Follow Us On

WhatsApp Group
Important
Trending

ಅಮೇರಿಕಾದಲ್ಲಿನ ಉದ್ಯೋಗ‌ ನಂಬಿ ಮೋಸ ಹೋದ ಯುವತಿ; ಕಳೆದುಕೊಂಡಿದ್ದು ಅರ್ಧ ಕೋಟಿ!

ಕಾರವಾರ: ಅಮೇರಿಕಾದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಇಮೇಲ್ ಮೂಲಕ ಸಂಪರ್ಕಿಸಿದ ವಂಚಕರು ಯುವತಿಯೋರ್ವಳಿಗೆ ಬರೊಬ್ಬರಿ ಅರ್ಧ ಕೋಟಿಗೂ ಹೆಚ್ಚಿನ ಹಣ ವಂಚಿಸಿರುವ ಘಟ ಹೊನ್ನಾವರದಲ್ಲಿ ಬೆಳಕಿಗೆ ಬಂದಿದೆ. ಹೊನ್ನಾವರ ತಾಲೂಕಿನ ಗುಣವಂತೆಯ ನೇತ್ರಾವತಿ ನಾಗಪ್ಪ ಗೌಡ ಎಂಬ ಯುವತಿಯೇ ಹಣ ಕಳೆದುಕೊಂಡವಳಾಗಿದ್ದು ಈ ಬಗ್ಗೆ ಕಾರವಾರ ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನೇತ್ರಾವತಿ ಅವರ ಇ-ಮೇಲ್ ಖಾತೆಗೆ ಇ-ಮೇಲ್ ಮೂಲಕ ಸಂಪರ್ಕಿಸಿದ ವಂಚಕರು ಅವರಿಗೆ ಅಮೇರಿಕಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದು ಅದನ್ನು ನಂಬಿದ ಯುವತಿಯು ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ್ದಾಳೆ. ಬಳಿಕ ವಂಚಕರು ಯುವತಿಯ ವಾಟ್ಸಾಪ್‌ಗೆ ಪ್ರಶ್ನೆ ಪತ್ರಿಕೆಯೊಂದನ್ನು ಕಳಿಸಿ ಅದಕ್ಕೆ ಉತ್ತರಿಸುವಂತೆ ತಿಳಿಸಿದ್ದಾರೆ. ಯುವತಿಯು ತನ್ನ ಉತ್ತರವನ್ನು ಕಳುಹಿಸಿಕೊಟ್ಟಿದ್ದು, ಸೈಬರ್ ವಂಚಕರು ಯುವತಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಪಾಸ್‌ಪೋರ್ಟ್ ಚಾರ್ಜ್, ವಿಸಾ ಚಾರ್ಜ್, ಮೆಡಿಕಲ್ ರಿಪೋರ್ಟ್ ಅಪ್ಲಿಕೇಶನ್ ಫೀಸ್, ಎನ್.ಓ.ಸಿ ಫೀಸ್, ಹೆಲ್ತ್ ಇನ್ಸುರೆನ್ಸ್ ಫೀಸ್ ಇತ್ಯಾದಿ ಹೀಗೆ ವಿವಿಧ ತೆರಿಗೆ, ಸುಂಕ ಕಟ್ಟುವಂತೆ ತಿಳಿಸಿದ್ದಾರೆ.

ವಂಚಕರ ಮಾತನ್ನು ನಂಬಿದ ಯುವತಿ ಅವರು ಹೇಳಿದಂತೆ ಅವರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ 2020ರ ಆಗಸ್ಟ್ 13 ರಿಂದ 2021ರ ಜನವರಿ 17ರ ವರೆಗೆ 5 ತಿಂಗುಗಳ ಅವಧಿಯಲ್ಲಿ ಒಟ್ಟೂ 57,14,749 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಇದುವರೆಗೂ ಯಾವುದೇ ಉದ್ಯೋಗ ಕೊಡಿಸದೆ ಮೋಸ ಮಾಡಿದ್ದಾರೆ ಎಂದು ಯುವತಿಯು ಕಾರವಾರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಅಪರಾಧ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ )  ಮೊಬೈಲ್ : 9886460777INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ವಿಸ್ಮಯ ನ್ಯೂಸ್, ಕಾರವಾರ

Back to top button