Follow Us On

WhatsApp Group
Focus News
Trending

ಪುರಸಭೆ ನೂತನ ಮುಖ್ಯಾಧಿಕಾರಿಯಾಗಿ ಶುೃತಿ ಗಾಯಕವಾಡ | ಪುರಸಭೆಯಲ್ಲಿ ಹೆಚ್ಚಲಿರುವ ಮಹಿಳೆಯರ ಅಧಿಕಾರ ?

ಅಂಕೋಲಾ ಜುಲೈ 10: ರಾಜ್ಯ ನಗರಾಭಿವೃದ್ಧಿ ಇಲಾಖೆ, ಮುಖ್ಯಾಧಿಕಾರಿ ಶ್ರೇಣಿ 1 ದರ್ಜೆಯ ರಾಜ್ಯದ 11 ಅಧಿಕಾರಿಗಳ ಸ್ಥಳ ನಿಯುಕ್ತಿ ಕುರಿತು ಅಧಿಸೂಚನೆ ಹೊರಡಿಸಿದೆ. ಕಳೆದ ಜುಲೈ 3ರಂದು ಹೊರಡಿಸಿದ ಅದೇಶವನ್ನು ಭಾಗಶಃ ಮಾರ್ಪಡಿಸಿ, ನಗರಾಭಿವೃಧ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ. ಎಲ್. ಪ್ರಸಾದ ಜುಲೈ 9ರಂದು ಹೊರಡಿಸಿದ ಹೊಸ ಆದೇಶದಂತೆ ಅಂಕೋಲಾ ಪುರಸಭೆ ಮುಖ್ಯಾಧಿಕಾರಿಯಾಗಿ ಶುೃತಿ ಗಾಯಕವಾಡ್ ಅವರನ್ನು ನಿಯುಕ್ತಿಗೊಳಿಸಲಾಗಿದೆ.

ಅಂಕೋಲಾ ಪುರಸಭೆ ಮುಖ್ಯಾಧಿಕಾರಿಯಾಗಿ ಹಾಲಿ ಕಾರ್ಯನಿರ್ವಹಿಸುತ್ತಿದ್ದ ಬಿ.ಪ್ರಹ್ಲಾದ್ ಅವರಿಗೆ, ಸದರೀ ಆದೇಶದಲ್ಲಿ ಈ ವರೆಗೂ ನಿರ್ದಿಷ್ಟ ಸ್ಥಳ ಮತ್ತು ಹುದ್ದೆ ಸೂಚಿಸಿಲ್ಲ. ಒಂದೊಮ್ಮೆ ಶೃುತಿ ಗಾಯಕವಾಡ ನಿಯೋಜಿತ ಹುದ್ದೆಗೆ ತಕ್ಷಣವೇ ಹಾಜರಾದಲ್ಲಿ, ಬಿ ಪ್ರಲ್ಹಾದ್ ತಮ್ಮ ಮಾತ್ರ ಇಲಾಖೆಯ ಮುಖ್ಯ ಕಛೇರಿಗೆ / ಸಕ್ಷಮ ಪ್ರಾಧಿಕಾರದಲ್ಲಿ ವರದಿ ಮಾಡಿಕೊಳ್ಳ ಬೇಕಾಗಬಹುದು ಎನ್ನಲಾಗಿದೆ.

ಈ ಹಿಂದೆ ಕಳೆದ ಮಾರ್ಚ್ ತಿಂಗಳಲ್ಲಿ ಅಂಕೋಲಾ ಪುರಸಭೆಯಲ್ಲಿ ಮುಖ್ಯಾಧಿಕಾರಿ ಹುದ್ದೆ ನಿರ್ವಹಿಸುತ್ತಿದ್ದ ಬಿ. ಪ್ರಹ್ಲಾದ್, ಮತ್ತು ಸಮುದಾಯ ಸಂಘಟನಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಿ. ಎಲ್. ರಾಠೋಡ್ (ಸಮಾನ ವೇತನ ಶ್ರೇಣಿ) ಇವರ ಹುದ್ದೆ ಅದಲು- ಬದಲು ಮಾಡಿ ಇಲಾಖೆ ಹೊರಡಿಸಿದ ಆದೇಶ, ಸದರೀ ಸ್ಥಳೀಯ ಅಧಿಕಾರಿಗಳ ನಡೆ- ನುಡಿ, 1-2 ದಿನಗಳ ಮಟ್ಟಿಗೆ ಖುರ್ಚಿಗಾಗಿ ನಡೆದ ಮುಸುಕಿನ ಗುದ್ದಾಟ ಗೊಂದಲದ ಗೂಡಾಗಿ, ನಾಗರಿಕ ವಲಯದಲ್ಲಿಯೂ ಕುತುಹಲಕ್ಕೆ ಕಾರಣವಾಗಿತ್ತು.

ನಂತರ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಬಿ. ಪ್ರಹ್ಲಾದ್ ಅವರನ್ನೇ ಮುಖ್ಯಾಧಿಕಾರಿ ಹುದ್ದೆಯಲ್ಲಿ ಮುಂದುವರೆಸಿ, ವಾತಾವರಣ ತಿಳಿಗೊಳ್ಳುವಂತಾಗಿತ್ತು . ಅಂದಿನಿಂದ ಇಂದಿನವರೆಗೂ ಮತ್ತೆ ಪ್ರಹ್ಲಾದ್ ಅವರೇ ಮುಖ್ಯಾಧಿಕಾರಿ ಹುದ್ದೆ ನಿಭಾಯಿಸುತ್ತಿದ್ದಾರೆ.

ಅಂಕೋಲಾ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ನಿಯುಕ್ತಿ ಗೊಂಡಿರುವ, ಶೃುತಿ ಗಾಯಕವಾಡ, ಇಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನಲ್ಲಿ ಇಂಜೀನಿಯರಿಂಗ್ ಶಿಕ್ಷಣ ಮುಗಿಸಿದವರಾಗಿದ್ದಾರೆ. ಕರ್ನಾಟಕ ಮುನ್ಸಿಪಲ್ ಸರ್ವೀಸ್ ಎಡ್ಮಿನಿಸ್ಟ್ರೇಶನ್ (KMS ) ಉತ್ತೀರ್ಣರಾದ ಹೊಸ ಬ್ಯಾಚಿನ ಕೆಲವೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಬ್ಬರಾಗಿ ಗ್ರೇಡ್ I ಹುದ್ದೆಗೆ ನಿಯುಕ್ತಿಗೊಂಡಿದ್ದಾರೆ. ಚುರುಕಿನ ಈ ಯುವ ಅಧಿಕಾರಿ, ಅಂಕೋಲಾದ ಮೂಲಕ ತಮ್ಮ ಪ್ರಥಮ ಆಡಳಿತಾತ್ಮಕ ಸೇವೆ ಆರಂಭಿಸಲಿದ್ದಾರೆ.

ತಿಂಗಳ 2ನೇ ಶನಿವಾರದ ರಜೆ, ಭಾನುವಾರದ ರಜೆ ಮತ್ತಿತರ ಕಾರಣಗಳಿಂದ ಇಲಾಖೆಯ ಹೊಸ ಆದೇಶದ ಕುರಿತು ಪೂರ್ಣ ವಿವರ ಲಭ್ಯವಾಗುವ ಸಾಧ್ಯತೆ ಕಡಿಮೆ ಇದ್ದು, ಪುರಸಭೆ ಮುಖ್ಯಾಧಿಕಾರಿ ಹುದ್ದೆಗೆ ಸಂಬಂಧಿಸಿದಂತೆ ಸೋಮವಾರ ಸ್ಪಷ್ಠತೆ ದೊರೆಯಲಿದೆ.

ಅಂಕೋಲಾ ಪುರಸಭೆಯಲ್ಲಿ ಮಹಿಳೆಯರೇ ಅಧಿಕಾರ ಚುಕ್ಕಾಣಿ ಹಿಡಿದಿದ್ದು, ಅಧ್ಯಕ್ಷರಾಗಿ ಶಾಂತಲಾ ನಾಡಕರ್ಣಿ,ಉಪಾಧ್ಯಕ್ಷರಾಗಿ ರೇಖಾ ಗಾಂವಕರ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಯಾ ನಾಯ್ಕ ಜವಾಬ್ದಾರಿ ನಿಭಾಯಿಸುತ್ತಿದ್ದು, ಪುರಸಭೆ ಮುಖ್ಯಾಧಿಕಾರಿಯಾಗಿ ಶೃುತಿ ಗಾಯಕವಾಡ ಹಾಜರಾದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಪಾರುಪತ್ಯ ಮತ್ತಷ್ಟು ಹೆಚ್ಚಲಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button