Big News
Trending

400 ಕೆ.ಜಿ ತೂಕದ ಬೃಹತ್ ಗಾತ್ರದ ಮೀನುಗಳು ಬಲೆಗೆ!

ಎರಡು ಮೀಟರ್‌ಗೂ ಹೆಚ್ಚು ಉದ್ದ
ಕ್ರೇನ್ ಸಹಾಯದಿಂದ ಮೀನನ್ನು ದಡಕ್ಕೆ ತಂದ ಮೀನುಗಾರರು

ಭಟ್ಕಳ : ಸಾಮಾನ್ಯವಾಗಿ ಮೀನುಗಾರಿಕೆಗೆ ತೆರಳಿದ ವೇಳೆ ಚಿಕ್ಕಗಾತ್ರದ ಮೀನುಗಳು ಬೀಳುವುದು ಸಾಮಾನ್ಯ.. ಹೆಚ್ಚೆಂದ್ರೆ 50 ರಿಂದ 100 ಕೆ.ಜಿ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತವೆ. ಆದ್ರೆ., ತಾಲೂಕಿನ ಬಂದರಿನಲ್ಲಿ ಬುಧವಾರ ರಾತ್ರಿ ಬೃಹತ್ ಗಾತ್ರದ ಮೀನುಗಳು ಮೀನುಗಾರರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.


ಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ, ರಾಜಶ್ರೀ, ಜಯದುರ್ಗ ಗಣೇಶ ಬೋಟುಗಳಿಗೆ ಬೃಹತ್ ಗಾತ್ರದ ತೊರ್ಕೆ ಮೀನುಗಳು ದೊರಕಿದ್ದು, ಒಂದೊoದು ಮೀನುಗಳು ಅಂದಾಜು 300 ರಿಂದ 400 ಕೆಜಿ ತೂಕವಿದೆ. ಸುಮಾರು 2 ಮೀಟರ್ ಉದ್ದದ ಮೀನು ಇದಾಗಿದ್ದು, ಈ ಮೀನುಗಳನ್ನು ಬೃಹತ್ ಕ್ರೇನಿನ ಸಹಾಯದಿಂದ ಮೇಲಕ್ಕೆತ್ತಲಾಗಿದೆ.


ಸಾಮಾನ್ಯವಾಗಿ ಮೀನುಗಾರರ ಬಲೆಗೆ ಬೀಳುವ ಮೀನುಗಳು 50 ರಿಂದ 100 ಕೆಜಿ ತೂಕ ಹೊಂದಿರುತ್ತದೆ. ಅಪರೂಪಕ್ಕೊಮ್ಮೆ ಇಂತಹ ಬೃಹತ್ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತದೆ. ವೈಜ್ಞಾನಿಕವಾಗಿ ರೇ ಫೀಶ್, ಮೆಂಟ್ ರೇ ಎಂದು ಕರೆಯಲ್ಪಡುವ ಈ ಮೀನು ಸಂಪೂರ್ಣ ಬೆಳವಣಿಗೆಯ ನಂತರ ಸುಮಾರು ನಾಲ್ಕು ಸಾವಿರ ಪೌಂಡ್ ತೂಕ ಹೊಂದಿರುತ್ತದೆ.

ಮೀನುಗಾರರು ಪ್ರಯಾಸಪಟ್ಟು ಈ ಮೀನನ್ನು ದಡಕ್ಕೆ ತಂದರು ಕ್ರೇನ್ ಸಹಾಯದಿಂದ ಮೇಲಕ್ಕೆ ತರಲಾಯಿತು. ಬೃಹತ್ ಗಾತ್ರದ ಮೀನನ್ನು ನೋಡಲು ಅಕ್ಕ ಪಕ್ಕದ ನೂರಾರು ಜನರು ಮುಗಿ ಬಿದ್ದರು.


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button