ಕಬ್ಬಿಣದ ರಾಡ್ ನಿಂದ ಬಾಗಲು ಮುರಿದರು
ಪೊಲೀಸರಿಗೆ ಲಭಿಸಿದೆ ಮಹತ್ವದ ಸುಳಿವು
ಕಾರವಾರ: ಚಿನ್ನದ ಅಂಗಡಿಯೊoದಕ್ಕೆ ಕನ್ನ ಹಾಕಿದ ದುಷ್ಕರ್ಮಿಗಳು, ಲಕ್ಷಾಂತರ ಮೌಲ್ಯದ ಬೆಳ್ಳಿಯ ಆಭರಣ ದೋಚಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಕಬ್ಬಿಣದ ರಾಡ್‌ನಿಂದ ಜ್ಯುವೆಲರಿಯ ಬಾಗಿಲು ಮುರಿದ ಕಳ್ಳರು, ಮೊದಲು ಅಂಗಡಿಯ ಒಳಗಿದ್ದ ಸಿಸಿ ಕ್ಯಾಮರಾವರನ್ನು ತಿರುಗಿಸಿದ್ದಾರೆ. ಅಲ್ಲದೆ ಅದಕ್ಕೆ ಬಟ್ಟೆ ಕಟ್ಟಿ ತಾವು ಮಾಡುತ್ತಿರುವ ದುಷ್ಕೃತ್ಯ ಸೆರೆಯಾಗದಂತೆ ನೋಡಿಕೊಂಡಿದ್ದಾರೆ. ಹೌದು, ಕಬ್ಬಿಣದ ರಾಡ್‌ನಿಂದ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರ ಗುಂಪು ಅಂಗಡಿಯಲ್ಲಿದ್ದ ಬೆಳ್ಳಿಯ ವಸ್ತುಗಳನ್ನು ದೋಚಿದೆ. ಆದರೆ, ಕಳ್ಳರು ಎಷ್ಟೆ ಚಾಲಾಕಿಯಾಗಿದ್ದರು, ಹಲವು ಮಹತ್ವದ ಸುಳಿವು ಪೊಲೀಸರಿಗೆ ಸಿಕ್ಕಿದೆ.
ಪೊಲೀಸರು ಅಂಗಡಿಯ ಸುತ್ತಮುತ್ತದ ಪ್ರದೇಶವನ್ನು ಪರಿಶೀಲಿಸಿದ್ದು, ಇಲ್ಲಿಯ ಸಿಸಿಟಿವಿ ಫುಟೇಜ್ ಕಲೆಹಾಕಿದ್ದಾರೆ. ಈ ವೇಳೆ ಕಳ್ಳರ ಕುರಿತು ಮಹತ್ವದ ಸುಳಿವು ದೊರೆತಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಬಾರ್ಡೋಲಿಯಲ್ಲಿ ಮೊಳಗಿದ ಕನ್ನಡದ ಕಹಳೆ : ಅಂಕೋಲಾದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ.
- ರಸ್ತೆ ಅಪಘಾತದಿಂದ ಬೆಳಕಿಗೆ ಬಂತೇ ಅಕ್ರಮ ಜಾನುವಾರು ಸಾಗಾಟ ? ಗೋಪೂಜೆ ದಿನದಂದೇ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಸುಮಾರು 15 ಜಾನುವಾರುಗಳ ರಕ್ಷಣೆ
- ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಲು ನಕಾರ: ಅಪ್ಸಾ ಹುಜೈಪಾ ವಿರುದ್ಧ ಆಕ್ರೋಶ
- ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರ ರಕ್ಷಣೆ
- ಅತಿವೇಗ ತಂದ ಅವಾಂತರ: ರಸ್ತೆ ಪಕ್ಕದ ಸಿಮೆಂಟ್ ಕಟ್ಟೆಗೆ ಡಿಕ್ಕಿಯಾಗಿ ಕಾರು ಚಾಲಕ ಸಾವು