Kasarkod Eco Beach: ಹೇಗಿದೆ ನೋಡಿ ಸುಂದರ ಬೀಚ್

ಹೊನ್ನಾವರ: ಹಲವಾರು ವರ್ಷಗಳಿಂದ ಆಕರ್ಷಣಿಯ ಸ್ಥಳವಾಗಿರುವ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಇಕೋ ಬೀಚ್ ( Kasarkod Eco Beach) , ಬ್ಲೂಪ್ಲಾಗ್ ಸೌಲಭ್ಯ ಪಡೆದಮೇಲಂತು ಮತ್ತಷ್ಟು ಜನಾಕರ್ಷಣೆಯ ಕೇಂದ್ರವಾಗಿದೆ. ಪ್ರತಿ ರವಿವಾರ ಮತ್ತು ರಜಾದಿನಗಳಲಂತು ಜನಸಾಗರವೆ ಹರಿದು ಬರುತ್ತದೆ. ಈಗ ಇಲ್ಲಿನ ಅಂತರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಲ್ಲಿದೆ.

ಇಲ್ಲಿಗೆ ಬರುವ ಪ್ರವಾಸಿಗರಿಗೆ ಮಕ್ಕಳಿಗಾಗಿ ಜಾರುಬಂಡಿ ಜೋಕಾಲಿ ವಿಶ್ರಾಂತಿ ಪಡೆಯಲು ಆಸನದ ವ್ಯವಸ್ಥೆ ಸ್ನಾನಗ್ರಹ ವ್ಯವಸ್ಥೆ ಕಲ್ಪಿಸಲಾಗಿದೆ.. ಇದಕ್ಕೆ ಹೋಂದಿಕೋಂಡು ಸಮುದ್ರತಿರದಲ್ಲಿ ಬಣ್ಣ-ಬಣ್ಣದ ಇಂಟರಲಾಕ್ ಅಳವಡಿಸಿ ಪುಟ್‍ಬಾತ್ ನಿರ್ಮಿಸಿ ಬೀದಿದೀಪ ವ್ಯವಸ್ಥೆ ಮಾಡಲಾಗಿದೆ.

ಪ್ಲೈವುಡ್ ಮತ್ತು ಬಿದಿರಿನಿಂದ 6 ಶೇಡ್ ಗಳನ್ನು ನಿರ್ಮಿಸಲಾಗಿದ್ದು ಅದರಲ್ಲಿ ಪ್ರಥಮ ಚಿಕಿತ್ಸೆಗೆ , ಕುಡಿಯುವ ನೀರಿಗೆ, ಶೌಚಾಲಯ, ಸ್ನಾನಗ್ರಹ ನಿರ್ಮಿಸಲಾಗಿದೆ. ಸಮುದ್ರದಲ್ಲಿ ಸ್ನಾನಮಾಡಿ ಬಂದವರಿಗೆ ಸಿಹಿನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೋಂದೆಡೆ ಮಕ್ಕಳಿಗಾಗಿ ಬಿದಿರು ಮತ್ತು ಬೇತ್ತ ಹುಲ್ಲುಗಳನ್ನು ಬಳಸಿ 4 ಪ್ಯಾರಾಗೋಲಾವನ್ನು ನಿರ್ಮೀಸಲಾಗಿದೆ. ಮಕ್ಕಳಿಗೆ ಜೋಕಾಲಿ ಜಾರುಬಂಡಿ ಇಡಲಾಗಿದೆ. ಸ್ವಚತೆ ನಿರ್ವಹಣೆಗೆ 38 ಸಿಬ್ಬಂದಿಗಳನ್ನು ನೇಮಿಸಲಾಗಿದೆ.

Kasarkod Eco Beach: ಈ ಕುರಿತ ಮಾಹಿತಿ ನೀಡುವ ವಿಡಿಯೋ ಇಲ್ಲಿದೆ ನೋಡಿ

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version