ಬೀಟ್ ವ್ಯವಸ್ಥೆ ಮತ್ತಷ್ಟು ಜನಸ್ನೇಹಿ: ನೂತನ ಡಿಎಸ್ಪಿ

ಶಿರಸಿ: ಪೊಲೀಸ್ ಠಾಣೆಗಳಿಗೆ ಹೆಚ್ಚಾಗಿ ಬರುವವರು ಬಡವರೇ ಆಗಿರುವುದರಿಂದ ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿರಬೇಕು. ಅಧಿಕಾರಿಗಳು ಜನರೊಂದಿಗೆ ಸೌಜನ್ಯ ಹಾಗೂ ವಿನಯದಿಂದ ರ‍್ತಿಸಬೇಕು ಎಂದು ಶಿರಸಿ ನೂತನ ಡಿಎಸ್ಪಿ ರವಿ ನಾಯ್ಕ ಹೇಳಿದರು.ಶಿರಸಿಯ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ರಸ್ತೆ ಅಪಘಾತಗಳನ್ನು ತಪ್ಪಿಸಲು ಕೆಟ್ಟು ನಿಂತ ವಾಹನಗಳ ಸುತ್ತ ರೇಡಿಯಮ್ ಸ್ಟಿಕ್ಕರ್ ಅಂಟಿಸುವ ವ್ಯವಸ್ಥೆ ಮಾಡಲಾಗುವುದು. ಬೀಟ್ ಪೊಲೀಸಿಂಗ್ ವ್ಯವಸ್ಥೆಗಳನ್ನ ಜನಸ್ನೇಹಿಯಾಗಿಸಲು ಗ್ರಾಮಗಳಲ್ಲಿ ರಾತ್ರಿ ವೇಳೆ ಬೀಟ್ ಪೊಲೀಸ್ ಉಳಿಯುವ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದೇವೆ.

ಒಂಟಿ ಮನೆಗಳಿದ್ದಲ್ಲಿ ಅಲ್ಲಿನ ಮನೆಯ ಬಾಗಿಲಿನ ಒಳಗಡೆ ಭಾಗಕ್ಕೆ ಆಯಾ ಗ್ರಾಮದ ಬೀಟ್ ಪೊಲೀಸ್ ಚಿತ್ರ, ಅವರ ಪರಿಚಯ ಹಾಗೂ ಮೊಬೈಲ್ ನಂಬರ್ ಇರುವ ಸ್ಟಿಕ್ಕರ್ ಗಳನ್ನ ಮಾಡಿ ಅಂಟಿಸಲಾಗುತ್ತದೆ. ಇದರಿಂದ ಕಳ್ಳರು ದಾಳಿ ಮಾಡಿದ ವೇಳೆ ಮನೆಯವರಿಗೆ ಬೀಟ್ ಪೊಲೀಸ್ ನೊಡನೆ ಸಂಪರ್ಕಸಾಧಿಸಲು ಸುಲಭವಾಗುತ್ತದೆ ಎಂದರು.

ಗಾಂಜಾ ಮಾರುವವರನ್ನ ಹಿಡಿದು ಶಿಕ್ಷೆಗೆ ಒಳಪಡಿಸಲಾಗುವುದು. ಅದೇ ರೀತಿ ರಸ್ತೆ ನಿಯಮಗಳ ಉಲ್ಲಂಘನೆಯಾದಲ್ಲಿ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು ಎಂದರು. ಈಗೀಗ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕ್ರೈಮ್ ಗಳ ಅರಿವಿಲ್ಲದ ಕೆಲವೆಡೆ ಕ್ರೈಮ್ ಕುರಿತಾದ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ. ಕಾಲೇಜುಗಳು ಆರಂಭವಾದ ಮೇಲೆ ವಿದ್ಯಾರ್ಥಿಗಳಿಗೂ ಕೂಡ ಇದರ ಬಗ್ಗೆ ಅರಿವು ಮೂಡಿಸುತ್ತೇವೆ ಅಂದರು. ರೌಡಿಸಂ ಅಂದರೆ ಮೊದಲಿನಿಂದಲೂ ನನಗೆ ಅರ‍್ಜಿಯ ವಿಷಯವಾಗಿದೆ. ಯಾರಾದರೂ ಇಂತಹ ಕಾರ್ಯಕ್ಕೆ ಇಳಿದರೆ ಅವರನ್ನ ಮಟ್ಟ ಹಾಕುತ್ತೇವೆ ಅಂತ ರೌಡಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ವಿಸ್ಮಯ ನ್ಯೂಸ್, ಶಿರಸಿ

Exit mobile version