Focus News
Trending

ಉತ್ತರಕನ್ನಡದಲ್ಲಿ ಇಂದು 37 ಕೇಸ್: 54 ಗುಣಮುಖ

ಕಾರವಾರ : ಉತ್ತರ ಕನ್ನಡದಲ್ಲಿ ಇಂದು 37 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರ 11, ಅಂಕೋಲಾ 4,ಭಟ್ಕಳ 6, ಶಿರಸಿ 3, ಸಿದ್ದಾಪುರ 1, ಯಲ್ಲಾಪುರ 1, ಹಳಿಯಾಳ 2 ದಲ್ಲಿ ಎರಡು ಪ್ರಕರಣ ಪತ್ತೆಯಾಗಿದೆ. ಜೊಯಿಡಾ‌,‌ಮುಂಡಗೋಡು‌ಮತ್ತು ಹೊನ್ನಾವರದಲ್ಲಿ ಯಾವುದೇ ಕೇಸ್ ಕಂಡುಬಂದಿಲ್ಲ.

ಇದೇ ವೇಳೆ ಇಂದು 54 ಜನರ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಾರವಾರ 6, ಅಂಕೋಲಾ 7, , ಭಟ್ಕಳ 3, ಶಿರಸಿ 13, ಸಿದ್ದಾಪುರ 4, ಯಲ್ಲಾಪುರ 13, ಹಳಿಯಾಳ 6, ಜೋಯ್ಡಾ 2 ಜನರು ಸೇರಿ 54 ಜನ‌ ಮನೆಗೆ ಮರಳಿದ್ದಾರೆ.

ಕುಮಟಾದಲ್ಲಿ ಏಳು ಪಾಸಿಟಿವ್:

ಕುಮಟಾ: ತಾಲೂಕಿನಲ್ಲಿ ಇಂದು ಏಳು ಕರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ತಾಲೂಕಿನ ಹೆಗಡೆ, ದೀವಗಿ, ಚಿತ್ರಗಿ, ಕೊಡ್ಕಣಿ, ಕತಗಾಲ, ಹೊಳೆಗದ್ದೆ ಭಾಗದಲ್ಲಿ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಹೆಗಡೆಯ 21 ವರ್ಷದ ಯುವಕ, 50 ವರ್ಷದ ಪುರುಷ, ಚಿತ್ರಗಿಯ 20 ವರ್ಷದ ಯುವಕ, ಕೊಡ್ಕಣಿಯ 70 ವರ್ಷದ ವೃದ್ಧ, ಕತಗಾಲದ 20 ವರ್ಷದ ಯುವತಿ, ದೀವಗಿಯ 27 ವರ್ಷದ ಮಹಿಳೆ ಹಾಗೂ ಹೊಳೆಗದ್ದೆಯ 32 ವರ್ಷದ ಮಹಿಳೆಯಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇಂದು 7 ಹೊಸ ಕರೊನಾ ಪ್ರಕರಣಗಳು ದಾಖಲಾದ ಬೆನ್ನಲ್ಲೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,934 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸದ ಕಾರವಾರ

Back to top button