Big News
Trending

ಮನೆ ಕಳೆದುಕೊಂಡ ಅಜ್ಜಿಗೆ ಮನೆ ನಿರ್ಮಿಸಿಕೊಟ್ಟ ಯುವಾ ಬ್ರಿಗೇಡ್ : ಅಜ್ಜಿಯ ಕಂಗಳಲ್ಲಿ ಆನಂದಭಾಷ್ಪ: ಚಕ್ರವರ್ತಿ ಸೂಲಿಬೆಲೆ ಮಾರ್ಗದರ್ಶನದಲ್ಲಿ ಹಾಲುಕ್ಕಿಸುವ ಸಂಭ್ರಮ

ನೆರೆ ಹಾವಳಿ ವೇಳೆ ಮನೆ ಕಳೆದುಕೊಂಡಿದ್ದ ಅಜ್ಜಿ
ಇಬ್ಬರು ಹೆಣ್ಣುಮಕ್ಕಳನ್ನು ಸಾಕುವ ಜವಾಬ್ದಾರಿ
ವೃದ್ಧೆಯ ಸಂಕಷ್ಟಕ್ಕೆ ಸ್ಪಂದಿಸಿದ ಯುವಾ ಬ್ರಿಗೇಡ್

ಕುಮಟಾ: ಯುವಾ ಬ್ರಿಗೇಡ್ ಸಮಾಜಮುಖಿ ಕೆಲಸ-ಕಾರ್ಯದ ಮೂಲಕ ಗಮನಸೆಳೆಯುತ್ತಿದೆ. ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುವ ಮತ್ತು ಸ್ವಚ್ಛತಾ ಕಾರ್ಯಕ್ರಮದ ಮೂಲಕ ಜನಮನ ಸೆಳೆಯುತ್ತಿದೆ. ಪ್ರವಾಹದ ಹೊತ್ತಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಬಳಿಯ ಅಜ್ಜಿಯೊಬ್ಬಳು ಮನೆ ಕಳಕೊಂಡಿದ್ದಳು.

ಆಕೆಯ ವಯಸ್ಸು ಸುಮಾರು 70. ಮನೆಯಲ್ಲಿರುವ ಇಬ್ಬರೂ ಹೆಣ್ಣುಮಕ್ಕಳು ಬೌದ್ಧಿಕವಾಗಿ ಸವಾಲಿಗೊಳಪಟ್ಟವರು. ಸ್ವತಃ ಈಕೆಯೇ ಅಷ್ಟೂ ಜನರನ್ನು ಸಾಕಬೇಕು. ಇದು ಸಾಲದ್ದೆಂಬಂತೆ ಮಳೆಯ ಹೊಡೆತಕ್ಕೆ ಮನೆ ಬಿದ್ದು ಅತಂತ್ರರಾಗಿದ್ದ ಕುಟುಂಬ ಅದು. ಆಗ ಯುವಾಬ್ರಿಗೇಡ್‌ನ ಕಾರ್ಯಕರ್ತರು ಇದನ್ನು ಗಮನಿಸಿ ಬಲು ಸುಂದರವಾದ ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಹಾಜರಿದ್ದು ಮಾತನಾಡಿದ್ದು, ಯುವಾ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ, ಆಕೆಗೆ ಮನೆಯನ್ನು ಒಪ್ಪಿಸಿಕೊಡುವಾಗ ಎಲ್ಲರ ಮುಖದಲ್ಲೂ ಮಂದಹಾಸವಿದ್ದರೆ, ಅಜ್ಜಿಯ ಕಂಗಳಲ್ಲಿ ಅವ್ಯಕ್ತವಾದ ಕಣ್ಣೀರ ಹನಿಗಳಿದ್ದವು. ಆಕೆಗೆ ಒಳಿತಾಗಲಿ ಎಂದಷ್ಟೇ ಹಾರೈಸಿ ಬಂದಿದ್ದೇವೆ ಎಂದರು. ಮನೆಯಲ್ಲಿ ಹಾಲುಕ್ಕಿಸುವ ಸಂಭ್ರಮಕ್ಕೆ ಸಹಕಾರ ನೀಡಿದ ದಾನಿಗಳೂ ಬಂದಿದ್ದರು.

ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ )  ಮೊಬೈಲ್ : 9964108888,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್, ಕುಮಟಾ

Back to top button