ಕಾರ್ಯಾಚರಣೆ ವೇಳೆ ಓಡಿ ಹೋಗಿ ತಪ್ಪಿಸಿಕೊಂಡರು ಕೆಲವರು! ಮಾಸ್ಕ ಧರಿಸದೆ ಓಡಾಡುತ್ತಿದ್ದ 18 ಮಂದಿಗೆ ಸ್ಥಳದಲ್ಲೇ ಸ್ವಾಬ್ ಟೆಸ್ಟ್
ಕುಮಟಾ: ಪಟ್ಟಣ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೆ ಬೇಕಾಬಿಟ್ಟಿ ಓಡಾಟ ನಡೆಸುವವರಿಗೆ ಕುಮಟಾ ಪುರಸಭೆಯ ವತಿಯಿಂದ ಬಿಸಿಮುಟ್ಟಿಸಲಾಗುತ್ತಿದೆ. ಹೌದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದೆ ಓಡಾಟ ನಡೆಸುವವರಿಗೆ ಸ್ಥಳದಲ್ಲಿಯೇ ಸ್ವಾಬ್ ಟೆಸ್ಟ್ ಮಾಡುವ ಕಾರ್ಯವನ್ನು ಕುಮಟಾ ಪುರಸಭೆ ಮತ್ತು ಅರೋಗ್ಯ ಇಲಾಖೆ ಜಂಟಿಯಾಗಿ ಮುಂದುವರಿಸಿದೆ. ಪಟ್ಟಣದ ಕೋರ್ಟ್ ಸರ್ಕಲ್ ಬಳಿ ಮಾಸ್ಕ್ ಹಾಕದೆ ಹಾಗೂ ಮಾಸ್ಕ್ ಹೊಂದದೆ ಇರುವ 18 ವ್ಯಕ್ತಿ ಗಳನ್ನು ಪತ್ತೆ ಹಚ್ಚಿ, ಅವರನ್ನು ಎಸ್.ಬಿ.ಐ ಬ್ಯಾಂಕ್ ಮುಂಭಾಗದ ಸ್ಥಳದಲ್ಲಿ ವ್ಯವಸ್ಥಿತವಾಗಿ ಸ್ವಾಬ್ ಟೆಸ್ಟ್ ಮಾಡಲಾಗಿದೆ.
ಮಾಸ್ಕ್ ಹೊಂದದೆ ಇರುವ ಕೆಲವರು ಪುರಸಭೆಯ ಕಾರ್ಯಾಚರಣೆಯ ವೇಳೆ ಓಡಿ ಹೋಗಿ ತಪ್ಪಿಸಿಕೊಂಡಿದ್ದು, ಸಹ ಕಂಡು ಬಂದಿದೆ. ಮುಖ್ಯಾಧಿಕಾರಿ ಸುರೇಶ ಎಂ.ಕೆ ಹಾಗೂ ಡಾ ಚೈತ್ರಪ್ರಭ ನಾಯ್ಕ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಶರಾವತಿ, ಕಂದಾಯ ಅಧಿಕಾರಿ ದಿಲೀಪ್ ನಾಯ್ಕ್, ಶ್ರೀಧರ ಗೌಡ, ದಿಲೀಪಶೆಟ್ಟಿ, ಎಮ್.ಎಸ್ ನಾಯ್ಕ ಇತರರು ಹಾಜರಿದ್ದರು.
ಕರೋನಾ ಹರಡುವಿಕೆಯ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಕಾರವು ಬಹಳ ಮುಖ್ಯವಾಗಿದ್ದು, ಆದ ಕಾರಣ ಎಲ್ಲರೂ ಸಹ ಕಡ್ಡಾಯವಾಗಿ ಮಾಸ್ಕ್ಗಳನ್ನು ಧರಿಸಿ. ಪುರಸಭೆಯ ವತಿಯಿಂದ ಈ ಒಂದು ಕಾರ್ಯಾಚರಣೆಯು ಇನ್ನು ಮುಂದೆಯೂ ಸಹ ನಡೆಯುತ್ತಿರುತ್ತದೆ ಎಂದು ಕುಮಟಾ ಪುರಸಭೆ ತಿಳಿಸಿದೆ.
ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ