ಕತಗಾಲ್‌ನ ಎಸ್.ಕೆ.ಪಿ.ಪ್ರೌಢಶಾಲೆಯಲ್ಲಿ ಶಿವಶಂಕರ ಪಿಕಳೆಯವರಿಗೆ ಸನ್ಮಾನ

ಕುಮಟಾ: “ಕೆ.ಟಿ.ಆರ್ ಕಪ್ಲಿಗ್ಸ್ ಪುಣೆ ಕಂಪನಿಯು ಸಮಾಜದ ಆರ್ಥಿಕ, ಸಾಮಾಜಿಕ ಮತ್ತು ಪರಿಸರಾತ್ಮಕ ಸಕ್ರೀಯವಾದ ಅಭಿವೃದ್ಧಿಗೆ ಕಟಿಬದ್ಧವಾಗಿದೆ. ಜನರ ಜೀವನ ಸ್ಥಿತಿಯನ್ನು ಉತ್ತಮಪಡಿಸುವುದು ಕಂಪನಿಯ ಮೊದಲ ಆದ್ಯತೆ ಮತ್ತು ಗುರಿಯಾಗಿದೆ.ಇದರ ಫಲವಾಗಿ ಎಸ್.ಕೆ.ಪಿ.ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತವಾದ ಶೌಚಾಲಯ ನಿರ್ಮಾಣವಾಗಿದೆ” ಎಂದು ಕೆ.ಟಿ.ಆರ್ ಕಪ್ಲಿಗ್ಸ್ ನ ಮ್ಯಾನೇಜಿಂಗ್ ಡೈರೆಕ್ಟ್ರ ರಾದ ಶಿವಶಂಕರ ಪಿಕಳೆಯವರು ನುಡಿದರು.

ಅವರು ಇತ್ತೀಚೆಗೆ ಕೆ.ಟಿ.ಆರ್ ಕಪ್ಲಿಗ್ಸ್ ನ ಸಿ.ಎಸ್.ಆರ್. ಫಂಡ್‌ನ ಅಡಿಯಲ್ಲಿ ಸುಮಾರು 19 ಲಕ್ಷ ರೂ ವೆಚ್ಚದಲ್ಲಿ ಎಸ್.ಕೆ.ಪಿ.ಪ್ರೌಢಶಾಲೆಯಲ್ಲಿ ನಿರ್ಮಾಣವಾದ ಸುಸಜ್ಜಿತವಾದ ಶೌಚಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕೆ ವಿ ಶೆಟ್ಟಿ ಮಾನ್ಯ ಕಾರ್ಯದರ್ಶಿಗಳು, ಕೆನರಾ ವೆಲ್ ಫೆರ ಟ್ರಸ್ಟ, ಅಂಕೋಲಾ ಇವರು ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲೆಗಾಗಿ ಪಿಕಳೆ ಕುಟುಂಬದವರು ಮಾಡಿದ ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ವಿವೇಕ ಜಾಲಿಸತ್ಗಿಯವರುವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಅಶೋಕ ಪಿಕಳೆ, ನಿವೃತ್ತ ಮುಖ್ಯಾಧ್ಯಾಪಕರು ಹಾಗೂ ಪಿ ಆರ್ ಭಟ್ಟ ನಿವೃತ್ತಶಿಕ್ಷಕರು ಪಾಲ್ಗೊಂಡಿದ್ದರು . ಮುಖ್ಯಾಧ್ಯಾಪಕರಾದ ಎಸ್ ಎಸ್ ಕೊರವರ ಸ್ವಾಗತಿಸಿದರು. ಅಶೋಕ ಭಟ್ಟ ಸನ್ಮಾನಪತ್ರವನ್ನು ವಾಚಿಸಿದರು.

ಶ್ರೀಮತಿ ಮಂಗಲಾ ಶೆಟ್ಟಿ ವಂದಿಸಿದರು. ಕುಮಾರಿ ಶೃತಿ ಎಸ್, ಗೌಡ, ಮಾರುತಿ ಪಟಗಾರ ಕರ‍್ಯಕ್ರಮ ನಿರೂಪಿಸಿದರು. ಶಿವಶಂಕರ ಪಿಕಳೆ, ಮ್ಯಾನೇಜಿಂಗ್ ಡೈರೆಕ್ಟರ್, ಕೆ.ಟಿ.ಆರ್ ಕಪ್ಲಿಗ್ಸ್ ಪುಣೆ ಇವರನ್ನು ಸನ್ಮಾನ ಕಾರ್ಯಕ್ರಮದಲ್ಲಿ ಶಾಲೆಯ ಸಿಬ್ಬಂದಿವರ್ಗ,ಆಡಳಿತ ಮಂಡಳಿ,ವಿದ್ಯಾರ್ಥಿಗಳು, ಹಾಗೂ ಶಾಲಾಭಿವೃದ್ಧಿಸಮಿತಿ ಸದಸ್ಯರು ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಶ್ರೀ ಕಟೀಲು ದುರ್ಗಾಪರಮೇಶ್ವರಿ  ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್  ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್, ಕುಮಟಾ

Exit mobile version