Follow Us On

WhatsApp Group
Big News
Trending

ಇಂದು ಮದುವೆಯಾಗಬೇಕಿದ್ದ ಯುವಕ ಮಸಣ ಸೇರಿದ: ಮದುವೆಗೆ ಸಮಸ್ಯೆಯಾಗಲಿದೆ ಎಂಬ ಕಾರಣಕ್ಕೆ ಕೋವಿಡ್ ಟೆಸ್ಟ್ ಗೆ ಹೋಗಿರಲಿಲ್ಲ: ಸಂಭ್ರಮದಲ್ಲಿದ್ದ ಮನಯೆಲ್ಲೀಗ ಸ್ಮಶಾನ ಮೌನ

ಯಾವುದಕ್ಕೂ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದ್ದರೂ, ಮದುವೆಗೆ ಸಮಸ್ಯೆ ಆಗಲಿದೆ ಎನ್ನುವ ಕಾರಣಕ್ಕೆ ಹೋಗಿರಲಿಲ್ಲ ಎಂಬ ಮಾತುಗಳು ಕೇಳಿಬುತ್ತಿವೆ. ಆದರೆ ಇದೀಗ ಆಸ್ಪತ್ರೆ ಸೇರುವ ಮುನ್ನವೇ ಈತ ಮೃತಪಟ್ಟಿದ್ದಾನೆ.

ಕಾರವಾರ: ಎರಡನೇ ಅಲೆಯಲ್ಲಿ ಕೋವಿಡ್‌ಗೆ ಯುವಕರೇ ಹೆಚ್ಚು ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರತಿದಿನದ ಸಾವು ನೋವಿನ ಸಂಖ್ಯೆ ನೋಡುತ್ತಿದ್ದರೆ, ಎಚ್ಚರಿಕೆ ವಹಿಸಿದರೂ ಸಾಲದು.

ಹೌದು, ಈ ನಡುವೆ ಮದುವೆ ನಡೆಯಬೇಕಿದ್ದ ಹಿಂದಿನ ದಿನವೇ ವರನೋರ್ವನನ್ನ ಕೋವಿಡ್ ಬಲಿಪಡೆದ ಘಟನೆ ತಾಲೂಕಿನ ಜನರ ಆತಂಕಕ್ಕೆ ಕಾರಣವಾಗಿದೆ.

ಇಲ್ಲಿನ ನಗರದ ತೇಲಂಗಾ ರಸ್ತೆಯ ರೋಷನ್ ಪಡವಳಕರ್ (30) ಮೃತಪಟ್ಟ ವರ. ಈತ ಪುಣೆಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ (ಮೇ 04) ಮದುವೆ ನಿಶ್ಚಯವಾಗಿತ್ತು. ಎಲ್ಲಾ ತಯಾರಿಯೂ ನಡೆದಿತ್ತು. ನಿನ್ನೆ ಹಳದಿ ಶಾಸ್ತ್ರವಿದ್ದು, ಇಂದು ಮದುವೆಗೆ ತಯಾರಿ ಸಾಗಿತ್ತು. ಆದರೆ, ಕರೊನಾ ಅಬ್ಬರಕ್ಕೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.

ಹೌದು, ಯುವಕನೊಬ್ಬ ಮದುವೆಯ ಮುನ್ನಾದಿನವೇ ಇಹಲೋಕ ಯಾತ್ರೆ ಮುಗಿಸಿದ ಹೃದಯವಿದ್ರಾವಕ ಘಟನೆ ಎಲ್ಲರನ್ನು ಆತಂಕ್ಕೆ ದೂಡಿದೆ. ಮದುವೆಯ ಮಂಟಪ ಏರಬೇಕಾಗಿದ್ದ ಯುವಕ ಮಸಣ ಸೇರಬೇಕಾಗಿ ಬಂದಿದ್ದು, ವಿಧಿಯಾಟಕ್ಕೆ ಸಾಕ್ಷಿ.

ಮನೆಯಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
ಪುಣೆಯಲ್ಲಿ ಉದ್ಯೋಗದಲ್ಲಿದ್ದ ಈತ, ಮದುವೆ ನಿಕ್ಕಿಯವಾದ ಕಾರಣಕ್ಕೆ ತಿಂಗಳ ಹಿಂದೆ ಕಾರವಾರಕ್ಕೆ ಆಗಮಿಸಿದ್ದ.

ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಖಾಸಗಿ ಕ್ಲಿನಿಕ್‌ನವರು ಟೈಪಾಯ್ಡ ಎಂದು ಚಿಕಿತ್ಸೆ ನೀಡಿದ ಕಾರಣ ಕೋವಿಡ್ ತಪಾಸಣೆ ಬಗ್ಗೆ ಗಮನಹರಿಸಿರಲಿಲ್ಲ ಎನ್ನುವುದು ಸ್ಥಳೀಯರ ಮಾತು.

ಯಾವುದಕ್ಕೂ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದ್ದರೂ, ಮದುವೆಗೆ ಸಮಸ್ಯೆ ಆಗಲಿದೆ ಎನ್ನುವ ಕಾರಣಕ್ಕೆ ಹೋಗಿರಲಿಲ್ಲ ಎಂಬ ಮಾತುಗಳು ಕೇಳಿಬುತ್ತಿವೆ.

ಸೋಮವಾರ ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯಕ್ಕೆ ಒಳಗಾದ ಹಿನ್ನಲೆಯಲ್ಲಿ ತಕ್ಷಣ ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಯಾರಾಗಿದ್ದರು. ಆದರೆ ಆಸ್ಪತ್ರೆ ಸೇರುವ ಮುನ್ನವೇ ಈತ ಮೃತಪಟ್ಟಿದ್ದಾನೆ. ಮೃತಪಟ್ಟ ನಂತರ ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇನ್ನು ಮದುವೆ ಸಿದ್ಧತೆಯಲ್ಲಿದ್ದ ಮನೆಯವರಿಗೆ ವರನ ನಿಧನ ದೊಡ್ಡ ಅಘಾತವನ್ನೇ ನೀಡಿದ್ದು, ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗಿದೆ. ಮದುವೆಯ ಹಿಂದಿನ ದಿನವೇ ವರ ಪ್ರಾಣ ಬಿಟ್ಟಿರುವುದಕ್ಕೆ ಎಲ್ಲರೂ ಕಂಬನಿ ಮಿಡಿದಿದ್ದಾರೆ. ಯಾವುದೇ ರೀತಿಯ ಜ್ವರದ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣ ಸ್ಥಳೀಯ ಆಸ್ಪತ್ರೆಗಳನ್ನು ಭೇಟಿ ಮಾಡಿ ಸೂಕ್ತವಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿ ಇರುವುದು ಅನಿವಾರ್ಯವಾಗಿದೆ.

ತನಿಗೆ ಕೋವಿಡ್ ಜ್ವರ ಬಂದಿಲ್ಲ. ತನಗೆ ಬಂದಿರುವುದು ಸಾಮಾನ್ಯ ಜ್ವರ ಎಂಬ ಉಡಾಫೆ ಸಲ್ಲದು. ಇಂಥ ಊಡಾಫೆ ಜೀವಕ್ಕೆ ಕುತ್ತು ತರಬಲ್ಲದು. ಸಣ್ಣ ನಿರ್ಲಕ್ಷವೂ ಸಲ್ಲದು. ಜ್ವರ ಮತ್ತು ಜ್ವರ ಲಕ್ಷಣಗಳು ಕಾಣಿಸಿಕೊಂಡರೆ, ಕೂಡಲೇ ಕೋವಿಡ್ ತಪಾಸಣೆ ಮಾಡಿಕೊಳ್ಳಿ. ಮಾಸ್ಕ್ ಬಳಸಿ, ಸಮಾಜಿಕ ಅಂತರ ಕಾಪಾಡಿಕೊಳ್ಳಿ.. ಅವಶ್ಯವಿದ್ದರಷ್ಟೆ ಹೊರಗಡೆ ಹೋಗಿ ಎಂಬುದು ನಮ್ಮ ಕಳಕಳಿಯ ವಿನಂತಿ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ಕಾರವಾರ

Back to top button