Follow Us On

WhatsApp Group
Important
Trending

ಬೈಕ್ ಅಡ್ಡಗಟ್ಟಿ ಬೆದರಿಸಿ, ನಗದು, ಚಿನ್ನದ ಚೈನ್ ಕಸಿದುಕೊಂಡರು : 12 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಕಾರವಾರ: ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರರನ್ನು ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 9ರಂದು ಬೈಕ್ ಸವಾರನನ್ನು ಮಲ್ಲಿಕ್ ಹೋಟೇಲ್ ಬಳಿ ಅಡ್ಡಗಟ್ಟಿ, ಬೆದರಿಸಿ ಹಣ, ಆಭರಣ ದೋಚಿದ್ದರು. ಈ ಸಂಬoಧ ಬೈಕ್ ಸವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ತನಿಖೆ ಆರಂಭಿಸಿದ ಪೊಲೀಸರು, ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರು ಕಲಘಟಗಿಯ ಮೌಲಾಲಿ ತಂದೆ ಮಹ್ಮದ ಸಾಬ್ (37),ಶಿವಮೊಗ್ಗ ಜಿಲ್ಲೆ ಸಾಗರದ ಮಹ್ಮದ ಆಸೀಪ್ ಮಹ್ಮದ ಇಲಿಯಾಸ್ (37) ಮತ್ತು ಅತಾವುಲ್ಲಾ ಇಸ್ಮಾಯಿಲ್ಸಾಬ್ ಮಕಾಂದರ (36) ಎಂಬುವವರಾಗಿದ್ದಾರೆ.

ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣ ದಾಖಲಾದ 12 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ಫೆಬ್ರವರಿ 8 ರಂದು ರಾತ್ರಿ 10.30ರ ಸುಮಾರಿಗೆ ಮೂವರು ಬೈಕ್ ನಲ್ಲಿ ಹೋಗುತ್ತಿದ್ದಾಗ ಮಲ್ಲಿಕಾ ಹೊಟೇಲ್ ಬಳಿ, ಅಡ್ಡಗಟ್ಟಿ ಬೆದರಿಸಿ, ನಗದು, ಚಿನ್ನದ ಚೈನ್, ಒಂದು ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡು ಪರಾರಿಯಾಗಿದ್ದರು. ತನಿಖೆ ಆರಂಭಿಸಿದ ಪೊಲೀಸರು, ಫೆಬ್ರವರಿ 9 ರಂದು ಮಧ್ಯಾಹ್ನ ಆರೋಪಿಗಳನ್ನು ಬಂಧಿಸಿದ್ದಾರೆ.


ಉತ್ತರ ಕನ್ನಡ ಪೊಲೀಸ್ ಅಧೀಕ್ಷಕರಾದ ಶಿವಪ್ರಕಾಶ ದೇವರಾಜ, ಬದರಿನಾಥ ಎಸ್, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ, ರವಿ ನಾಯ್ಕ್ , ಪೊಲೀಸ್ ಉಪ ಅಧೀಕ್ಷಕರು ಶಿರಸಿರವರ ಮಾರ್ಗ ದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.. ಸುರೇಶ್ ಯಳ್ಳುರ್ ಪಿ ಐ ಯಲ್ಲಾಪುರ ಪೊಲೀಸ್ ಠಾಣೆಯ ಇವರ ನೇತೃತ್ವದಲ್ಲಿ ಮಂಜುನಾಥ ಗೌಡರ್ ಪಿ ಎಸ್ ಐ, ಭೀಮಸಿಂಗ್ ಲಮಾಣಿ ಪಿ ಎಸ್ ಐ ಯಲ್ಲಾಪುರ ಪೊಲೀಸ್ ಠಾಣೆ , ಹಾಗೂ ಎ ಎಸ್ ಐ ಮಂಜುನಾಥ್ ಮನ್ನಂಗಿ ಮತ್ತು ಸಿಬ್ಬಂದಿಯವರಾದ ಸಿ ಹೆಚ್ ಸಿ ಮಹಮ್ಮದ್ ಶಫೀ , ಬಸವರಾಜ ಹಗರಿ, ಗಜಾನನ ನಾಯ್ಕ್ , ಕೃಷ್ಣಮೂರ್ತಿ ನಾಯ್ಕ್ , ಸಿಪಿಸಿ ಮುತ್ತಣ್ಣ ಭೋವಿ , ಚಿದಾನಂದ ಅಂಗಡಿ, ಮಪಿಸಿ ಶೋಭಾ ನಾಯ್ಕ್, ಅವರು ಆರೋಪಿತರನ್ನು ಮತ್ತು ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button