Follow Us On

WhatsApp Group
Important
Trending

ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಸಂಬಂಧ: ವಿಡಿಯೋ ಬಹಿರಂಗ ಪಡಿಸುವ ಬೆದರಿಕೆ

ಪ್ರೀತಿಯ ನಾಟಕವಾಡಿ ಮೋಸ
ಮದುವೆಯಾಗುವುದಿಲ್ಲ ಎಂದು ಬೆದರಿಕೆ

ಶಿರಸಿ: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯ ಜೊತೆ ಸಂಬಂಧ ಬೆಳೆಸಿ, ಯುವತಿಗೆ ಮೋಸ ಮಾಡಿದ ಆರೋಪದಡಿ, ಶಿರಸಿ ಯುವಕನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.. ಬಂಧಿತ ಅರುಣ , ಕುಂದಾಪುರದ ಯುವತಿಯೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮೊದಲು ಆಕೆಯ ಜೊತೆ ಪ್ರೀತಿಯ ನಾಟಕವಾಡಿದ ಈತ, ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ.. ಬಳಿಕ ನೀನು ಬೇಡ, ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ. ಇಷ್ಟೆ ಅಲ್ಲ, ಖಾಸಗಿ ವಿಡಿಯೋ ಮತ್ತು ಫೋಟೊಗಳನ್ನು ಸಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ. ಇದರಿಂದ ನೊಂದ ಯುವತಿ ಪೊಲೀಸ್ ಠಾಣೆ ಮಟ್ಟಿದ್ದಾಳೆ. ಯುವತಿ ದಾಖಲಿಸಿದ ದೂರಿನ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಂದಾಪುರ ಪೊಲೀಸರು ಶಿರಸಿಗೆ ಆಗಮಿಸಿ, ಆರೋಪಿ ಅರುಣ ಗೌಡ ನನ್ನು ಬಂಧಿಸಿ, ಕರೊದೊಯ್ದಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಈತನ ಸಾಮಾಜಿಕ ಜಾಲತಾಣವನ್ನು ಕೂಡಾ ಜಾಲಾಡುತ್ತಿದ್ದಾರೆ.

ನಿಮ್ಮ ಜೀವನದ ತೊಂದರೆಗಳಾದ ಮಾಟ ಮಂತ್ರ, ಕೆಟ್ಟ ಚಾಳಿ, ಪ್ರೇಮ ಕಲಹ, ದಾಂಪತ್ಯ ಕಲಹ, ಕುಟುಂಬ ತೊಂದರೆ, ವ್ಯವಹಾರದ ತೊಂದರೆ, ಬೋಟಿನ ತೊಂದರೆ, ದೋಣಿಯ ತೊಂದರೆ,ಹಾಗೂ ಇತರೆ ತೊಂದರೆಗೆ ಪರಿಹಾರ ಮಾಡಿಕೊಡಲಾಗುವುದು. ಇದರಲ್ಲದೆ ಮನೆಗೆ ರಕ್ಷಣೆಯ ಕಾಯಿ, ಮಕ್ಕಳಿಗೆ ಯಂತ್ರ ಮಾಡಿಕೊಡಲಾಗುವುದು ಮತ್ತು ಬಾವಿಯ ಜಲ ತೋರಿಸುದು ,ಮನೆ ಕಟ್ಟಲು ಸೂಕ್ತ ವಾದ ಸ್ಥಳ ಗುರುತಿಸಿಕೊಡಲಾಗುವುದು ಹಾಗೂ ಮನೆಯಲ್ಲಿ ನಾಗ ಚೌಡಿ ಇತರೆ ಯಾವುದೇ ನಡೆಗಲು ಇದ್ದರೆ ತಪ್ಪಿಸಿಕೊಡಲಾಗುದು ಹಾಗೂ ನಿಮ್ಮ ಸಮಸ್ಯೆಗಳಿಗೆ ಪ್ರತಿ ಶನಿವಾರ ದೇವಿಯ ದರ್ಶನ ಬರುವುದರೊಂದಿಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡಲಾಗುವುದು. ಇಂದೇ ಸಂಪರ್ಕಿಸಿ: 7848019996, ಶ್ರೀ ಮಂಜುನಾಥ ಭವಿಷ್ಯ ಕೇಂದ್ರ, ದುರ್ಗಾ ಚಾಮುಂಡೇಶ್ವರಿ ನಾಗಮಾಸ್ತಿ ಆರಾಧಕ , ಅಶೋಕ ನಾಯ್ಕ ಜನತಾ ವಿದ್ಯಾಲಯ ಇದುರಿನ ರಸ್ತೆ ಗುಡ್ಡಹಿತ್ಲು ಶಿರಾಲಿ, ಭಟ್ಕಳ

ವಿಸ್ಮಯ ನ್ಯೂಸ್, ಶಿರಸಿ

Back to top button