Follow Us On

WhatsApp Group
Big News
Trending

ಖ್ಯಾತ ಖಳನಟ ಸತ್ಯಜೀತ್ ವಿರುದ್ದ ಸ್ವಂತ ಪುತ್ರಿಯೇ ಪೊಲೀಸರಿಗೆ ದೂರು: ಕಣ್ಣೀರಿಟ್ಟ ತಂದೆ: ಅಷ್ಟಕ್ಕೂ ನಡೆದಿದ್ದು ಏನು?

ಸ್ಯಾಂಡಲ್‌ವುಡ್‌ನ ಖ್ಯಾತ ಖಳನಟ ಸತ್ಯಜಿತ್ ಯಾರಿಗೆ ಗೊತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಚಿರಪರಿಚಿತ ಹೆಸರು. ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ತನ್ನದೇ ವಿಶಿಷ್ಠ ಶೈಲಿಯ ಪಾತ್ರದಿಂದ ಗಮನಸೆಳೆದ ನಟ ಈಗ ಅಕ್ಷರಶ: ನೊಂದಿದ್ದಾರೆ. ಇದಕ್ಕೆ ಕಾರಣ ಸ್ವಂತ ಮಗಳು ಎನ್ನುವುದು ಅವರ ಆರೋಪ. ಹೌದು, ತನ್ನ ತಂದೆ ನನಗೆ ಪ್ರತಿನಿತ್ಯ ಹಣ ಕೊಡುಂತೆ ಪೀಡಿಸುತ್ತಿದ್ದಾರೆ ಎಂದು ಸ್ವಂತ ಮಗಳು ಅಖ್ತರ್ ಸ್ವಲೆಹಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಟ ಸತ್ಯಜೀತ್ ತಾವು ಸ್ವತ: ಕಟ್ಟಿಸಿದ ಮನೆಯನ್ನು ಮಗಳ ಮದುವೆಗಾಗಿ ಮಾರಿದ್ದರು. ಅಲ್ಲದೆ, 70 ಲಕ್ಷ ಸಾಲ ಮಾಡಿ ವಿದೇಶದಲ್ಲಿ ಓದಿಸಿದ್ದರು ಎನ್ನಲಾಗಿದೆ. ಈಗ ಸತ್ಯಜೀತ್ ಪರಿಸ್ಥಿತಿ ಸರಿಇಲ್ಲ. ಗ್ರಾö್ಯಂಗಿನ್ ನಿಂದ ಒಂದು ಕಾಲು ಕಳೆದುಕೊಂಡಿದ್ದಾರೆ. ಅಲ್ಲದೆ, ಬಾಡಿಗೆ ಮನೆಯಲ್ಲಿ ಬದುಕುತ್ತಿದ್ದಾರೆ. ಹೀಗಾಗಿ ಮಾರಿದ ಮನೆಯನ್ನು ಬಡಿಸಿಕೊಡುವಂತೆ ಕೋರಿದ್ದರು ಎನ್ನಲಾಗಿದೆ. ಆದರೆ, ಇವರ ಪುತ್ರಿ ಹೇಳೋದೆ ಬೇರೆ..

ಪ್ರತಿ ತಿಂಗಳು ತಂದೆಯ ಬದುಕಿನ ನಿರ್ವಹಣೆಗಾಗಿ ನಾನು 1 ಲಕ್ಷ ರೂಪಾಯಿ ನೀಡುತ್ತಿದ್ದೆ. ಆದರೀಗ ನಾನು ಗರ್ಭಿಣಿ. ಕೆಲಸಕ್ಕೂ ಹೋಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಂದ ತಂದೆಗೆ ಹಣ ನೀಡಲಾಗುತ್ತಿಲ್ಲ. ಆದರೆ ತಂದೆ ಬೇರೆಯವರಿಂದ ದುಡ್ಡಿಗಾಗಿ ಹೆದರಿಸಿ, ಪೀಡಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದಕ್ಕೆಲ್ಲ ಸ್ಪಷ್ಟನೆ ನೀಡಿರುವ ಸತ್ಯಜೀತ್, ನಾನು ಮಗಳನ್ನು ಹಣಕ್ಕಾಗಿ ಪೀಡಿಸಿಲ್ಲ. ವಿದೇಶದಲ್ಲಿ ಓದುತ್ತಿದ್ದ ಮಗಳು, ಮನೆಗೆ ಬಂದು ಒಬ್ಬರನ್ನು ಇಷ್ಟಪಡುತ್ತಿದ್ದೇನೆ ಎಂದಳು. ಅವನ ಜೊತೆಗೆ ಮದುವೆಮಾಡಿಸಿದೆ. ಆದರೆ ಈಗ ನಮ್ಮ ವಿರುದ್ಧವೇ ದೂರು ಕೊಟ್ಟಿದ್ದಾರೆ. ಎಂತ ವಿಪರ್ಯಾಸ ನೋಡಿ. ಮಗಳಿಗೆ ಈ ರೀತಿ ಮಾಡಲು ಯಾರೋ ಪ್ರೇರೇಪಿಸಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.

ಸತ್ಯಜೀತ್ ಮಗಳು

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button