Join Our

WhatsApp Group
Important
Trending

ಮನೆಗೆ ಬೆಂಕಿ: ಎಲ್ಲಾ ವಸ್ತುಗಳು ಅಗ್ನಿಗೆ ಆಹುತಿ

ಮನೆಗೆ ಬೆಂಕಿ: ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿ
ಬೆಂಕಿಗೆ ಮೇಲ್ಚಾವಣಿ ಕೂಡಾ ಕುಸಿತ
ಮನೆಯೊಡತಿಯ ಕಣ್ಣೀರು: ಮನೆಯರು ಕಂಗಾಲು

ಭಟ್ಕಳ: ಇಲ್ಲಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ವೆಂಕ್ಟಾಪುರ ಕಂಡೆಕೊಡ್ಲ ದಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಮನೆಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಲಕ್ಷಾಂತರ ರೂ.ನಷ್ಟ ಸಂಭವಿಸಿದ ಘಟನ ನಡೆದಿದೆ.. ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಪಾತ್ರೆ, ದಿನಸಿ ಸಾಮಾನುಗಳು, ಇಲೆಕ್ಟ್ರಾನಿಕ್ ವಸ್ತುಗಳ ಜೊತೆಯಲ್ಲಿ ಮನೆಯಲ್ಲಿದ್ದ ಬಟ್ಟೆ ಬರೆಗಳು,ಚಿನ್ನದ ಸರ್,ಕಿವಿ ಓಲೆ,ನಗದು 25 ಸಾವಿರ ಹಣ ಸೇರಿದಂತೆ ದಿನಬಳಕೆ ವಸ್ತುಗಳೂ ಸುಟ್ಟು ಕರಕಲಾಗಿದೆ. ಅಲ್ಲದೆ ಮನೆಯ ಮೇಲ್ಛಾವಣಿ ಕೂಡಾ ಸುಟ್ಟು ಕುಸಿದಿದ್ದು ಮನೆಯವರು ತಮ್ಮ ಸೂರು ಕಳೆದುಕೊಂಡಿದ್ದಾರೆ.


ಪದ್ಮಾವತಿ ಬಡಿಯಪ್ಪ ನಾಯ್ಕ ಎನ್ನುವವರಿಗೆ ಸೇರಿದ ಮನೆಯಾಗಿದ್ದು ಬೆಂಕಿಯ ಕೆನ್ನಾಲಿಗೆಗೆ ಮನೆ ಆಹುತಿಯಾಗಿ ಲಕ್ಷಾಂತರ ರೂ.ನಷ್ಟವಾಗಿದೆ. ಒಟ್ಟೂ 2 ಲಕ್ಷದ 75 ಸಾವಿರ ರೂಪಾಯಿ ಹಾನಿ ಯಾಗಿದ್ದು ವಿದ್ಯುತ್ ಶಾರ್ಟ್ ಸಕ್ರ‍್ಯೂಟ್ ಯಿಂದ ಮನೆಗೆ ಬೆಂಕಿ ತಾಗಿರಬಹುದು ಎಂದು ಶಂಕಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದ್ದು, ಸ್ಥಳಕ್ಕೆ ಜಾಲಿ ಗ್ರಾಮ ಲೆಕ್ಕಾಧಿಕಾರಿ ಗಿರೀಶ ರಣದೇವು, ಗ್ರಾಮ ಸಹಾಯಕರಾದ ಮಾಸ್ತಯ್ಯ ನಾಯ್ಕ,ವಾಸು ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button