Follow Us On

WhatsApp Group
Important
Trending

ಮಗುವನ್ನು ತಪ್ಪಿಸಲು ಹೋಗಿ ಓಮಿನಿಗೆ ಡಿಕ್ಕಿ ಹೊಡೆದ ಡಿವೈಎಸ್ ಪಿ ವಾಹನ: ಪಲ್ಟಿಯಾದ ಓಮಿನಿ: ಡಿವೈಎಸ್ ಪಿಗೂ ಗಾಯ

ಯಲ್ಲಾಪುರ: ಪೊಲೀಸ್ ವಾಹನ ಮತ್ತು ಓಮಿನಿ ನಡುವೆ ಡಿಕ್ಕಿ ಸಂಭವಿಸಿ, ಡಿವೈಎಸ್ ಪಿ ಗಾಯಗೊಂಡ‌ ಘಟನೆ ಯಲ್ಲಾಪುರ ತಾಲೂಕಿನ ಬೀರಗದ್ದೆ ಗಣಪತಿ ದೇವಸ್ಥಾನದ ಬಳಿ ನಡೆದಿದೆ. ತಮ್ಮ ವಾಹನದಲ್ಲಿ ಡಿವೈಎಸ್ ಪಿ ಕಾರವಾರದಿಂದ‌ ಯಲ್ಲಾಪುರಕ್ಕೆ ಬರುತ್ತಿದ್ದ ವೇಳೆ ಏಕಾಏಕಿ ಮಗುವೊಂದು ಅಡ್ಡಬಂದಿದೆ. ಈ ವೇಳೆ ಮಗುವನ್ನು ತಪ್ಪಿಸಲು ಹೋಗಿ ಎದುರಿನಿಂದ ಬರುತ್ತಿದ್ದ ಓಮಿನಿಗೆ ಪೊಲೀಸ್ ವಾಹನ‌ಡಿಕ್ಕಿ ಹೊಡೆದಿದೆ.

ಹೌದು, ಕಾರ್ಯ ನಿಮಿತ್ತ ಯಲ್ಲಾಪುರಕ್ಕೆ ಬರುತ್ತಿದ್ದ ಕಾರವಾರದ ಡಿ.ವೈ.ಎಸ್.ಪಿ ಅರವಿಂದ್ ಕಲಗುಜ್ಜಿ ರವರ ಸರ್ಕಾರಿ ವಾಹನಕ್ಕೆ ಎದುರಿನಿಂದ ಬಂದ ಓಮಿನಿ ಡಿಕ್ಕಿ ಹೊಡೆದಿದ್ದು,‌ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ದುರ್ಘಟನೆಯಲ್ಲಿ ಡಿವೈಎಸ್.ಪಿ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಕರಣವೊಂದರ ತನಿಖೆಗಾಗಿ ಮುಂಡಗೋಡಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಓಮಿನಿ ಪಲ್ಟಿಯಾದ ಹಿನ್ನಲೆ ಓಮಿನಿಯಲ್ಲಿದ್ದ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಡಿವೈಎಸ್.ಪಿ ಅವರ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ  ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್  ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್ ಯಲ್ಲಾಪುರ


Back to top button