ಉತ್ತರಕನ್ನಡದಲ್ಲಿ 27 ಮಂದಿಗೆ ಸೋಂಕು: 47 ಮಂದಿ ಗುಣಮುಖ

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 2 ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ದಿವಳ್ಳಿ ಹಾಗೂ ಪೋಸ್ಟಲ್ ಕಾಲೋನಿಯಲ್ಲಿ ತಲಾ ಒಂದೊAದು ಪ್ರಕರಣ ದಾಖಲಾಗಿದೆ. ದಿವಳ್ಳಿಯ 52 ವರ್ಷದ ಮಹಿಳೆ ಮತ್ತು ಪೋಸ್ಟಲ್ ಕಾಲೋನಿಯ 68 ವರ್ಷದ ವೃದ್ಧನಿಗೆ ಸೋಂಕು ದೃಡಪಟ್ಟಿದೆ. ಇಂದು 2 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1905 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಒಂದು ಕೇಸ್:

ಹೊನ್ನಾವರ: ತಾಲೂಕಿನಲ್ಲಿ ಇಂದು 1 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಹಳದೀಪುರದ 90 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ. ಇಂದು ಇಬ್ಬರು ಡಿಸ್ಚಾರ್ಜ ಆಗಿದ್ದು, ತಾಲೂಕಾ ಆಸ್ಪತ್ರೆಯಲ್ಲಿ ಒಬ್ಬರು, ವಿವಿಧ ಆಸ್ಪತ್ರೆಯಲ್ಲಿ 7 ಜನರು ಮತ್ತು ಮನೆಯಲ್ಲಿ 29 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿರಸಿಯಲ್ಲಿ ಮೂವರಿಗೆ ಸೋಂಕು

ಶಿರಸಿ: ತಾಲೂಕಿನಲ್ಲಿ ಗುರುವಾರ ಮೂರು ಕೊರೊನಾ ಕೇಸ್ ಪತ್ತೆಯಾಗಿದ್ದು, ನಾಲ್ವರು ಗುಣಮುಖಗೊಂಡಿದ್ದಾರೆ. ಸುಪ್ರಸನ್ನ ನಗರ, ಅಶೋಕ ನಗರ, ಗಾಂಧಿ ನಗರದಲ್ಲಿ ತಲಾ ಒಂದೊಂದು ಕೇಸ್ ದೃಢಪಟ್ಟಿದೆ.

ಜಿಲ್ಲೆಯಲ್ಲಿ 27 ಮಂದಿಗೆ ಕರೊನಾ

ಉತ್ತರ ಕನ್ನಡದಲ್ಲಿ ಇಂದು 27 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 13,346ಕ್ಕೆ ಏರಿಕೆಯಾದಂತಾಗಿದೆ. ಇಂದು ಒಟ್ಟೂ 47 ಸೋಂಕಿರು ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಾರವಾರ, ಅಂಕೋಲಾ ‌ಯಲ್ಲಾಪುರದಲ್ಲಿ ತಲಾ‌ ಮೂರು ಪ್ರಕರಣ ಕಾಣಿಸಿಕೊಂಡರೆ, ಹಳಿಯಾಳ, ಜೊಯಿಡಾದಲ್ಲಿ ತಲಾ ಒಬ್ಬರಿಗೆ, ಭಟ್ಕಳದಲ್ಲಿ ಏಳು, ಮುಂಡಗೋಡದಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

Exit mobile version