ಹಾಲಿ ಹಾಗೂ ಮಾಜಿ ಶಾಸಕರ ನಡುವೆ ರಾಜಕೀಯ ಜುಗಲ್ – ಬಂಧಿ| ಉಸ್ತುವಾರಿ ಮಂತ್ರಿಯ ಎದುರೇ ವಾಕ್ಸಮರ | ಖಾಸಗಿ ಕಾರ್ಯಕ್ರಮದ ಸಂಘಟಕರಿಗೆ – ಆಪ್ತರಿಗೆ ಇರಿಸು-ಮುರಿಸು
ಅಂಕೋಲಾ: ಸಚಿವ ಹೆಬ್ಬಾರ ಭಾನುವಾರ ಬೆಳಿಗ್ಗೆ ಪಟ್ಟಣದ ಖಾಸಗಿ ಮೆಡಿಕಲ್ ಡೈಗ್ನೋಸ್ಟಿಕ್ ಸೆಂಟರ್ ಉದ್ಘಾಟನೆ ನೆರವೇರಿಸಿದ್ದರು. ಈ ವೇಳೆ ತಮ್ಮ ಅಕ್ಕ ಪಕ್ಕದ್ದಲ್ಲಿ ಇದ್ದ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ರನ್ನು ಅದ್ಯಾವುದೋ ಕಾರಣದಿಂದಲೋ, ಅಥವಾ ಸಹಜವಾಗಿ ಒಟ್ಟಿಗೆ ಕರೆದು ‘ ಪಕ್ಷ -ರಾಜಕೀಯ ಬೇರೆ. ಇಲ್ಲಿ ನಾವೆಲ್ಲಾ ಒಂದು ಎಂದಾಗ ಸೈಲ್ ಮತ್ತು ರೂಪಾಲಿ ತಾವು ಆತ್ಮೀಯವಾಗಿದ್ದೇವೆ ಎಂಬರ್ಥದಲ್ಲಿ ಪರಸ್ಪರ ಮಾತನಾಡಿ ಹಸನ್ಮುಖಿಗಳಾಗಿಯೇ ಇದ್ದರು.
ವೇದಿಕೆ ಕಾರ್ಯಕ್ರಮದಲ್ಲಿಯೂ ಸಭಾ ಮರ್ಯಾದೆಯಂತೆ ಒಬ್ಬರ ಹೆಸರನ್ನೊಬ್ಬರು ಸಂಭೋಧಿಸಿಯೇ ಮಾತು ಮುಂದುವರೆಸಿದ್ದರು. ಸಚಿವ ಹೆಬ್ಬಾರ ಸಹ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ದಕ್ಷಿಣ ಕನ್ನಡ ಮತ್ತಿತರ ಕರಾವಳಿ ಜಿಲ್ಲೆಗಳ ರಾಜಕೀಯ ನಾಯಕರ ಇಚ್ಚಾಶಕ್ತಿ, ಒಗ್ಗಟ್ಟು ಉದಾಹರಿಸಿ ನಮ್ಮ ಜಿಲ್ಲೆಯ ಅಭಿವೃದ್ಧಿಗೂ ಅದೇ ಮಾದರಿಯ ಅವಶ್ಯಕತೆ ಬಗ್ಗೆ ಒತ್ತಿ ಹೇಳಿದ್ದರು.
ಡೈಗ್ನೋಸ್ಟಿಕ್ ಲ್ಯಾಬ್ ಕಾರ್ಯಕ್ರಮ ಮುಗಿಸಿ ತೆರಳಿದ್ದ ಇವರು ಹೊಟೇಲ್ ಉಧ್ಘಾಟನೆಯ ಇನ್ನೊಂದು ಕಾರ್ಯಕ್ರಮದಲ್ಲಿಯೂ ವೇದಿಕೆ ಹಂಚಿಕೊಳ್ಳುವಂತಾಯಿತು. ಮೊದಲು ಮಾತನಾಡಿದ್ದ ಹೆಬ್ಬಾರ ಪಕ್ಕದ ಗೋವಾ ರಾಜ್ಯ ಕಡಿಮೆ ಕರಾವಳಿ ಪ್ರದೇಶ ಹೊಂದಿದ್ದರೂ ಪ್ರವಾಸೋದ್ಯಮದಿಂದ ಗಣನೀಯ ಪ್ರಗತಿ ಸಾಧಿಸುತ್ತಿರುವುದನ್ನು ಹಲವು ಆಯಾಮಗಳಲ್ಲಿ ತಿಳಿಸಿ, ನಮ್ಮ ಜಿಲ್ಲೆ ಹಾಗೂ ರಾಜ್ಯದ ನೀತಿ ನಿಯಮಾವಳಿಗಳ ಬದಲಾವಣೆ ಬಗ್ಗೆ ವಿವರಿಸಿದ್ದರು.
ನಂತರ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ ಸಹ ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ, ಪ್ರವಾಸೋದ್ಯಮ ಮತ್ತಿತರ ಅಭಿವೃದ್ಧಿಗೆ ಖಾಸಗಿ ವಲಯದಿಂದಲೂ ಉತ್ತಮ ಸ್ಪಂದನೆ ದೊರೆಯುತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದರು. ಕಾಲೆಳೆಯುವ ಪ್ರವೃತ್ತಿಯಿಂದಾಗಿ ಕೆಲ ಯೋಜನೆಗಳು ಕಾರ್ಯರೂಪವಾಗಲು ವಿಳಂಬ ಆಗುತ್ತಿವೆ ಎಂಬರ್ಥದಲ್ಲಿ ಶಾಸಕಿ ಮಾತು ಮುಗಿಸಿ ಕುಳಿತಿದ್ದರು.
3 ನೇ ಸರದಿಯಲ್ಲಿ ಮಾತನಾಡಿದ ಸೈಲ್ ಆರಂಭದಲ್ಲಿ ಹೊಟೇಲ್ ಉದ್ಯಮ ಆರಂಭಿಸಿದ ದಂಪತಿಗಳ ಕಾಯ೯ದ ಬಗ್ಗೆ ಮೆಚ್ಚುಗೆ ಮಾತನಾಡಿ ಶುಭ ಹಾರೈಸಿದರು. ನಂತರ ಸಚಿವ ಹೆಬ್ಬಾರರ ಮಾತನ್ನುಲ್ಲೇಖಿಸಿ , ಗೋವಾಕ್ಕೆ ಹೊಂದಿಕೊಂಡಂತೆ ನಮ್ಮ ಗಡಿ ಪ್ರದೇಶದಲ್ಲಿಯೂ ಪ್ರವಾಸೋದ್ಯಮ ಮತ್ತಿತರ ಪೂರಕ ಚಟುವಟಿಕೆಗಳ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದೆ. ವಿಶ್ವದಲ್ಲಿ ಎಲ್ಲಿಯೂ ಕಾಣಸಿಗದ “ತಿಳ ಮಾತಿ ಬೀಚಿನ ಸೌಂದರ್ಯದ ಬಗ್ಗೆ ತಿಳಿಸಿ ಈ ಹಿಂದೆ ಈ ಭಾಗದ ಅಭಿವೃಧಿಗೆ ರೂಪಿಸಲಾದ ಯೋಜನೆ ಟೆಂಡರ್ ಪ್ರಕ್ರಿಯೆ ಬಳಿಕವೂ ಜಾರಿಯಾಗದಿರುವುದಕ್ಕೆ ಕೊಂಚ ಬೇಸರಿಸಿ ಈ ಕುರಿತು ಹಾಲಿ ಶಾಸಕಿ ಗಮನ ಹರಿಸುವಂತೆ ಸೂಚಿಸಿದರು.
ಇದೇ ವಿಷಯ ಅದ್ಯಾವುದೋ ಕಾರಣದಿಂದ ವಿಚಿತ್ರ ತಿರುವು ಪಡೆದು ಹಾಲಿ ಹಾಗೂ ಮಾಜಿ ಶಾಸಕರ ನಡುವೆ ವೈಯಕ್ತಿಕ, ರಾಜಕೀಯ ಮತ್ತು ಪಕ್ಷದ ಬಣ್ಣ ಪಡೆದು ಸಚಿವರ ಎದುರಲ್ಲೇ ವಾಕ್ ಸಮರಕ್ಕೆ ಕಾರಣವಾಯಿತು. ಈ ವೇಳೆ ಸೈಲ್ – ರೂಪಾಲಿಯವರಿಗೆ ಯಾಕ್ರೀ ಪಕ್ಷ ಪಂಗಡದ ವಿಚಾರ ಈಗ ನಿಮ್ಮ ಸರ್ಕಾರದ ಸಚಿವರಾದವರು ಈ ಹಿಂದೆ ನಮ್ಮ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದವರು ಎಂದು ಜೋರಾಗಿ ಹೇಳಿ ಅಮೇಲೆ ತನ್ನಷ್ಟಕ್ಕೆ ತಾನು ಸಮಾಧಾನ ತಾಳಿ, ಮಾತು ಮುಗಿಸಿದರು. ರೂಪಾಲಿ ಸಹ ಮರು ಮಾತನಾಡದೇ ಇರುವುದು,.ಸಚಿವ ಹೆಬ್ಬಾರ ರಾಜಕೀಯದಲ್ಲಿ ಇದೆಲ್ಲ ಸಹಜ ಎಂಬಂತೆ ಇಬ್ಬರಿಗೂ ಕಿವಿ ಮಾತು ಹೇಳಿ ಅನ್ಯ ಕಾರ್ಯಕ್ರಮಕ್ಕೆ ಹೊರಡೋಣ ಎ೦ದು ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು. ಆದರೂ ಹಾಲಿ ಹಾಗೂ ಮಾಜಿಗಳ ನಡುವಿನ ಈ ರಾಜಕೀಯ ಜುಗಲ್ ಬಂಧಿ, ಸಂಘಟಕರ ಮತ್ತು ಆಪ್ತರ ಇರಿಸು-ಮುರಿಸಿಗೆ ಕಾರಣವಾಯಿತೆಂದೇ ಹೇಳ ಬಹುದಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9886460777,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9886460777..