
ಕುಮಟಾ : ಕುಮಟಾದ ದೀವಗಿ ಸಮೀಪ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಬೈಕ್ ಸವಾರನ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು ಈ ಕಾರಣದಿಂದ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಕುಮಟಾ ತಾಲ್ಲೂಕಿನ ದೀವಗಿ ಸಮೀಪ ಗೋಕರ್ಣದಿಂದ ಬರುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೋರ್ವನ ಬೈಕ್ ಗೆ ಲಾರಿ ಅಪ್ಪಳಿಸಿದ ಪರಿಣಾಮ ಬೈಕ್ ಸವಾರ ಬೈಕ್ ಜೊತೆಗೆ ಡಿವೈಡರ್ ಗೆ ತಾಗಿ ಸಾವನ್ನಪ್ಪಿರುವುದಾಗಿ ಪ್ರತ್ಯಕ್ಷದರ್ಶಿಗಳು ವಿಸ್ಮಯ ಟಿ.ವಿಗೆ ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಗೋಕರ್ಣದ ನಿವಾಸಿ ಮಧುಕೇಶ್ವರ ಶಾಂತಾರಾಮ ಸೂರಿ ಎಂದು ಗುರುತಿಸಲಾಗಿದೆ. ಕುಮಟಾಕ್ಕೆ ಕೆಲಸದ ನಿಮಿತ್ತ ಬರುವ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕೆಲಕಾಲ ಸ್ಥಳದಲ್ಲಿ ಗೊಂದಲ ಉಂಟಾಗಿದ್ದು ಪೊಲೀಸರು ಕೂಡಲೇ ಕ್ರಮ ವಹಿಸಿದ್ದಾರೆ.
ವಿಸ್ಮಯ ನ್ಯೂಸ್ ಕುಮಟಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಸಹಭಾಗಿತ್ವದ ಶಕ್ತಿಯೊಂದಿಗೆ ಮುನ್ನಡೆಯಲಿದೆ ವಿವೇಕನಗರ ವಿಕಾಸ ಸಂಘ
- ಹಾಲಕ್ಕಿ ಹಬ್ಬಕ್ಕೆ ಅಣಿಯಾಗುತ್ತಿರುವ ಬೆಳಂಬಾರ : ಜನಪದ ಕಲಾ ಪ್ರಕಾರಗಳ ವಿಶೇಷ ಸ್ಪರ್ಧೆ
- ದೊಡ್ಡ ದೇವರ ಮಹಿಮೆ ಅಪಾರ: ದೋಣಿಯಲ್ಲಿ ವಿರಾಜಮಾನವಾಗಿ ಜಲ ವಿಹಾರ
- ಮಂದಾರ ಎಲೈಟ್ ಫಂಕ್ಷನ್ ಹಾಲ್: ಬರ್ಥ್ ಡೇ ಪಾರ್ಟಿ , ಸಭೆ- ಸಮಾರಂಭ ಮುಂತಾದ ಕಾರ್ಯಕ್ರಮಗಳಿಗಾಗಿ ಬುಕ್ಕಿಂಗ್ ಮಾಡಿ
- ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ ಉಪನ್ಯಾಸ