Follow Us On

WhatsApp Group
Important
Trending

ಎರಡು ತಲೆಗಳು & ಆರು ಕಾಲು ಹೊಂದಿದ ಕರು ಜನನ

ಯಲ್ಲಾಪುರ: ಎಮ್ಮೆಯೊಂದು ಎರಡು ತಲೆಗಳು ಹಾಗೂ ಆರು ಕಾಲುಗಳನ್ನು ಹೊಂದಿದ ಕರುವಿಗೆ ಜನ್ಮ ನೀಡಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಈ ಕರುವನ್ನು ನೋಡಲು ಸುತ್ತಮುತ್ತಲಿನ ಜನತೆ ಕುತೂಹಲದಿಂದ ಆಗಮಿಸಿದ್ದರು. ಹೌದು, ತಾಲೂಕಿನ ಮಂಚಿಕೇರಿ ಬಳಿಯ ಕೋಡಿಗದ್ದೆಯಲ್ಲಿ ಎಮ್ಮೆಯೊಂದು ಅಪರೂಪದ ಕರುವಿಗೆ ಜನ್ಮ ನೀಡಿದೆ. ಈ ಕರು ಎರಡು ತಲೆಗಳು ಹಾಗೂ ಆರು ಕಾಲುಗಳನ್ನು ಕರು ಹೊಂದಿತ್ತು. ಆದರೆ ಜನಿಸಿದ ತಕ್ಷಣ ಕರು ಮೃತಪಟ್ಟಿದೆ.


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button