Follow Us On

WhatsApp Group
Important
Trending

ಕೋಳಿ ಹುಂಜಗಳ ಮೇಲೆ ಹಣದ ಪಂಥ ಕಟ್ಟಿ ಜುಗಾರಾಟ ನಡೆಸುತ್ತಿದ್ದ 9 ಜನರ ಬಂಧನ| 7 ಲಕ್ಷ 56 ಸಾವಿರ ಮೌಲ್ಯದ 22 ಮೋಟಾರ ಸೈಕಲ್ ಗಳು ವಶಕ್ಕೆ

ಅಂಕೋಲಾ ಜುಲೈ 05: ತಾಲೂಕಿನ ಹೆಗ್ರೆ ಗ್ರಾಮದ ಬಿಳಿಸಿರಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕೋಳಿ ಅಂಕ ನಡೆಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು 9 ಜನ ಆರೋಪಿತರು ಸೇರಿ ಕೋಳಿಅಂಕ ಜುಗಾರಾಟ ಆಡಲು ಬರಲು ಉಪಯೋಗಿಸಿದ ಒಟ್ಟೂ 22 ಮೋಟಾರ್ ಸೈಕಲ್ ಗಳನ್ನು ತಮ್ಮ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದು ವರೆಸಿದ್ದಾರೆ.

ಈ ವೇಳೆ 2ಕೋಳಿಗಳು, 7ಕೋಳಿ ಕತ್ತಿಗಳು, 2940 ರೂ.ನಗದು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮೋಟಾರ ಸೈಕಲ್ ಗಳ ಒಟ್ಟಾರೆ ಮೌಲ್ಯ 7,60,000 ಎಂದು ಅಂದಾಜಿಸಲಾಗಿದೆ.

ಅಂಕೋಲಾ ಪೋಲೀಸ್ ಠಾಣೆಯ ನಿರೀಕ್ಷಕರಾದ ಸಂತೋಷ ಶೆಟ್ಟಿಯವರ ಮಾರ್ಗದರ್ಶನದಲ್ಲಿ , ಉಪನಿರೀಕ್ಷರಾದ ಪ್ರವೀಣ ಕುಮಾರ ಆರ್ ನೇತ್ರತ್ವದಲ್ಲಿ, ಪ್ರೊ. ಪಿಎಸ್ಸೈ ಮಲ್ಲಿಕಾರ್ಜುನ, ಸಿಬ್ಬಂದಿಗಳಾದ ಮೋಹನದಾಸ ಶೇಣ್ಪಿ,ರೋಹಿದಾಸ್ ದೇವಾಡಿಗ,ಆಸಿಫ್ ಕುಂಕೂರ್,ಶಿವಾನಂದ ನಾಗರದಿನ್ನಿ,ನಾಗರಾಜ್ ಹೋತನಳ್ಳಿ,ಮಂಜುನಾಥ್ ಲಕ್ಮಾ ಪುರ, ಹೊನ್ನಪ್ಪ ವಗ್ಗಣ್ಣನವರ ಅವರನ್ನೊಳಗೊಂಡ ತಂಡ ದಾಳಿ ನಡೆಸಿದ್ದರು.

ಅಂಕೋಲಾ ಪೋಲೀಸರ ಯಶಸ್ವೀ ಕಾರ್ಯಾಚರಣೆಗೆ ಎಸ್ಪಿ ಶಿವಪ್ರಕಾಶ ದೇವರಾಜು, ಎಡಿಶನಲ್ ಎಸ್ಪಿ ಎಸ್ ಬದ್ರೀನಾಥ, ಡಿವೈಎಸ್ಪಿ ಅರವಿಂದ ಕಲ್ಲಗುಜ್ಜಿ ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕೋಳಿ ಅಂಕದಲ್ಲಿ ತೊಡಗಿದ್ದ ಸ್ಥಳೀಯರು ಸೇರಿದಂತೆ ಹೊರಗಿನ 9 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಖಾಕಿ ಪಡೆ ಬರುವ ಸುಳಿವರಿತ ಕೆಲವರು ಸ್ಥಳದಿಂದ ಮೊದಲೇ ಕಾಲ್ಕಿತ್ತರೆ, ಇನ್ನು ಕೆಲವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಅರಣ್ಯ ಪ್ರದೇಶ ಮತ್ತಿತರೆಡೆ ಓಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button