ಉತ್ತರಕನ್ನಡದಲ್ಲಿ 29 ಕೇಸ್: 27 ಮಂದಿ ಗುಣಮುಖ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 29 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ 27 ಜನ ಇಂದು ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯರ 13,914ಕ್ಕೆ ಏರಿಕೆಯಾಗಿದೆ..ಜಿಲ್ಲೆಯಲ್ಲಿ ಈವರೆಗೆ ಕರೋನಾ ದಿಂದ 181 ಜನ ಸಾವು ಕಂಡಿದ್ದಾರೆ.

ಕುಮಟಾದಲ್ಲಿ ಒಂದು ಕೇಸ್:

ಕುಮಟಾ: ತಾಲೂಕಿನಲ್ಲಿ ಇಂದು 1 ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಹೆರವಟ್ಟಾದ 71 ವರ್ಷದ ವೃದ್ಧನಿಗೆ ಕರೊನಾ ಪಾಸಿಟಿವ್ ಬಂದಿದೆ. ಇಂದು 1 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1957 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ 1 ಪಾಸಿಟಿವ್:

ಹೊನ್ನಾವರ: ತಾಲೂಕಿನಲ್ಲಿಯೂ ಸಹ ಇಂದು 1 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕಳೆದ 3,4 ದಿನಗಳಿಂದ ಹೊನ್ನಾವರ ತಾಲೂಕಿನಲ್ಲಿ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಇಂದು ಗ್ರಾಮಿಣ ಬಾಗವಾದ ಮಾವಿನಕುರ್ವಾದ 34 ವರ್ಷದ ಪುರುಷನಿಗೆ ಸೋಂಕು ತುಗುಲಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 3 ಜನರು ಇಂದು ಡಿಸ್ಚಾರ್ಜ್ ಆಗಿದ್ದಾರೆ.

ಶಿರಸಿಯಲ್ಲಿಂದು 5 ಕೇಸ್ ದೃಢ:

ಶಿರಸಿ: ನಗರದಲ್ಲಿ ಶನಿವಾರ 5 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಮೂವರು ಗುಣಮುಖರಾಗಿದ್ದಾರೆ.
ಇಂದು ನಗರದ ಮರಾಠಿಕೊಪ್ಪದಲ್ಲಿ 4, ವಿಜಯ ನಗರದಲ್ಲಿ 1 ಕೇಸ್ ದೃಢವಾಗಿದೆ. ಈವರೆಗೆ 1583 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, 1549 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಯಲ್ಲಾಪುರದಲ್ಲಿಂದು ಐದು ಮಂದಿಗೆ ಪಾಸಿಟಿವ್:

ಯಲ್ಲಾಪುರ: ತಾಲೂಕಿನಲ್ಲಿ ಇಂದು ಐದು ಜನರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ಸಕ್ರಿ ಪ್ರಕರಣಗಳ ಸಂಖ್ಯೆ 30 ಕ್ಕೆ ಏರಿಕೆಯಾಗಿದೆ.
ಇಂದು ಗೋಳಿಗದ್ದೆಯಲ್ಲಿ 3, ಬೈಚಗೋಡ ಹಾಗೂ ಕಂಚಿನಮನೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ತಾಲೂಕಾವಾರು ವಿವರ ಇಲ್ಲಿದೆ

ವಿಸ್ಮಯ ನ್ಯೂಸ್ , ಕಾರವಾರ

Exit mobile version