Important
Trending

ಕಾರಿಗೆ ಹಿಂಬದಿಯಿಂದ ಗುದ್ದಿದ ಬಸ್: ರಸ್ತೆಯಲ್ಲಿ ಕಾರ್ಮಿಕನಿಗೆ ಬೈಕ್ ಡಿಕ್ಕಿ: ಐವರಿಗೆ ಗಂಭೀರ ಗಾಯ

ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಅಪಘಾತ
ಶಿರಸಿಯಲ್ಲಿ ಕಾರಿಗೆ ಹಿಂಬದಿಯಿಂದ ಗುದ್ದಿ ಬಸ್
ಕಾರವಾರದಲ್ಲಿ ರಸ್ತೆಯಲ್ಲಿದ್ದ ಕಾರ್ಮಿಕನಿಗೆ ಬೈಕ್ ಡಿಕ್ಕಿ
ಹೊನ್ನಾವರದಲ್ಲಿ ಡಿವೈಡರ್‍ಗೆ ಗುದ್ದಿಕೊಂಡ ಕಾರು

ಶಿರಸಿ: ಕಾರು ಹಾಗು ಸಾರಿಗೆ ಸಂಸ್ಥೆ ಬಸ್ ನಡುವೆ ಅಪಘಾತವಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಎಸಳೂರಿನಲ್ಲಿ ಬಳಿ ನಡೆದಿದೆ. ಶಿರಸಿ ಹುಬ್ಬಳಿ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿಗೆ ಹಿಂಬಂದಿಯಿಂದ ಬಸ್ ಡಿಕ್ಕಿಹೊಡೆದಿದೆ. ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಜಖಂಆಗಿದೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೊನ್ನಾವರ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್‍ಗೆ ಡಿಕ್ಕಿಯಾಗಿ ಜಖಂ ಆದ ಘಟನೆ ತಾಲೂಕಿನ ಹಳದೀಪುರ ಸಮೀಪ ನಡೆದಿದೆ. ಕುಮಟಾದಿಂದ ಹೊನ್ನಾವರ ಕಡೆ ಬರುತ್ತಿದ್ದ ಕಾರು ಹಳದೀಪುರ ಸಮೀಪ ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್‍ಗೆ ಡಿಕ್ಕಿಯಾಗಿದೆ. ಈ ದುರ್ಘಟನೆಯಲ್ಲಿ ಕಾರು ಚಾಲಕ ಮತ್ತು ಕಾರಿನಲ್ಲಿದ್ದವರು ಅಪಾಯಯದಿಂದ ಪಾರಾಗಿದ್ದಾನೆ.

ಕಾರವಾರ: ಗೋವಾಕಡೆಯಿಂದ ಕಾರವಾರಕ್ಕೆ ಕೆಟಿಮ್ ಬೈಕ್ ಮೂಲಕ ಬರುತ್ತಿದ್ದ ಬೈಕ್ ಸವಾರನೊಬ್ಬ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಡಿಕ್ಕಿಹೊಡೆದ ಪರಿಣಾಮ, ಕಾರ್ಮಿಕನ ಕಾಲು ಮುರಿದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು, ಬೈಕ್ ಸವಾರ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತದಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

[sliders_pack id=”1487″]

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button