Follow Us On

WhatsApp Group
Big News
Trending

ವಧುವಿನ ಫೋಟೋ ಹೆಚ್ಚೆಚ್ಚು ತೆಗೆದ ಫೋಟೋಗ್ರಾಫರ್ : ಸಿಟ್ಟಿನಿಂದ ಫೋಟೋಗ್ರಾಫರ್ ಗೆ ಬಾರಿಸಿದ ಮದುಮಗ : ಸ್ಟೇಜ್ ಮೇಲೆ ಬಿದ್ದುಬಿದ್ದು ನಕ್ಕ ಮದುಮಗಳು!

ಮದುವೆ ಸಮಾರಂಭದಲ್ಲಿ ಆಗಿದ್ದೇನು ನೋಡಿ!
ಸಿಟ್ಟಿನಿಂದ ಫೋಟೋಗ್ರಾಫರ್ ಗೆ ಹೊಡೆದ ವರ

ಈಗಂತೂ ಸಾಮಾನ್ಯವಾಗಿ ಪ್ರತಿಯೊಂದು ಸಮಾರಂಭಕ್ಕೂ ಫೋಟೋಗ್ರಾಫರ್ ಬೇಕೇ ಬೇಕು. ಫೋಟೋಗ್ರಾಫರ್ ಇಲ್ಲದೆ ಯಾವುದೇ ಸಭೆ, ಸಮಾರಂಭ ನಡೆಯೋದಿಲ್ಲ ಅನ್ನುವಷ್ಟರ ಮಟ್ಟಿಗೆ ಕಾಲ ಬದಲಾಗಿದೆ. ಫೋಟೋಗ್ರಾಫರ್ ಗಳಂತೂ ಸುಂದರವಾಗಿ ಫೋಟೋವನ್ನು ತೆಗೆಯಲು ಹೆಣಗಾಡುತ್ತಿರುತ್ತಾರೆ. ಆದರೆ, ಈ ಘಟನೆ ನೋಡಿ. ತುಂಬಾ ಚೆನ್ನಾಗಿ ಫೋಟೋ ತೆಗೆಯಬೇಕು ಎನ್ನುವ ಭರದಲ್ಲಿ ಫೋಟೋಗ್ರಾಫರ್ ವಧುವಿನ ಹೆಚ್ಚೆಚ್ಚು ಫೋಟೋ ತೆಗೆದಿದ್ದಾನೆ. ತನ್ನ ಫೋಟೋ ತೆಗೆಯದೆ ಬರೀ ವಧುವಿನ ಫೋಟೋ ತೆಗೆದ ಫೋಟೋಗ್ರಾಫರ್ ಬಗ್ಗೆ ಪಕ್ಕದಲ್ಲೇ ಇದ್ದ ವರ ಕೋಪಗೊಂಡಿದ್ದ. ಸಿಟ್ಟು ನೆತ್ತಿಗೇರಿ ಸ್ಟೇಜ್ ಮೇಲೆಯೇ ಬಾರಿಸಿದ್ದಾನೆ.!

ಹೊಟ್ಟೆ ಹುಣ್ಣಾಗುವಂತೆ ನಗುತ್ತಿರುವ ವಧು

ಹೌದು, ಫೋಟೋಗ್ರಾಫರ್ ವಧುವಿನ ಹತ್ತಿರಕ್ಕೆ ಹೋಗಿ ಫೋಟೋ ತೆಗೆಯುತ್ತಿದ್ದ. ತೀರಾ ಹತ್ತಿರಕ್ಕೆ ಹೋಗಿ, ಫೋಟೋಗೆ ಪೋಸ್ ಕೊಡವ ರೀತಿಯನ್ನು ಹೇಳಿಕೊಡುತ್ತಾ ಇದ್ದ. ತುಂಬಾ ಹೊತ್ತಿನಿಂದ ಇದನ್ನು ವರ ಗಮನಿಸುತ್ತಿದ್ದ. ಇದು ಪಕ್ಕದಲ್ಲೇ ಇದ್ದ ವರನಿಗೆ ಇರಿಸು ಮುರಿಸು ತಂದಿದೆ. ಇದನ್ನು ಸಹಿಸದ ಮದುಮಗ ಕೊನೆಗೆ ಸಿಟ್ಟಾಗಿ, ಫೋಟೋ ಗ್ರಾಫರ್ ಗೆ ಹೊಡೆದಿದ್ದಾನೆ. ಈ ಘಟನೆಯಿಂದ ಸಮಾರಂಭದಲ್ಲಿ ಇದ್ದವರು ಕ್ಷಣಕಾಲ ದಂಗಾಗಿದ್ದಾರೆ. ಏನ್ ಆಯ್ತು ಅಂತ ಗಾಬರಿಗೊಂಡು ನೋಡುತ್ತಿದ್ದಾರೆ. ಆದ್ರೆ, ಪಕ್ಕದಲ್ಲೇ ಇದ್ದ ವಧುವಿಗೆ ಮಾತ್ರ ನಗು ತಡೆಯೋಕೆ ಆಗಿಲ್ಲ. ಸ್ಟೇಜ್ ಮೇಲೆಯೇ ಬಿದ್ದು ಬಿದ್ದು ನಕ್ಕಿದ್ದಾಳೆ.

ಇಡೀ ಮದುವೆ ಮನೆ ಸಂಭ್ರಮದಲ್ಲಿ ಮುಳುಗಿತ್ತು. ಫೋಟೋಗ್ರಾಫರ್ ಕೂಡಾ ಸೀರಿಯಸ್ಸಾಗಿ ಫೋಟೋ ತೆಗೆಯುತ್ತಿದ್ದ. ವಧು ಕೂಡಾ ಅಷ್ಟೆ ಸೀರಿಯಸ್ಸಾಗಿ ಫೋಟೋಗ್ರಾಫರ್ ಹೇಳಿದಂತೆ ಕೇಳುತ್ತಿದ್ದಳು. ಆದ್ರೆ, ಈ ಘಟನೆಯಿಂದಾಗಿ ಕೆಲವರಿಗೆ ಕೆಲಕಾಲ ಏನಾಯ್ತು ಅಂತಾನೇ ಗೊತ್ತಾಗಿಲ್ಲ. ಆದ್ರೆ, ಕರ್ತವ್ಯನಿಷ್ಠೆ ಮೆರೆದ ಫೋಟೋಗ್ರಾಫರ್ ಇದನ್ನು ಕೂಲ್ ಆಗಿ ತೆಗೆದುಕೊಂಡು, ತನ್ನ ಕೆಲಸವನ್ನು ಮುಂದುವರಿಸಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button