Follow Us On

WhatsApp Group
Big News
Trending

ಮನೆಗೆ ಬಂದ ಭಿಕ್ಷುಕಿ ಕುಡಿಯಲು ನೀರು ಕೇಳಿದಳು: ಮನೆಯೊಳಗೆ ಕರೆದ ಮಹಿಳೆಯ ವಶೀಕರಣ: ಪಾಪ ಅಂತ ಕುಡಿಯಲು ನೀರು ಕೊಟ್ಟರೆ ಚಾಲಾಕಿ ಭಿಕ್ಷುಕಿ ವೇಷಧಾರಿ ಮಾಡಿದ್ದೇನು?

ಮಹಿಳೆಯ ದೌರ್ಬಲ್ಯ ಅರಿತ ವಂಚಕಿ ಮತ್ತಷ್ಟು ಹೆದರಿ, ಚಿನ್ನಾಭರಣ ಎಗರಿಸುವ ಪ್ಲಾನ್ ಮಾಡಿದ್ದು, ನಿಮ್ಮ ಮನೆಯಲ್ಲಿರುವ ಎಲ್ಲಾ ಚಿನ್ನವನ್ನು ನನಗೆ ನೀಡಬೇಕು. ಇಲ್ಲದಿದ್ದರೆ ನಿಮ್ಮ ಮನೆಯಲ್ಲಿ ಸಾವು ಸಂಭವಿಸುತ್ತದೆ ಎಂದು ಹೆದರಿಸಿದ್ದಾಳೆ.

ಭಟ್ಕಳ: ಒಂಟಿ ಮಹಿಳೆ ಮನೆಗೆ ಭಿಕ್ಷೆ ಬೇಡುವ ನೆಪ ಮಾಡಿಕೊಂಡು ಆಕೆಗೆ ಭೀತಿ ಹುಟ್ಟಿಸಿ ಮಹಿಳೆಯಿಂದ ಲಕ್ಷಾಂತರ ರೂಪಾಯಿ ಚಿನ್ನ ಪಡೆದು ಪರಾರಿಯಾದ ಘಟನೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಹೌದು, ಭಿಕ್ಷೆ ಮಾಡುವ ನೆಪ ಮಾಡಿಕೊಂಡು ಮನೆಗೆ ಬಂದ ಭಿಕ್ಷುಕಿ, ಕುಡಿಯಲು ನೀರು ಬೇಕು ಎಂದು ಹೇಳಿದ್ದಾಳೆ. ಈ ವೇಳೆ ಮಹಿಳೆ ನೀರು ಕುಡಿಯಲು ಒಳಗೆ ಕರೆದಿದ್ದಾಳೆ. ಇದನ್ನೇ ದುರುಪಯೋಗ ಪಡೆಸಿಕೊಂಡ ಭಿಕ್ಷುಕಿ, ತನ್ನ ಚಾಲಾಕಿತನ ಪ್ರದರ್ಶಿಸಿ, ತನ್ನ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿದ್ದಾಳೆ. ಈ ಘಟನೆ ನಡೆದಿರುವುದು ಸಾರದಹೊಳೆಯ ಹೀರೆಹಿತ್ಲು ಸಮೀಪ.

ಇಲ್ಲಿನ ನಿವಾಸಿ ಸುಕ್ರಿಯ ನಾಯ್ಕ ಮನೆಗೆ ಭಿಕ್ಷೆ ಬೇಡುವ ನೆಪ ಮಾಡಿಕೊಂಡು ಬಂದ ವಂಚಕಿ, ಮನೆಯೊಳಗಿದ್ದ ಮಹಿಳೆಯನ್ನು ವಶೀಕರಣ ಮಾಡಿಕೊಂಡು ಭಯಹುಟ್ಟಿಸಿದ್ದಾಳೆ ಎನ್ನಲಾಗಿದೆ. ನಿಮ್ಮ ಮನೆಯಲ್ಲಿ ಗಂಭೀರ ಸಮಸ್ಯೆಯಿದೆ. ಮೂರು ಸಾವು ಸಂಭವಿಸಲಿದೆ ಎಂದು ಭಯ ಹುಟ್ಟಿಸಿದ್ದಾಳೆ.

ಇದರಿಂದ ಮತ್ತಷ್ಟು ಹೆದರಿದ ಮಹಿಳೆ ಸಮಸ್ಯೆಗೆ ಪರಿಹಾರ ಕೇಳಿದ್ದಾಳೆ. ಮೊದಲು 16 ಸಾವಿರ ರೂಪಾಯಿ ಹಣ ನೀಡುವಂತೆ ಕೇಳಿದ್ದಾಳೆ. ಹಣ ಇಲ್ಲವೆಂದು ಹೇಳಿದಾಗ ಹೇಗಾದರು ಮಾಡಿ ಹೊಂದಿಸುವಂತೆ ಹೇಳಿದ್ದಾಳೆ. ಈ ವೇಳೆ ಮಹಿಳೆ ಕಿವಿಯೊಲೆ ಅಡವಿಟ್ಟು ಹಣವನ್ನು ಭಿಕ್ಷುಕಿ ವೇಷಧಾರಿಗೆ ತಂದುಕೊಟ್ಟಿದ್ದಾಳೆ.

ಮಹಿಳೆಯ ದೌರ್ಬಲ್ಯ ಅರಿತ ವಂಚಕಿ ಮತ್ತಷ್ಟು ಹೆದರಿ, ಚಿನ್ನಾಭರಣ ಎಗರಿಸುವ ಪ್ಲಾನ್ ಮಾಡಿದ್ದು, ನಿಮ್ಮ ಮನೆಯಲ್ಲಿರುವ ಎಲ್ಲಾ ಚಿನ್ನವನ್ನು ನನಗೆ ನೀಡಬೇಕು. ಇಲ್ಲದಿದ್ದರೆ ನಿಮ್ಮ ಮನೆಯಲ್ಲಿ ಸಾವು ಸಂಭವಿಸುತ್ತದೆ ಎಂದು ಹೆದರಿಸಿದ್ದಾಳೆ.

ಇದರಿಂದ ಕಂಗಾಲಾದ ಮಹಿಳೆ ಮನೆಯಲ್ಲಿದ್ದ ಎಲ್ಲಾ ಚಿನ್ನವನ್ನು ನೀಡಿದ್ದು, ಸ್ವಲ್ಪ ದಿನ ಈ ವಿಷಯನ್ನು ಯಾರಿಗೂ ಹೇಳಬೇಡ ಎಂದು ಅಲ್ಲಿಂದ ಪರಾರಿಯಾಗಿದ್ದಾಳೆ. ಈಗ ಈ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಭಟ್ಕಳ

Back to top button