Important
Trending

ಕುಮಟಾ, ಹೊನ್ನಾವರಲ್ಲಿ ಎಷ್ಟು ನಾಮಪತ್ರ ಸ್ವೀಕೃತವಾಗಿದೆ ನೋಡಿ: ಎಲ್ಲಾ ಗ್ರಾ.ಪಂನ ನಾಮಪತ್ರ ಸಲ್ಲಿಕೆ ವಿವರ

ಹೊನ್ನಾವರ ತಾಲೂಕಿನಲ್ಲಿ 1,072 ನಾಮಪತ್ರ ಸಲ್ಲಿಕೆ
ಕುಮಟಾದಲ್ಲಿ 1068 ನಾಮಪತ್ರ ಸ್ವೀಕೃತ
ಯಾವ ಪಂಚಾಯತ್ ನಲ್ಲಿ ಎಷ್ಟೆಷ್ಟು ಉಮೇದುವಾರಿಕೆ ಸಲ್ಲಿಕೆ?

ಕುಮಟಾ: ಡಿಸೆಂಬರ್ 22ರ ಮಂಗಳವಾರದoದು ನಡೆಯಲಿರುವ ಗ್ರಾಮ ಪಂಚಾಯತ ಚುನಾವಣೆಯು ರಂಗೇರುತ್ತಿದ್ದು, ಭಾರಿ ಕುತೂಹಲ ಕಾರಿಯಾಗಿರುವ ಈ ಚುನಾವಣೆಗೆ ದಿನಗಣನೆಯು ಸಹ ಪ್ರಾರಂಭವಾಗಿದೆ. ಕುಮಟಾ ತಾಲೂಕಿನಲ್ಲಿ ಒಟ್ಟು 22 ಗ್ರಾಮ ಪಂಚಾಯತ್‌ನ 96 ವಾರ್ಡ್ಗಳಿದ್ದು, 321 ಸದಸ್ಯ ಸ್ಥಾನಗಳಿವೆ. ಡಿಸೆಂಬರ್ 11 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಡಿಸೆಂಬರ್ 7 ರಿಂದ 11 ವರೆಗೆ ಒಟ್ಟು 1068 ನಾಮಪತ್ರ ಸ್ವೀಕೃತವಾಗಿದೆ. ಅಂತೆಯೇ ಡಿಸೆಂಬರ್ 14 ನಾಮಪತ್ರವನ್ನು ಹಿಂದಕ್ಕೆ ತೆಗೆದುಕೊಳ್ಳುವುದಕ್ಕೆ ಕೊನೆಯ ದಿನವಾಗಿದ್ದು 14 ರ ವರೆಗೆ ಯಾವ ರೀತಿಯ ಬದಲಾವಣೆ ಕಂಡುಬರಲಿದೆ ಎಂಬುದನ್ನ ಕಾದುನೋಡಬೇಕಿದೆ. ಕುಮಟಾದಲ್ಲಿ ಗ್ರಾಮ ಪಂಚಾಯತಿವಾರು ಸಲ್ಲಿಕೆಯಾದ ನಾಮಪತ್ರಗಳ ವಿವರ ಹೀಗಿದೆ.

ಕುಮಟಾದಲ್ಲಿ ಗ್ರಾಮ ಪಂಚಾಯತಿವಾರು ಸಲ್ಲಿಕೆಯಾದ ನಾಮಪತ್ರಗಳ ವಿವರ

ಹೊನ್ನಾವರ ತಾಲೂಕಿನಲ್ಲಿ 1,072 ನಾಮಪತ್ರ ಸಲ್ಲಿಕೆ

ಹೊನ್ನಾವರ; ತಾಲೂಕಿನಲ್ಲಿ ಲೋಕಲ್ ಫೈಟ್ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಇದೀಗ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದೆ. 1,072 ನಾಮಪತ್ರಗಳು ಸಲ್ಲಕೆಯಾಗಿದ್ದು ಸೋಮವಾರದವರೆಗೆ ವಾಪಸ್ಸು ಪಡೆಯಲು ಅವಕಾಶವಿದೆ. ಬಂಡಾಯದ ಬಿಸಿ ಹೋಗಲಾಡಿಸಲು ಪ್ರಮುಖವಾಗಿ ಕಾಂಗ್ರೇಸ್ ಮತ್ತು ಬಿಜೆಪಿ ಯವರು ಆಪ್ತರ ಮೂಲಕ ಉಮೇದುವಾರಿಕೆ ವಾಪಸ್ಸು ಪಡೆಯಲು ಅಂತಿಮ ಕಸರತ್ತಿನಲ್ಲಿ ತೊಡಗಿದ್ದಾರೆ. ತಾಲೂಕಿನ 24 ಗ್ರಾಮ ಪಂಚಾಯತಿಯ 267 ಸ್ಥಾನಗಳಿಗೆ ಡಿಸೆಂಬರ್ 22ರಂದು ಮತದಾನ ನಡೆಯಲಿದೆ . ಸೋಮವಾರ ಎಷ್ಟು ಅಭ್ಯರ್ಥಿಗಳು ಕಣದಲ್ಲಿ ಇರಲಿದ್ದಾರೆ ಎನ್ನುವುದು ಕಾದು ನೋಬೇಕಾಗಿದೆ. ಗ್ರಾಮ ಪಂಚಾಯತಿವಾರು ಸಲ್ಲಿಕೆಯಾದ ನಾಮಪತ್ರಗಳ ವಿವರ ಹೀಗಿದೆ.

ಹೊನ್ನಾವರದಲ್ಲಿ ಗ್ರಾಮ ಪಂಚಾಯತಿವಾರು ಸಲ್ಲಿಕೆಯಾದ ನಾಮಪತ್ರಗಳ ವಿವರ

ಮೀಸಲು ಕ್ಷೇತ್ರವಾದ ತಾಲೂಕಿನ 18 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗದೇ ಇರುವುದರಿಂದ ಆಸ್ಥಾನಗಳು ಖಾಲಿ ಉಳಿದಿದೆ. ಆರಂಭದ ಎರಡು ದಿನ ನಾಮಪತ್ರ ಸಲ್ಲಿಕೆ ಕಡಿಮೆ ಇದ್ದರೂ ಕೊನೆಯ ಮೂರು ದಿನದಲ್ಲಿ ಒಂದು ಸಾವಿರಕ್ಕೂ ಅಧಿಕ ನಾಮಪತ್ರ ಸಲ್ಲಿಕೆಯಾಗಿರುವುದು ವಿಶೇಷವಾಗಿದೆ. ರವಿವಾರ ಮತ್ತು ಸೋಮವಾರ ಎಷ್ಟು ಅಭ್ಯರ್ಥಿಗಳು ನಾಮಪತ್ರ ಹಿಂದೆ ಪಡೆಯುತ್ತಾರೆ ಎಂದು ಕಾದೂ ನೋಡಬೇಕಾಗಿದೆ,

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button