
ಕ್ಷುಲ್ಲಕ ವಿಷಯಕ್ಕಾಗಿ ನಡೆಯಿತು ಜಗಳ
ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ಹೊನ್ನಾವರ: ಜಾಗದ ವಿಷಯಕ್ಕೆ ಸಂಬoಧಪಟ್ಟoತೆ ತಮ್ಮ ತನ್ನ ಸ್ವಂತ ಅಕ್ಕಮನ ಮೇಲೇಯೇ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಹೊನ್ನಾವರ ತಾಲೂಕಿನ ಗುಣವಂತೆ ಕೆರೆಮೂಲೆಯಲ್ಲಿ ನಡೆದಿದೆ. ಜಾಗಕ್ಕೆ ಸಂಬoಧಪಟ್ಟoತೆ ಈಗಾಗಲೇ ಪ್ರಕರಣವು ನ್ಯಾಯಾಲಯದಲ್ಲಿದ್ದು, ಈ ಜಾಗದಲ್ಲಿರುವ ಗೇರುಮರವನ್ನು ಕಡಿಯಲಾಗುತ್ತಿತ್ತು. ಇದನ್ನು ಕಂಡ ವೆಂಕಮ್ಮ ಶಿವಾನಂದ ದೇಶಭಂಡಾರಿ ಎನ್ನುವ ಮಹಿಳೆ ಪ್ರಶ್ನೆ ಮಾಡಿದಕ್ಕೆ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ಈ ವೇಳೆ ಸೋದರ ಶಶಿಕಾಂತ ಗಂಗಾಧರ ದೇಶಭಂಡಾರಿ ಮತ್ತು ಅವನ ಪತ್ನಿ ಶಶಿಕಲಾ ದೇಶಭಂಡಾರಿ ಎನ್ನುವವರು, ನೀನು ಯಾರು ನನ್ನನ್ನು ಕೇಳುವವರು ಎಂದು ಅವಾಚ್ಯ ಶಬ್ದಗಳಿಂದ ಬೈದು ಹಲೆ ನಡೆಸಿ, ಕಟ್ಟಿಗೆಯಿಂದ ತಲೆ ಹಾಗೂ ಕೈಗೆ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.
ಈ ಸಂಬoಧ ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ವೆಂಕಮ್ಮನ ಮನೆಯವರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಈ ಸಂದರ್ಭದಲ್ಲಿ ಹಲ್ಲೆಗೋಳಗಾದ ವೆಂಕಮ್ಮ ಶಿವಾನಂದ ದೇಶಭಂಡಾರಿ ಮಾತನಾಡಿ ತಮಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಸಾನ್ವಿ ಸ್ಕಿನ್ ಮತ್ತು ಲೇಸರ್ ಸೆಂಟರ್ ನಲ್ಲಿ ಉಚಿತ ಪಿಸಿಯೋಥೆರಪಿ ಶಿಬಿರ
- ಮೇ 21ರ ವರೆಗೆ ರೆಡ್ ಅಲರ್ಟ್ ಘೋಷಣೆ: ಭಾರೀ ಮಳೆಯ ಮುನ್ನೆಚ್ಚರಿಕೆ
- ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ: ವಸತಿ ಸೌಲಭ್ಯ, ಆಕರ್ಷಕ ಸಂಬಳ
- ನಾಟಿ ವೈದ್ಯ ಬೆಳಂಬಾರದ ಹನುಮಂತಗೌಡರ ಮನೆಯಲ್ಲಿ ಹತ್ತು ಸಾವಿರ ಧನ್ವಂತರಿ ಜಪ, ಹೋಮಹವನ: ಸಮಸ್ತ ಜನರ ಆರೋಗ್ಯ ಸೌಭಾಗ್ಯಕ್ಕೆ ಪ್ರಾರ್ಥನೆ
- ಉಗ್ರರ ದಾಳಿ ಬಳಿಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುತ್ತಿರುವ ವ್ಯಾಪಾರಿಗಳು, ರೈತರು: ವೀಳ್ಯದೆಲೆ ರಪ್ತು ಮಾಡುವುದಿಲ್ಲ ಎಂದ ಬೆಳೆಗಾರರು