Follow Us On

WhatsApp Group
Big News
Trending

ವಿದೇಶದಲ್ಲೂ ಹೆಸರು ಮಾಡಿದೆ ಇವರ ತೋರಣ: ಗೃಹಿಣಿಯರ ಕಲೆಗೆ ಬೆಲೆ ತಂದ ಕಲೆ

ಗೃಹಿಣಿಯರ ನೇಯ್ಗೆ ಕಲೆಗೆ ಬೆಲೆ ತಂದ ಕದಿರ ತೋರಣಗಳು
ಮನೆಗಳಲ್ಲಿ ತಯಾರಾಗುತ್ತಿದೆ ಈ ಸುಂದರ ತೋರಣ
ವಿದೇಶದಲ್ಲಿ ಈ ತೋರಣಗಳಿಗೆ ಭಾರೀ ಬೇಡಿಕೆ

ಹೊನ್ನಾವರ: ಇವರು ತಯಾರಿಸುವ ತೋರಣಕ್ಕೆ ವಿದೇಶದಲ್ಲಿ ಎಲ್ಲಿಲ್ಲದ ಬೇಡಿಕೆ. ದೇಶ-ವಿದೇಶದಲ್ಲೂ ಸದ್ದು ಮಾಡುತ್ತಿದೆ ಕದಿರು ತೋರಣ. ಹೌದು, ಭತ್ತದ ಕದಿರನ್ನು ಸುಂದರ ತೋರಣವನ್ನಾಗಿ ನೇಯ್ದು ಕಟ್ಟುವ ಕರ ಕುಶಲತೆಯನ್ನು ರೂಢಿಸಿಕೊಂಡ ಅಪ್ಸರಕೊಂಡ ಭಾಗದ ಗೃಹಿಣಿಯರು ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಂಡು ಒಂದಷ್ಟು ಆದಾಯ ಗಳಿಸುತ್ತಿದ್ದಾರೆ. ಮಂಕಿಯ ರಾಜೇಶ ಎಂಬವರು ಹೊನ್ನಾವರ ತಾಲೂಕಿನ ಅಪ್ಸರಕೊಂಡದ ಸುಮಾರು 15 ಮಹಿಳೆಯರಿಗೆ, ಒಂದು ತಿಂಗಳು ಕದಿರಿನಿಂದ ತೋರಣ ಕಟ್ಟುವ ಕಲೆಯ ಬಗ್ಗೆ ತರಬೇತಿ ನೀಡುತ್ತಿದ್ದು ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದುತ್ತಾ ನೆರವಾಗುತ್ತಿದಾರೆ.

ಒಬ್ಬ ಮಹಿಳೆ ತನ್ನ ಮನೆ ಕೆಲಸವನ್ನೆಲ್ಲಾ ಪೂರೈಸಿಕೊಂಡು ಉಳಿದ ಸಮಯದಲ್ಲಿ ದಿನಕ್ಕೆ ಮೂರರಿಂದ ನಾಲ್ಕು ತೋರಣಗಳನ್ನು ನೇಯುತ್ತಿದ್ದು ಪ್ರತಿ ತೋರಣಕ್ಕೆ 50 ರುಪಾಯಿಯಂತೆ ಸಂಪಾದಿಸುತ್ತಿದ್ದಾರೆ. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ನಮ್ಮವರಿಂದ ಅಸಡ್ಡೆಗೊಳಗಾದ ಕಲೆ, ಕಲಾಕೃತಿಗಳು ದೊಡ್ಡ ದೊಡ್ಡ ನಗರಗಳಲ್ಲಿ, ವಿದೇಶಗಳಲ್ಲಿ ಬಹುಬೇಡಿಕೆಯನ್ನು ಗಿಟ್ಟಿಸಿಕೊಳ್ಳುತ್ತಿರುವ ಹಲವು ಉದಾಹರಣೆಗಳು ನಮ್ಮ ಕಣ್ಮುಂದಿದೆ. ಅದರಲ್ಲಿ ಈ ಕದಿರ ತೋರಣವೂ ಒಂದಾಗಿದೆ. ಏಳು ರೀತಿಯಲ್ಲಿ ತಯಾರಾಗುವ ಕದಿರ ತೋರಣಗಳಿಗೆ ದೂರದ ಮುಂಬೈ, ಶ್ರೀಲಂಕಾದಲ್ಲಿ ಬಹು ಬೇಡಿಕೆಯಿದೆ ಎನ್ನುತ್ತಾರೆ ಮಂಕಿಯ ರಾಜೇಶ ಅವರು.

ಭಟ್ಕಳದ ಉತ್ತರಕೊಪ್ಪ, ಸರ್ಪನಕಟ್ಟೆ, ಹೊನ್ನಾವರದ ಅಪ್ಸರಕೊಂಡದಲ್ಲಿ ಕದಿರ ತೋರಣ ಕಟ್ಟುವ ಕೆಲಸ ನಡೆಯುತ್ತಿದ್ದು ತಿಂಗಳಿಗೆ ಸುಮಾರು 600 ರಿಂದ 1000 ತೋರಣಗಳು ವಿದೇಶಕ್ಕೆ ರಪ್ತಾಗುತ್ತಿದೆ. ಹೊಸ್ತಿಲ ಹಬ್ಬ, ದೀಪಾವಳಿ ಸಂದರ್ಭದಲ್ಲಿ ಮನೆಯ ಭಾಗಿಲು, ಮಂಚದ ಕಾಲು, ಕೊಳಗ, ಸಿದ್ದೆ, ಮನೆಯಲ್ಲಿನ ಪೀಠೋಪಕರಣಗಳಿಗೆ ಭತ್ತದ ಕದಿರು ಮತ್ತು ಮಾವಿನೆಲೆ ಸೇರಿಸಿ ಮಾಡಿದ ತೋರಣ ಕಟ್ಟುವುದು, ನಿತ್ಯವೂ ಜಡೆ ಹಾಕುವ ಹಳ್ಳಿಯ ಮಹಿಳೆಯರಿಗೆ ಹೂವಿನ ದಂಡೆ ಕಟ್ಟುವುದು, ಚಾಪೆ ನೇಯುವುದು ಮುಂತಾದ ಕರಕುಶಲ ಕಲೆಗಳು ತಾಯಿಯಿಂದಲೋ ಅಜ್ಜಿಯಿಂದಲೋ ಬಳುವಳಿಯಾಗಿ ಬಂದಿರುತ್ತದೆ. ಅಂತವರು ಒಂದಿಷ್ಟು ತರಬೇತಿ ಪಡೆದು ತೋರಣ ಕಟ್ಟುವುದನ್ನು ಪ್ರಾರಂಭಿಸಿದ್ದಾರೆ. ಇದನ್ನೆ ಮುಂದುವರಿಸುತ್ತಾ ಉಳಿದ ಕರಕುಶಲ ಉತ್ಪನ್ನಗಳ ತಯಾರಿಯಲ್ಲಿಯೂ ತೊಡಗಿಕೊಂಡರೆ ಸ್ವ ಉದ್ಯೋಗದ ಹೊಸ ಸಾಧ್ಯತೆಯೊಂದು ಮಹಿಳೆಯರ ಮುಂದೆ ತೆರೆದುಕೊಂಡು ಸ್ವಾವಲಂಬನೆಯಲ್ಲಿ ಉಳಿದವರಿಗೆ ಮಾದರಿಯಾಗಲಿದ್ದಾರೆ.

ಈ ಸಂದರ್ಭದಲ್ಲಿ ನಮ್ಮ ವಿಸ್ಮಯ ಟಿವಿಯೋಂದಿಗೆ ಮಾತನಾಡಿದ ಕಾಸರಕೋಡ ಅಪ್ಪಸರಕೊಂಡದ ಮಹಿಳೆ ಭವಾನಿ ಶ್ರೀಧರ ಗೌಡ, ಮಂಕಿಯ ರಾಜೇಶ ಅವರು ನಮಗೆ ತರಬೇತಿನೀಡಿ ಕೇಲಸ ನೀಡಿದ್ದಾರೆ ಇದರಿಂದ ನಮಗೆ ಬಹಳ ಪ್ರಯೋಜನವಾಗಿದೆ. ಇಲ್ಲಿ ತುಂಬಾ ಜನರು ಕೇಲಸವಿಲ್ಲದೆ ಇದ್ದಾರೆ, ಇನ್ನಿತರ ಬೇರೆ ಯೋಜನೆಗಳು ಬಂದರೆ ಇನ್ನಷ್ಟು ಸಹಕಾರಿಯಾಗುತ್ತದೆ ಎಂದರು. ಈ ವೇಳೆ ಮಾತನಾಡಿದ ಸಾವಿತ್ರಿ ಗೌಡ ಅವರು, ಪ್ರತಿನಿತ್ಯ ನಾಲ್ಕು ತೋರಣ ತಯಾರಿಸಬಹುದು, ಒಂದು ತೋರಣಕ್ಕೆ 50 ರೂಪಾಯಿಂ ನೀಡುತ್ತಾರೆ. ಕಳೆದೆರಡು ತಿಂಗಳಿನಿoದ ಮನೆ ಕೆಲಸದ ಮದ್ಯೆಯೆ ಬಿಡುವಿನ ಸಮಯದಲ್ಲಿ ತೋರಣ ತಯಾರಿಸುತ್ತಿದ್ದೆವೆ ಎಂದು ಅಭಿಪ್ರಾಯಪಟ್ಟರು.

ಗ್ರಾಮ ಪಂಚಾಯಿತಿ ನೂತನ ಸದಸ್ಯರಾದ ಅಣ್ಣಪ್ಪ ಗೌಡ ಅವರು ಮಾತನಾಡಿ, ನಮ್ಮ ಈ ಭಾಗದಲ್ಲಿ ಬಡ ಕುಟುಂಬದವರೆ ಹೆಚ್ಚಾಗಿ ಇದ್ದಾರೆ. ಇಂತ ಸಂದರ್ಭದಲ್ಲಿ ಮಂಕಿಯ ರಾಜೇಶ್ ಅವರು ಬತ್ತದ ನೇಯ್ಗೆ ಮಾಡುವ ಉದ್ಯೋಗ ಸೃಷ್ಠಿ ಮಾಡಿಕೋಟ್ಟಿದಾರೆ, ಅವರಿಗೆ ನಮ್ಮ ಉರಿನ ಪರವಾಗಿ ದನ್ಯವಾದಗಳು. ಇಂತಹ ಉದ್ಯೋಗ ಸೃಷ್ಠಿಯಾದರೆ ನಮ್ಮ ಭಾಗದಲ್ಲಿರುವ ಬಡವರು ಮನೆಯ ಕೇಲಸದ ಮದ್ಯೆ ದಿನನಿತ್ಯ ಕರ್ಚಿಗೆ ಬೇಕಾಗುವ ಹಣ ಸಂಪಾದಿಸಲು ಅನುಕೂಲವಾಗುತ್ತದೆ ಎಂದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

Back to top button