ಶಿರಸಿ: ಅಂಬೇಡ್ಕರ್ ಭವನದಲ್ಲಿ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಪ್ರಕಟಿಸಿದರು.
ತಾಲೂಕಿನ 32 ಗ್ರಾಮ ಪಂಚಾಯತಗಳಲ್ಲಿ 15 ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲಾತಿ, ಮತ್ತು ಕನಿಷ್ಟ ಮೀಸಲಾತಿಯನ್ನುಯನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಪರಿಶಿಷ್ಟ ಪಂಗಡದ ಯಾವುದೇ ಮೀಸಲಾತಿ ಇಲ್ಲದ ಕಾರಣ ಅವರಿಗೆ ನಿರಾಸೆಯಾಯಿತು. ಮೀಸಲಾತಿ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ ಕೃಷ್ಣಮೂರ್ತಿ, ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್ ಇನ್ನಿತರರು ಉಪಸ್ಥಿತರಿದ್ದರು.
ಮೀಸಲಾತಿ ವಿವರ ಹೀಗಿದೆ ನೋಡಿ: ಮೇಲಿನ ಓಣಿಕೇರಿ, ಇಟಗುಳಿ, ಜಾನ್ಮನೆ ಪಂಚಾಯತದ ಅಧ್ಯಕ್ಷ ಸ್ಥಾನಕ್ಕೆ ಅ ವರ್ಗ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಆಯ್ಕೆ ನಡೆದಿದೆ. ಬಿಸಲಕೊಪ್ಪ ಪಂಚಾಯತದಲ್ಲಿ ಅಧ್ಯಕ್ಷ ಸ್ಥಾನ ಅ ವರ್ಗ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ದೇವನಳ್ಳಿ ಪಂಚಾಯತಕ್ಕೆ ಅ ವರ್ಗದ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ, ಎಸ್‍ಸಿ ವರ್ಗದ ಮಹಿಳೆ, ಬಂಡಲ ಪಂಚಾಯತಕ್ಕೆ ಅ ವರ್ಗದ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ, ಸಾಮಾನ್ಯ ಅಬ್ಯರ್ಥಿ ಉಪಾಧ್ಯಕ್ಷ ಸ್ಥಾನಕ್ಕೆ, ನೆಗ್ಗು ಪಂಚಾಯತಕ್ಕೆ ಅ ವರ್ಗ ಮಹಿಳೆಗೆ ಉಪಾಧ್ಯಕ್ಷ ಎಸ್‍ಸಿ ಸ್ಥಾನಕ್ಕೆ, ಯಡಹಳ್ಳಿ ಪಂಚಾಯತಕ್ಕೆ ಅ ವರ್ಗದ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ, ಸಾಮಾನ್ಯ ಅಭ್ಯರ್ಥಿಗೆ ಉಪಾಧ್ಯಕ್ಷ ಪಟ್ಟ ಸಿಗಲಿದೆ.
ಕಾನಗೋಡ ಪಂಚಾಯತಕ್ಕೆ ಅ ವರ್ಗದ ಮಹಿಳೆ, ಸಾಮಾನ್ಯ ಅಬ್ಯರ್ಥಿ, ಗುಡ್ನಾಪುರ ಪಂಚಾಯತಕ್ಕೆ ಬ ವರ್ಗಕ್ಕೆ ಅಧ್ಯಕ್ಷ, ಸಾಮಾಣ್ಯ ವರ್ಗದ ಮಹಿಳೆಗೆ ಉಪಾಧ್ಯಕ್ಷ, ಬನವಾಸಿ ಪಂಚಾಯತಕ್ಕೆ ಬ ವರ್ಗದ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ, ಸಾಮಾನ್ಯ ಉಪಾಧ್ಯಕ್ಷ, ವಾನಳ್ಳಿ, ಸದಾಶಿವಳ್ಳಿ, ಹುಣಸೇಕೊಪ್ಪ, ಕುಳವೆ ಪಂಚಾಯತಕ್ಕೆ ಸಾಮಾನ್ಯ ಅಬ್ಯರ್ಥಿಗೆ ಅಧ್ಯಕ್ಷ ಸ್ಥಾನ, ಅ ವರ್ಗದ ಮಹಿಳೆಗೆ ಉಪಾಧ್ಯಕ್ಷ, ಸಾಲ್ಕಣಿ, ಬೈರುಂಭೆ, ಶಿವಳ್ಳಿ(ಹೆಗಡೆಕಟ್ಟಾ), ಬಂಕನಾಳ, ಉಂಚಳ್ಳಿ ಗ್ರಾಮ ಪಂಚಾಯತಕ್ಕೆ ಸಾಮಾನ್ಯ ಸ್ಥಾನಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಸುಗಾವಿ ಪಂಚಾಯತಕ್ಕೆ ಎರಡೂ ಸ್ಥಾನ ಸಾಮಾನ್ಯ ಅಬ್ಯರ್ಥಿಗೆ, ಕೋಡನಗದ್ದೆ ಸಾಮಾನ್ಯ ಮಹಿಳೆ ಅಧ್ಯಕ್ಷ, ಅ ವರ್ಗದ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ, ಹುಲೇಕಲ್ ಪಂಚಾಯತಕ್ಕೆ ಸಾಮಾನ್ಯ ಮಹಿಳೆಗೆ ಅಧ್ಯಕ್ಷ, ಸಾಮಾನ್ಯ ಅಬ್ಯರ್ಥಿಗೆ ಉಪಾಧ್ಯಕ್ಷ ಪಟ್ಟ ಸಿಗಲಿದೆ.
ಸೋಂದಾ, ಹುತ್ಗಾರ್ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಅ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ, ಇಸಳೂರು, ಅಂಡಗಿ ಪಂಚಾಯತಕ್ಕೆ ಸಾಮಾನ್ಯ ವರ್ಗದ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ, ಸಾಮಾನ್ಯ ಅಬ್ಯರ್ಥಿ ಉಪಾಧ್ಯಕ್ಷ ಸ್ಥಾನಕ್ಕೆ, ಬದನಗೋಡ ಪಂಚಾಯತಕ್ಕೆ ಸಾಮಾನ್ಯ ಮಹಿಳೆಗೆ ಅಧ್ಯಕ್ಷ, ಬ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ, ಕೊರ್ಲಕಟ್ಟಾ ಹಲಗದ್ದೆ ಸಾಮಾನ್ಯ ವರ್ಗದ ಮಹಿಳೆಗೆ ಅಧ್ಯಕ್ಷ, ಅ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ, ಭಾಶಿ ಪಂಚಾಯತಕ್ಕೆ ಸಾಮಾನ್ಯ ವರ್ಗದ ಮಹಿಳೆಗೆ ಅಧ್ಯಕ್ಷ, ಬ ವರ್ಗದ ಮಹಿಳೆಗೆ ಉಪಾಧ್ಯಕ್ಷ ಸ್ಥಾನ, ಮಂಜಗುಣಿ ಪಂಚಾಯತಕ್ಕೆ ಎಸ್‍ಸಿ ಅಧ್ಯಕ್ಷ ಸ್ಥಾನ, ಅ ವರ್ಗದ ಮಹಿಳೆಗೆ ಉಪಾಧ್ಯಕ್ಷ ಸ್ಥಾನ, ದೊಡ್ನಳ್ಳಿ ಪಂಚಾಯತಕ್ಕೆ ಎಸ್‍ಸಿ ಮಹಿಳೆಗೆ, ಸಾಮಾನ್ಯ ಅಬ್ಯರ್ಥಿಗೆ ಉಪಾಧ್ಯಕ್ಷ ಸ್ಥಾನ ಮೀಸಲಾತಿ ಬಂದಿದೆ.
ವಿಸ್ಮಯ ನ್ಯೂಸ್ ಕಾರವಾರ