Follow Us On

WhatsApp Group
Important
Trending

ದೇವಸ್ಥಾನ& ಅಡಿಕೆ ಕಳ್ಳತನ ಪ್ರಕರಣದ ಆರೋಪಿಗಳು ಅರೆಸ್ಟ್

ಎರಡು ಪ್ರಕರಣ ಬೇಧಿಸಿದ ಪೊಲೀಸರು
ಸಿಸಿಟಿವಿಯಲ್ಲಿ ಸಿಕ್ಕಿತು ಮಹತ್ವದ ಮಾಹಿತಿ

ಯಲ್ಲಾಪುರ: ಖತರ್ನಾಕ್ ಕಳ್ಳರ ತಂಡವೊoದನ್ನು ಪೊಲೀಸರು ಬಂಧಿಸಿದ್ದು, ಮೂವರು ಆರೋಪಿಗಳು ಈಗ ಕಂಬಿ ಎಣಿಸುತ್ತಿದ್ದಾರೆ. ಹೌದು, ಶಿಸ್ತಮುಡಿ ದೇವಸ್ಥಾನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತು ಅಡಿಕೆ ಕಳ್ಳತನ ಮಾಡಿದ್ದ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ದೇವಸ್ಥಾನ ನುಗ್ಗಿ ಕಾಣಿಕೆ ಹುಂಡಿ ಬೀಗ ಮುರಿದು ಹಣ ಮತ್ತು ಹಿತ್ತಾಳೆ ಪಾತ್ರೆಗಳನ್ನು ಈ ಆರೋಪಿಗಳು ಕದ್ದೊಯ್ದಿದ್ದರು. ಸಿ.ಸಿ ಕ್ಯಾಮರಾದಲ್ಲಿ ಸಿಕ್ಕಿರುವ ಆರೋಪಿತರ ಮಾಹಿತಿಯನ್ನಾದರಿಸಿ ಖಚಿತ ಮಾಹಿತಿಯ ಮೇರೆಗೆ ಆರೋಪಿತರನ್ನು ಬಂಧಿಸಲಾಗಿದೆ.

ಮನೆಯೊoದರ ಅಂಗಳದಲ್ಲಿ ಒಣಗಿಸಲು ಹಾಕಿದ್ದ ಒಂದು ಕ್ವಿಂಟಲ್ ಸಿಪ್ಪೆ ಸಹಿತದ ಹಸಿ ಅಡಿಕೆಯ ಕದ್ದಿದ್ದರು. ಈ ಸಂಬoಧ ಕೂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ದೇವಸ್ಥಾನದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ್ದರು. ಇದರಲ್ಲಿ ಹಲವು ಮಹತ್ವದ ಸುಳಿವು ಲಭ್ಯವಾಗಿತ್ತು. ಇದನ್ನು ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಎರಡೂ ಪ್ರಕರಣವನ್ನು ಬೇಧಿಸಿದ್ದಾರೆ.

ನಾಸಿರ್ ಅಮ್ಮದ್ ಸೈಯದ್ (32), ಚಾಮರಾಜ ಸೋಮಸೇಖರ ಕಬ್ಬೂರ (30), ಮೈಕಲ್ ಪ್ರಾನ್ಸಿಸ್ ಸಿದ್ದಿ (38) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ನಾಸಿರ್ ಅಮ್ಮದ್ ಸೈಯದ್ ವಿರುದ್ಧ ಹೊನ್ನಾವರ ಠಾಣೆಯಲ್ಲೂ ಕೂಡ ಇತನ ಮೇಲೆ ಪ್ರಕರಣ ದಾಖಲಾಗಿತ್ತು. ಡಿವೈಎಸ್ ಪಿ ರವಿ ನಾಯ್ಕ ಅವರ ಮಾರ್ಗದರ್ಶದ ಮೇರೆಗೆ ಯಲ್ಲಾಪುರ ಸಿಪಿಆಯ್ ಸುರೇಶ ಯಳ್ಳೂರು ಅವರ ನೇತ್ರತ್ವದಲ್ಲಿ ಪಿ ಎಸ್ ಐ ಮಂಜುನಾಥ ಗೌಡರ್ ಆನಂದ ಪಾವಸ್ಕರ್ ಹರಿಶ ನಾಯ್ಕ ,ಬಸವರಾಜ,ಗಜಾನನ ನಾಯ್ಕ,ಸಕ್ರಪ್ಪ ಬ್ಯಾಳಿ ಆರೋಪಿಯನ್ನು ದಸ್ತಗಿರಿ ವೇಳೆ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button