆಯಲಿದೆ.
ತಾಯಿಗೆ ಉಡಿ ಸೇವೆ, ತುಲಾಭಾರ ಸೇವೆ
ಅಂದು ವಿವಿಧ ಧಾರ್ಮಿಕ ಸೇವೆ ಕಾರ್ಯಕ್ರಮ ನಡೆಯಲಿದ್ದು ತಾಯಿಗೆ ಉಡಿ ಸೇವೆ, ತುಲಾಭಾರ ಸೇವೆ ನಡೆಯುವುದು. ಅಂದು ಮದ್ಯಾಹ್ನ 2ಗಂಟೆಯಿಂದ ಸಂಜೆ 5ಗಂಟೆವರೆಗೂ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಲು ಶ್ರೀ ರೇಣುಕಾದೇವಿ ದೇವಸ್ಥಾನ ಅಭಿವೃದ್ಧಿ ಹಾಗೂ ಉತ್ಸವ ಸಮಿತಿ ಹಟ್ಟಿಕೇರಿಯವರು ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ