ಬೀಡಿಎಲೆ ತುಂಬಿದ ಲಾರಿಗೆ ಬೆಂಕಿ: ನಡುರಸ್ತೆಯಲ್ಲೇ ಧಗಧಗನೆ ಹೊತ್ತಿಉರಿದ ಲಾರಿ: ಜಿಗಿದು ಪ್ರಾಣ ಉಳಿಸಿಕೊಂಡ ಚಾಲಕ
ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿ ಅವಘಡ
ಸುಟ್ಟು ಕರಕಲಾದ ಲಾರಿ
ಬೀಡಿ ಎಲೆ ತುಂಬಿದ್ದ ಲಾರಿಯಿಂದ ಧೂಮ್ರ ವಾತಾವರಣ
2 ತಾಸಿಗೂ ಹೆಚ್ಚು ಕಾಲ ಹೆದ್ದಾರಿ ಬಂದ್
ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 63ರ ತಾಲೂಕಿನ ಕಂಚಿನಬಾಗಿಲ ಬಳಿ ಬೀಡಿ ಎಲೆ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗಲಿದ ಪರಿಣಾಮ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿ ಲಕ್ಷಾಂತರ ರೂ. ಹಾನಿಯಾದ ಘಟನೆ ನಡೆದಿದ್ದು, ಚಾಲಕ ಪ್ರಾಣ ಭಯದಿಂದ ಜಿಗಿದು ಪರಾರಿಯಾಗಿದ್ದಾನೆ. ಲಾರಿಯಲ್ಲಿನ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಲಾರಿ ಸಂಖ್ಯೆ (ಎಚ್‍ಪಿ20-ಎಚ್‍ಬಿ 4889)ನೇದರ ಮೇಲೆ ಬೀಡಿ ಎಲೆಗಳನ್ನು ತುಂಬಿಕೊಂಡು ಮಂಗ ಳೂರಿನ ಬೀಡಿ ಪ್ಯಾಕ್ಟರಿಯೊಂದಕ್ಕೆ ಸಾಗಿಸುತ್ತಿರುವ ವೇಳೆ ಅದ್ಯಾವುದೋ ಕಾರಣಗಳಿಂದ ಲಾರಿಯ ಹಿಂಭಾಗಕ್ಕೆ ಬೆಂಕಿ ತಗುಲಿರುವ ಸಾಧ್ಯತೆ ಇದ್ದು, ಯಲ್ಲಾಪುರ-ಅಂಕೋಲಾ ಮಾರ್ಗ ಮಧ್ಯೆ ಚಾಲಕನ ಗಮನಕ್ಕೆ ಬಂದಿರುವ ಸಾಧ್ಯತೆ ಕೇಳಿ ಬರುತ್ತಿದೆ. ಚಾಲಕ ಸ್ಥಳದಿಂದ ಕಾಲ್ಕಿತ್ತಿರುವುದರಿಂದ ಬೆಂಕಿ ಅವಘ ಡದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೇ, ಪೊಲೀಸರ ತನಿಖೆಯಿಂದ ನಿಖರ ಮಾಹಿತಿ ತಿಳಿಯ ಬೇಕಿದೆ.
ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟರು. ಸ್ಥಳೀಯರ ಸಹಕಾರದಲ್ಲಿ ಜೆಸಿಬಿ ಬಳಸಿ ಲಾರಿಯಲ್ಲಿದ್ದ ಬೀಡಿ ಎಲೆಗಳ ರಾಶಿಯನ್ನು ಹೊರತೆಗೆಯಲಾಯಿತು. ಕ್ರೇನ್ ಬಳಸಿ ಲಾರಿಯನ್ನು ಪಕ್ಕಕ್ಕೆ ಸರಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಿಮ್ಮಿದ್ದಲ್ಲದೇ, ಧೂಮ್ರದ ದಟ್ಟಣೆಯಿಂದ ರಾಷ್ಟ್ರೀಯ ಹೆದ್ಧಾರಿ ಸುತ್ತಮುತ್ತಲಿನ ವಾತಾವ ರಣ ಮಂಜುಮುಸುಕಿದಂತಿತ್ತು.
ಅಗ್ನಿ ಶಾಮಕದಳದ ಈಶ್ವರ ಡಿ.ನಾಯ್ಕ, ಗಜಾನನ ದೇವಾಡಿಗ, ಗಜೇಂದ್ರ ಬೊಬ್ರುಕರ್, ಗಣೇಶ ಶೇಟ್, ಜೀವನ ಬೊಬ್ರುಕರ್, ವಿಘ್ನೇಶ್ವರ ಎಂ.ನಾಯ್ಕ, ಗಣೇಶ ನಾಯ್ಕ, ಮಹೇಶ ಗೌಡ ತಮ್ಮ ಎರಡು ವಾಹನಗಳ ಮೂಲಕ ಕರ್ತವ್ಯ ನಿರ್ವಹಿಸಿದರು.
ರಾಷ್ಟ್ರೀಯ ಹೆದ್ದಾರಿಯ ಅಂಕೋಲಾ-ಯಲ್ಲಾಪುರ ಮಾರ್ಗದಲ್ಲಿ ಎರಡೂ ಕಡೆ ವಾಹನಗಳು ಸಾಲು ಸಾಲಾಗಿ 2 ತಾಸಿಗೂ ಹೆಚ್ಚು ಕಾಲ ನಿಲ್ಲುವಂತಾಯಿತು. ರಸ್ತೆ ಸುರಕ್ಷತೆ ಮತ್ತಿತರ ಕಾರಣಗಳಿಂದ ಪೊಲೀಸರು ಮುಂಜಾಗೃತೆ ವಹಿಸಿದರು. ಸಿಪಿಐ ಕೃಷ್ಣಾನಂದ ನಾಯಕ, ಪಿಎಸ್‍ಐ ಈ.ಸಿ.ಸಂಪತ್, ಎಎಸ್‍ಐಗಳಾದ ರಾಮನಾಥ ಗುಡೇಂಗಡಿ, ದುರ್ಗಪ್ಪ ಕಲಘಟಗಿ, ಸಿಬ್ಬಂದಿಗಳಾದ ನೀಲಕಂಠ ಆಚಾರಿ, ಸತೀಶ ನಾಯ್ಕ, ಜಗದೀಶ ನಾಯ್ಕ, ಮನೋಜ ಡಿ.,ಆಶೀಪ್ ಕುಂಕೂರು ಸುಗಮ ಸಂಚಾರಕ್ಕೆ ಸಹಕರಿ ಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ನಿಮ್ಮ ಜೀವನದ ತೊಂದರೆಗಳಾದ ಮಾಟ ಮಂತ್ರ, ಕೆಟ್ಟ ಚಾಳಿ, ಪ್ರೇಮ ಕಲಹ, ದಾಂಪತ್ಯ ಕಲಹ, ಕುಟುಂಬ ತೊಂದರೆ, ವ್ಯವಹಾರದ ತೊಂದರೆ, ಬೋಟಿನ ತೊಂದರೆ, ದೋಣಿಯ ತೊಂದರೆ,ಹಾಗೂ ಇತರೆ ತೊಂದರೆಗೆ ಪರಿಹಾರ ಮಾಡಿಕೊಡಲಾಗುವುದು. ಇದರಲ್ಲದೆ ಮನೆಗೆ ರಕ್ಷಣೆಯ ಕಾಯಿ, ಮಕ್ಕಳಿಗೆ ಯಂತ್ರ ಮಾಡಿಕೊಡಲಾಗುವುದು ಮತ್ತು ಬಾವಿಯ ಜಲ ತೋರಿಸುದು ,ಮನೆ ಕಟ್ಟಲು ಸೂಕ್ತ ವಾದ ಸ್ಥಳ ಗುರುತಿಸಿಕೊಡಲಾಗುವುದು ಹಾಗೂ ಮನೆಯಲ್ಲಿ ನಾಗ ಚೌಡಿ ಇತರೆ ಯಾವುದೇ ನಡೆಗಲು ಇದ್ದರೆ ತಪ್ಪಿಸಿಕೊಡಲಾಗುದು ಹಾಗೂ ನಿಮ್ಮ ಸಮಸ್ಯೆಗಳಿಗೆ ಪ್ರತಿ ಶನಿವಾರ ದೇವಿಯ ದರ್ಶನ ಬರುವುದರೊಂದಿಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡಲಾಗುವುದು. ಇಂದೇ ಸಂಪರ್ಕಿಸಿ: 7848019996, ಶ್ರೀ ಮಂಜುನಾಥ ಭವಿಷ್ಯ ಕೇಂದ್ರ, ದುರ್ಗಾ ಚಾಮುಂಡೇಶ್ವರಿ ನಾಗಮಾಸ್ತಿ ಆರಾಧಕ , ಅಶೋಕ ನಾಯ್ಕ ಜನತಾ ವಿದ್ಯಾಲಯ ಇದುರಿನ ರಸ್ತೆ ಗುಡ್ಡಹಿತ್ಲು ಶಿರಾಲಿ, ಭಟ್ಕಳ
ವಿಸ್ಮಯ ನ್ಯೂಸ್, ವಿಲಾಸ್ ನಾಯಕ ಅಂಕೋಲಾ