ಅಂಕೋಲಾ : ತಾಲೂಕಿನ ಒಟ್ಟೂ 21 ಗ್ರಾಪಂಗಳಲ್ಲಿ ಫೆ.09ರಂದು 5, ಫೆ.10ರಂದು 7, ಫೆ.11ರಂದು 9 ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆದಿದ್ದು,3 ದಿನಗಳಲ್ಲಿ ಒಟ್ಟಾರೆಯಾಗಿ ತಾಲೂಕಿನ 21 ಗ್ರಾಪಂಗಳ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ.
ಫೆ.9 ಮಂಗಳವಾರ ನಡೆದ 5 ಗ್ರಾಪಂಗಳ ಆಯ್ಕೆ ಪ್ರಕ್ರಿಯೆ ವಿವರ
ಸುಂಕಸಾಳ : ಅಧ್ಯಕ್ಷ ಸದಾನಂದ ಶಿವಪ್ಪ ನಾಯ್ಕ(ಹಿಂದುಳಿದ ‘ಅ’ ವರ್ಗ), ಉಪಾಧ್ಯಕ್ಷ ಉಮಾ ನಾರಾಯಣ ಸಿದ್ದಿ(ಸಾಮಾನ್ಯ ಮಹಿಳೆ), ವಂದಿಗೆ : ಅಧ್ಯಕ್ಷೆ ಪುಷ್ಪಲತಾ ರಮಾಕಾಂತ ನಾಯಕ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ ಬೊಮ್ಮಿಗುಡಿ ಸತೀಶ(ಸಾಮಾನ್ಯ), ಸಗಡಗೇರಿ : ಅಧ್ಯಕ್ಷೆ ಸೀತಾ ಸೋಮಯ್ಯ ಗೌಡ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ ಶ್ರವಣಕುಮಾರ ಮುಕುಂದ ನಾಯ್ಕ(ಹಿಂದುಳಿದ ‘ಅ’ ವರ್ಗ)
ಶೆಟಗೇರಿ : ಅಧ್ಯಕ್ಷೆ ಸಾವಿತ್ರಿ ವೆಂಕಟ್ರಾಯ ನಾಯಕ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ ನಾರಾಯಣ ಈಶ್ವರ ಮಹಾಲೆ(ಸಾಮಾನ್ಯ), ಅಗಸೂರ : ಅಧ್ಯಕ್ಷ ರಾಮಚಂದ್ರ ದೇವಪ್ಪ ನಾಯ್ಕ(ಸಾಮಾನ್ಯ), ಉಪಾಧ್ಯಕ್ಷೆ ಶೋಭಾ ಪಾಂಡು ಗೌಡ( ಸಾಮಾನ್ಯ ಮಹಿಳೆ) ಆಯ್ಕೆಯಾಗಿದ್ದಾರೆ.
ಫೆ.10ರಂದು ನಡೆದ 7 ಗ್ರಾಪಂಗಳ ಆಯ್ಕೆ ವಿವರ :
ಬೆಳಂಬಾರ : ನಾರಾಯಣ ಕೃಷ್ಣ ಮಡಿವಾಳ(ಸಾಮಾನ್ಯ), ಉಪಾಧ್ಯಕ್ಷೆ ನಾಗವೇಣಿ ವೆಂಕಟೇಶ ಗೌಡ( ಸಾಮಾನ್ಯ ಮಹಿಳೆ), ಡೋಂಗ್ರಿ : ಅಧ್ಯಕ್ಷೆ ಲತಾ ಲೋಕೇಶ ನಾಯ್ಕ(ಹಿಂದುಳಿದ ‘ಅ’ ವರ್ಗ ಮಹಿಳೆ), ಉಪಾಧ್ಯಕ್ಷ ವಿನೋದ ಗಣಪತಿ ಭಟ್ಟ(ಸಾಮಾನ್ಯ), ಅವರ್ಸಾ : ಅಧ್ಯಕ್ಷೆ ಸಾರಾ ಜುವೆಲ್ ಕುಟಿನೋ(ಹಿಂದುಳಿದ ‘ಬ’ ವರ್ಗ ಮಹಿಳೆ), ಉಪಾಧ್ಯಕ್ಷೆ ಅಕ್ಷತಾ ಗಣಪತಿ ನಾಯ್ಕ(ಸಾಮಾನ್ಯ) ಅಲಗೇರಿ : ಅಧ್ಯಕ್ಷೆ ದೀಪಾ ನಂದಾ ನಾಯ್ಕ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ ಕಿಶೋರ ತಮ್ಮಾಣಿ ನಾಯ್ಕ(ಸಾಮಾನ್ಯ),
ಬೇಲೇಕೇರಿ : ಅಧ್ಯಕ್ಷೆ ಲಕ್ಷ್ಮೀ ತಿಪ್ಪಣ್ಣ ಹಾದಿಮನಿ( ಪರಿಶಿಷ್ಟ ಜಾತಿ ಮಹಿಳೆ), ಉಪಾಧ್ಯಕ್ಷ ಸುಧಾಕರ ಬುಧವಂತ ಜಾಂಬಾವಳೀಕರ(ಹಿಂದುಳಿದ ‘ಅ’ ವರ್ಗ)
ಹಿಲ್ಲೂರು : ಅಧ್ಯಕ್ಷ ಬೀರಣ್ಣ ಬೊಮ್ಮಯ್ಯ ನಾಯಕ(ಹಿಂದುಳಿದ ‘ಅ’ವರ್ಗ), ಉಪಾಧ್ಯಕ್ಷೆ ನಾಗಶ್ರೀ ಬೀರಣ್ಣ ನಾಯಕ (ಸಾಮಾನ್ಯ ಮಹಿಳೆ), ಮೊಗಟಾ : ಅಧ್ಯಕ್ಷ ದೇವಾನಂದ ವಿಠ್ಠಲ ನಾಯಕ(ಸಾಮಾನ್ಯ), ಉಪಾಧ್ಯಕ್ಷೆ ಸುಮನಾ ಬಾಬು ನಾಯ್ಕ(ಹಿಂದುಳಿದ ವರ್ಗ ‘ಅ’ ಮಹಿಳೆ) ಆಯ್ಕೆಯಾಗಿದ್ದಾರೆ.
ಫೆ.11 ರಂದು 9 ಗ್ರಾಪಂಗಳ ಆಯ್ಕೆ ವಿವರ :
ಹಾರವಾಡ : ಅಧ್ಯಕ್ಷ ಮಂಜುನಾಥ ಟಾಕೇಕರ(ಹಿಂದುಳಿದ ‘ಅ’ವರ್ಗ), ಉಪಾಧ್ಯಕ್ಷೆ ಅನಿತಾ ರಾಮಚಂದ್ರ ನಾಯ್ಕ (ಹಿಂದುಳೀದ ವರ್ಗ ‘ಬ’), ಅಚವೆ : ಅಧ್ಯಕ್ಷೆ ಶ್ರೀದೇವಿ ಪರಮೇಶ್ವರ ಪಟಗಾರ(ಹಿಂದುಳಿದ ‘ಅ’ವರ್ಗ ಮಹಿಳೆ), ಉಪಾಧ್ಯಕ್ಷ ಬಾಲಚಂದ್ರ ಪಾಂಡುರಂಗ ಶೆಟ್ಟಿ(ಸಾಮಾನ್ಯ), ಬೆಳಸೆ : ಅಧ್ಯಕ್ಷೆ ಆಯಮ್ಮ ಜಯವಂತ ಗೌಡ(ಹಿಂದುಳಿದ ‘ಅ’ವರ್ಗ), ಉಪಾಧ್ಯಕ್ಷ ಶಂಕರ ವಿಠೋಬ ಗೌಡ(ಸಾಮಾನ್ಯ)
ಅಗ್ರಗ್ರೋಣ : ಅಧ್ಯಕ್ಷ ರಾಘವೇಂದ್ರ ಮುರ್ಕುಂಡಿ ಗೌಡ(ಸಾಮಾನ್ಯ), ಉಪಾಧ್ಯಕ್ಷೆ ಚಂಪಾ ರಮಾನಂದ ನಾಯ್ಕ(ಹಿಂದುಳಿದ ‘ಅ’ ವರ್ಗ ಮಹಿಳೆ), ಭಾವಿಕೇರಿ : ಅಧ್ಯಕ್ಷ ಪಾಂಡು ಭಟ್ಟಾ ಗೌಡ(ಸಾಮಾನ್ಯ), ಉಪಾಧ್ಯಕ್ಷೆ ಶಿಲ್ಪಾ ಸುಭಾಶ ಹಳನಕರ (ಸಾಮಾನ್ಯ ಮಹಿಳೆ), ವಾಸರಕುದ್ರಿಗೆ : ಅಧ್ಯಕ್ಷ ಪ್ರದೀಪ ನಾರಾಯಣ ನಾಯಕ(ಸಾಮಾನ್ಯ), ಉಪಾಧ್ಯಕ್ಷೆ ದೀಪಾ ಆಗೇರ(ಅನುಸೂಚಿತ ಜಾತಿ ಮಹಿಳೆ), ಹೊನ್ನೆಬೈಲ್ : ಅಧ್ಯಕ್ಷ ಮಾದೇವ ಸುಬ್ಬು ಗುನಗಾ( ಸಾಮಾನ್ಯ), ಉಪಾಧ್ಯಕ್ಷೆ ಬೇಬಿ ಸಂದೀಪ ತಾಂಡೇಲ( ಹಿಂದುಳಿದ ವರ್ಗ ಮಹಿಳೆ
ಬೊಬ್ರುವಾಡ : ಅಧ್ಯಕ್ಷೆ ಸೀಮಾ ಸುಧೀರ ನಾಯ್ಕ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ ಶ್ರೀಧರ ಬಾಲಕೃಷ್ಣ ನಾಯ್ಕ(ಸಾಮಾನ್ಯ)
ಜ.30 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲೂಕಿನ ವಿವಿಧ ಗ್ರಾಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗಧಿ ಪಡಿಸಲಾಗಿತ್ತು. ಅದೇ ಮೀಸಲಾತಿಯನ್ವಯ ತಾಲೂಕಿನ ಎಲ್ಲ 21 ಗ್ರಾಪಂ.ಗಳ ಪ್ರಥಮ ಮತ್ತು ದ್ವಿತೀಯ ಪ್ರಜೆಗಳ ಆಯ್ಕೆಗೆ ಸಂಬಂಧಿಸಿದಂತೆ ಚುನಾವಣಾ ದಿನಾಂಕ ಗೊತ್ತುಪಡಿಸಲಾಗಿದ್ದು, ಫೆ.9,10,11 ಸೇರಿದಂತೆ 3 ದಿನಗಳಲ್ಲಿ ವಿವಿಧ ಗ್ರಾಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಗೆ ಕುಮಟಾ ಉಪವಿಭಾಗಾಧಿಕಾರಿ ಎಂ.ಅಜಿತ ರೈ ಮಾರ್ಗದರ್ಶನದಲ್ಲಿ, ತಹಸೀಲ್ದಾರ್ ಉದಯ ಕುಂಬಾರ ಮತ್ತು ಸಿಬ್ಬಂದಿಗಳು ಸಿದ್ದತೆ ಮಾಡಿಕೊಂಡಿದ್ದು, ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ಪೂರ್ಣಗೊಂಡಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ