Follow Us On

WhatsApp Group
Important
Trending

ಸತತ 9 ಬಾರಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಇತಿಹಾಸ

ಭಟ್ಕಳ: ಸತತ 9 ಬಾರಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವಲ್ಲಿ ಭಟ್ಕಳ ತಾಲೂಕಿನ ಬೆಂಗ್ರೆ ಪಂಚಾಯತನ ಹೆದ್ದಾರಿಮನೆಯ ವೆಂಕ್ಟಯ್ಯ ಬೈರುಮನೆ ಯಶಸ್ವಿಯಾಗಿದ್ದಾರೆ. ಇವರು ತಮ್ಮ 25ನೇ ವಯಸ್ಸಿನಲ್ಲಿ ಪ್ರಥಮ ಬಾರಿಗೆ 1978 ರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿಕೊಂಡು ಬರುತ್ತಿದ್ದಾರೆ. ಈಗಿನ ಗೆಲುವು ಸೇರಿ ಒಟ್ಟು ಸತತ 9 ಬಾರಿ ಗೆಲುವು ದಾಖಲಿಸಿದ್ದಾರೆ.

ಒಂದು ಬಾರಿ ಚೇರ್ಮೆನ್ ಹುದ್ದೆ ಹಾಗೂ 3 ಬಾರಿ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ. ಭಟ್ಕಳ ತಾಲೂಕಿನಲ್ಲಿ ಸತತ 9 ಬಾರಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಯಾರು ಕೂಡ ಗೆದ್ದಿಲ್ಲವಾಗಿದ್ದು, 9 ಬಾರಿ ವೆಂಕ್ಟಯ್ಯ ಬೈರುಮನೆ ಸತತವಾಗಿ ಗೆದ್ದು ಇತಿಹಾಸ ಬರೆದಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button