Follow Us On

WhatsApp Group
Uttara Kannada
Trending

ಸಭೆಯಲ್ಲಿ ಗೊಂದಲ: ಕಚೇರಿ ಎದುರೆ ಮಲಗಿ ಆಕ್ರೋಶ: ರಾತ್ರಿಯಾದರೂ ಮುಂದುವರಿದ ಪ್ರತಿಭಟನೆ

ಅಪೂರ್ಣಗೊಂಡ ಪುರಸಭೆಯ ಸಾಮಾನ್ಯ ಸಭೆ.
ಬಿಜೆಪಿ ಸದಸ್ಯರ ಸಭಾತ್ಯಾಗ : ಕಾಂಗ್ರೆಸ್‍ನಿಂದ ತಡರಾತ್ರಿಯವರೆಗೂ ನಡೆದ ಪ್ರತಿಭಟನೆ
ಗ್ಲಾಸ ಸಪ್ಪಳ : ಕುತೂಹಲ ಮೂಡಿಸಿದ ಪಕ್ಷೇತರನ ನಡೆ !

ಅಂಕೋಲಾ : ಜನವರಿ 22ರ ಶುಕ್ರವಾರ ಪುರಸಭೆಯಲ್ಲಿ ನಡೆದ ಸಾಮಾನ್ಯಸಭೆ ಗೊಂದಲದ ಗೂಡಾಗಿ ಮಾರ್ಪಟ್ಟು, ಅಪೂರ್ಣಗೊಂಡರೆ, ಆಡಳಿತರೂಢ ಬಿಜೆಪಿ ಪಕ್ಷದ ಸದಸ್ಯರ ಸಭಾತ್ಯಾಗ, ವಿರೋಧ ಪಕ್ಷವಾದ ಕಾಂಗ್ರೆಸ್‍ನಿಂದ ಪ್ರತಿಭಟನೆ ಮತ್ತಿತರ ಸ್ವಾರಸ್ಯಕರ ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು.

ಗ್ಲಾಸ ಸಪ್ಪಳ ಸಭೆಯಲ್ಲಿ ಗೊಂದಲ : ಪೂರ್ವ ನಿಗದಿಯಂತೆ ಸಭೆ ಆರಂಭವಾಗಿ 11 ಅಂಶಗಳು ಚರ್ಚಿಸಲ್ಪಟ್ಟವು. ಮುಂದಿನ ಅವಧಿಗೆ ಸ್ಥಾಯೀ ಸಮಿತಿ ರಚನೆ ಕುರಿತು ಚುನಾವಣೆ ಆಯ್ಕೆ ಪ್ರಕ್ರಿಯೆ ಆರಂಭವಾಗುತಿದ್ದಂತೆ, ಪಕ್ಷೇತರ ಹಿರಿಯ ಸದಸ್ಯರೋರ್ವರು ಎದ್ದು ನಿಂತು ಕಾಂಗ್ರೆಸ್ ಬೆಂಬಲಿಸಿರುವುದು, ಕಾಂಗ್ರೆಸನ ಹಿರಿಯ ಸದಸ್ಯರೋರ್ವರು ಎದ್ದು ನಿಲ್ಲುವಾಗ ಎದುರುಗಡೆ ಇದ್ದ ಟೇಬಲ್ ಮೇಲೆ ಇಟ್ಟಿದ್ದ ನೀರಿನ ಗ್ಲಾಸ ಆಕಸ್ಮಿಕವಾಗಿ ಬಿತ್ತು ಎಂದು ಹೇಳಲಾಗಿದೆ. ಈ ಘಟನೆ ಉದ್ದೇಶ ಪೂರ್ವಕವಾಗಿ ಘಟಿಸಿದೆ ಎಂಬಂತೆ ಆರೋಪ-ಪ್ರತ್ಯಾರೋಪ ಕೇಳಿಬಂದ ಹಿನ್ನಲೆಯಲ್ಲಿ ಸಭೆಯಲ್ಲಿ ಗೌಜು ಗದ್ದಲ ಏರ್ಪಟ್ಟು, ಸಭೆ ಅಪೂರ್ಣಗೊಂಡು ಬಿಜೆಪಿ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿ ಹೊರ ನಡೆದರು.

ಪಕ್ಷೇತರ ಸದಸ್ಯನ ಬೆಂಬಲದಿಂದ ಬಿಜೆಪಿಗಿಂತ ಹೆಚ್ಚು ಸಂಖ್ಯೆಯ ಮತವುಳ್ಳ ಕಾಂಗ್ರೆಸ್ಸಿಗರು ಸ್ಥಾಯೀ ಸಮಿತಿ ಅಧ್ಯಕ್ಷ ಸ್ಥಾನದ ಅಧಿಕೃತ ಘೋóಷಣೆ ಮತ್ತಿತರ ಅಂಶಗಳನ್ನು ಸಭೆಯ ಠರಾವಿನಲ್ಲಿ ದಾಖಲಿಸುವಂತೆ ಪಟ್ಟು ಹಿಡಿದರು ಎನ್ನಲಾಗಿದ್ದು, ಸಭೆ ಮುಂದೂಡಲಾಗಿದೆ ಎನ್ನುವ ಪುರಸಭೆಯ ಮುಖ್ಯಾಧಿಕಾರಿ ಮಾತಿಗೆ ಒಪ್ಪದೇ ಪ್ರತಿಭಟನೆ ಹಾದಿ ಹಿಡಿದರು. ಸುದ್ದಿ ತಿಳಿದ ಪಕ್ಷದ ಮುಖಂಡರು ಕಾರ್ಯಕರ್ತರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ತಡರಾತ್ರಿಯವರೆಗೂ ಮುಂದುವರೆಸಿದರು. ಕೆಲವರು ಕಛೇರಿಯ ಎದುರೇ ಮಲಗಿ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸತೀಶ ಸೈಲ್, ಪುರಸಭೆಯ ಸದಸ್ಯರು, ಪಕ್ಷದ ಹಿರಿ-ಕಿರಿಯ ಮುಖಂಡರು ಪಾಲ್ಗೊಂಡಿದ್ದರು. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ತಹಶೀಲ್ದಾರ ಉದಯ ಕುಂಬಾರ ಸ್ಥಳಕ್ಕೆ ಆಗಮಿಸಿ, ಮುಖ್ಯಾಧಿಕಾರಿ, ಪ್ರತಿಭಟನಾಕಾರರು ಮತ್ತಿತರರ ಜೊತೆ ಬಹು ಹೊತ್ತು ಚರ್ಚಿಸಿದರು.

ಅಧ್ಯಕ್ಷರ ಸಹಿ ದೊರೆಯದೇ ಠರಾವು ಪ್ರತಿ ಪೂರ್ಣಗೊಳ್ಳದಿರುವುದರಿಂದ ರಾತ್ರಿ 10ರ ವರೆಗೂ ಸ್ಪಷ್ಟ ತೀರ್ಮಾನವಾಗದೇ, ಕಾಂಗ್ರೆಸಿಗರು ಪ್ರತಿಭಟನೆ ಮುಂದುವರೆಸಿದ್ದರು. ಸಿಪಿಐ ಕೃಷ್ಣಾನಂದ ನಾಯಕ, ಪಿಎಸ್‍ಐ ಈಸಿ ಸಂಪತ್ ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button