Follow Us On

WhatsApp Group
Focus News
Trending

ತವರಿಗೆ ಹೋಗಿ ಮತ ಹಾಕಿ ಬರುತ್ತೆನೆಂದ ವಿವಾಹಿತ ಮಹಿಳೆ ನಾಪತ್ತೆ

ಕುಮಟಾ: ಮತ ಹಾಕಲು ತವರು ಮನೆಗೆ ತೆರಳಿದ್ದ ವಿವಾಹಿತ ಮಹಿಳೆಯೋರ್ವಳು ಮತದಾನದ ಬಳಿಕ ನಾಪತ್ತೆಯಾದ ಘಟನೆ ತಾಲೂಕಿನ ನಾಗೂರು ಸಮೀಪದ ಸಂತೇಗದ್ದೆಯಲ್ಲಿ ನಡೆದಿದೆ.

ಉಮಾ ಬೊಮ್ಮಯ್ಯ ನಾಯಕ ನಾಪತ್ತೆಯಾದ ಮಹಿಳೆಯಾಗಿದ್ದಾಳೆ. ಈಕೆಗೆ ಕಳೆದ ವರ್ಷ ಖಂಡಗಾರದ ಬೊಮ್ಮಯ್ಯ ನಾಯಕ ಅವರ ಜೊತೆ ವಿವಾಹ ಮಾಡಲಾಗಿತ್ತು. ಗ್ರಾ.ಪಂ ಚುನಾವಣೆಯ ನಿಮಿತ್ತ ತನ್ನ ತವರೂರಿಗೆ ಹೋಗಿ, ಮತ ಚಲಾಯಿಸಿದ ಉಮಾ, ಮರಳಿ ಅಂಕೋಲಾದ ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ತಿಳಿಸಿ ನಾಪತ್ತೆಯಾಗಿದ್ದಾಳೆ.

ಸಂಬಂಧಿಕರ ಮನೆಗೂ ಹೋಗದೇ, ಮರಳಿ ಗಂಡನ ಮನೆಗೂ ಬರದ ಕಾರಣ ಆಕೆಯನ್ನು ಸಾಕಷ್ಟು ಹುಡುಕಲಾಗಿದೆ. ಆದರೂ ಸಿಗದ ಕಾರಣ ಶುಕ್ರವಾರ ಕುಮಟಾ ಠಾಣೆಯಲ್ಲಿ ಆಕೆಯ ಸಂಬಂಧಿಕರು ದೂರು ದಾಖಲಿಸಿದ್ದಾರೆ.ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಕುಮಟಾ

Back to top button