ಇದುವರೆಗೂ ಏಳು ಮನೆಗಳ ಕಳ್ಳತನ
ಒಂದು ಬೈಕ್‌ನಿಂದ ಸಿಕ್ಕಿತು ಆರೋಪಿಯ ಸುಳಿವು
ಮುಂಡಗೋಡ: ಎಲ್ಲರು ಮನೆಯಲ್ಲಿ ಮಲಗಿರುವಾಗ ಹಿಂಬದಿಯ ಬಾಗಿಲ ಮೂಲಕ ಒಳಹೋಗಿ ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಬಂಧಿತ ಆರೋಪಿ ತಡಸ ಪಟ್ಟಣದ ಕಮಲಾನಗರ ತಾಂಡಾದ ಕೃಷ್ಣಪ್ಪ ಉರ್ಫು ಕಿಟ್ಯಾ ಲಚ್ಚಪ್ಪ ಲಮಾಣಿ ಎಂದು ತಿಳಿದುಬಂದಿದೆ.
ಇತ್ತಿಚೆಗೆ ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಎರಡು ಮನೆಗಳ ಕಳ್ಳತನ ಮಾಡಿದ್ದ. ಈ ವೇಳೆ ಸಾರ್ವಜನಿಕರು ಆರೋಪಿಯನ್ನು ಬೆನ್ನು ಹತ್ತಿದ್ದರೂ ಅವರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆದರೆ ಬೈಕ್ ಅಲ್ಲಿಯೇ ಬಿಟ್ಟಿದ್ದ. ಈ ಜಾಡನ್ನೇ ಹಿಡಿದು ಹೊರಟ ಜಿಲ್ಲೆಯ ಎಸ್.ಪಿ., ಡಿ.ವೈ.ಎಸ್.ಪಿ ಹಾಗೂ ಇಲ್ಲಿನ ಸಿಪಿಐ ನೇತೃತ್ವದ ತನಿಖಾ ತಂಡಗಳು, ನೋಂದಣಿ ಇಲ್ಲದ ಬೈಕ್ ನ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಮೈನಳ್ಳಿ, ಉಗ್ಗಿನಕೇರಿ, ಚಿಗಳ್ಳಿ ಹಾಗೂ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ ಗ್ರಾಮದಲ್ಲಿ ಒಟ್ಟು 7 ಮನೆಗಳನ್ನು ಕಳ್ಳತನ ಮಾಡಿದ್ದಾನೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಾರವಾರ ಜಿಲ್ಲೆಗಳಲ್ಲಿ ಕಳ್ಳತನ ಮಾಡಿರುವುದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ. 2008ರಲ್ಲಿ ನವಲಗುಂದ ಠಾಣೆಯ ಕಳ್ಳತನ ಪ್ರಕರಣದಲ್ಲಿ ಈತನಿಗೆ ಶಿಕ್ಷೆ ಆಗಿದ್ದ ವಿಷಯ ಕೂಡಾ ಬೆಳಕಿಗೆ ಬಂದಿದೆ.
ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್,
ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.