Important
Trending

ಸಮುದ್ರದ ಬಂಡೆಯ ಮೇಲೆ‌ ಕುಳಿತು ತಪಸ್ಸಿಗೆ ಕುಳಿತಂತೆ ಫೋಟೊಗೆ ಫೋಸ್ ಕೊಡುವಾಗ ನಡೆಯಿತು ದುರಂತ: ನಿರ್ಲಕ್ಷ್ಯದಿಂದ ಜೀವವನ್ನೇ ಕಳೆದುಕೊಂಡ ವಕೀಲ

ಕುಮಟಾ : ಹೆಚ್ಚಿತ್ತಿರುವ ಸಾವಿನ ಸಂಖ್ಯೆ ಮತ್ತು ಪ್ರವಾಸಿಗರ ಅತಿರೇಕದ ವರ್ತನೆ ತಡೆಯಲು ಕಡಲತೀರದಲ್ಲಿ ನಿಷೇಧಾಜ್ಞೆ ವಿಧಿಸಿದರೂ ಸಾವಿನ ಪ್ರಕರಣ ನಿಲ್ಲುತ್ತಿಲ್ಲ. ಸಮುದ್ರದ ಬಂಡೆಯ ಮೇಲೆ ಕುಳಿತು ಪೋಸ್ ಕೊಡಲು ಹೋದ ಪ್ರವಾಸಿಗನೊಬ್ಬ ಅಲೆ ಕೊಚ್ಚಿ ಸಾವನ್ನಪ್ಪಿದ ಘಟನೆ ಇಲ್ಲಿ ಕುಮಟಾ ಬೀಚ್ ನಲ್ಲಿ ನಡೆದಿದೆ.

ಸ್ನೇಹಿತರ ಜೊತೆ ಪ್ರಸಿದ್ದ ವನ್ನಳ್ಳಿ ಬೀಚ್ ಗೆ ಶಿರಸಿ ಮೂಲದ ವಕೀಲರೊಬ್ಬರು ಭೇಟಿ ನೀಡಿದ್ದರು. ಈ ವೇಳೆ ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಬೃಹತ್ ಅಲೆಗಳು ಬಂದು ಅಪ್ಪಳಿಸುತ್ತಿದ್ದ ಬಂಡೆಯಮೇಲೆ ಧ್ಯಾನದಲ್ಲಿ ಕುಳಿತಂತೆ ಪೋಸ್ ನೀಡಲು ಮುಂದಾಗಿದ್ದಾರೆ.

ಇದು ಭಾರೀ ದುರಂತಕ್ಕೆ ಕಾರಣವಾಗಿದೆ. ಹೌದು, ಬಂಡೆಯ ಮೇಲೆ ತಪಸ್ಸಿಗೆ ಕುಳಿತಂತೆ ಇದ್ದಾಗ ಭಾರೀ ಗಾತ್ರದ ಅಲೆಯೊಂದು ಬಂದು ಅಪ್ಪಳಿಸಿದೆ. ಈ ವೇಳೆ ಬಂಡೆಯ ಮೇಲೆ ಕುಳಿತಿದ್ದವರು ನೀರು ಪಾಲಾಗಿದ್ದಾರೆ.

ಮೃತರನ್ನು ವಕೀಲಿ ವೃತ್ತಿಯನ್ನು ಮಾಡುತ್ತಿದ್ದ ಶಿರಸಿಯ ಸುಬ್ರಹ್ಮಣ್ಯ ಗೌಡ ಎಂದು ಗುರುತಿಸಲಾಗಿದೆ. ಜಿಲ್ಲೆಯ ಕಡಲತೀರದಲ್ಲಿ ಇತ್ತೀಚೆಗೆ ಪ್ರವಾಸಿಗರು ಮೋಜು ಮಸ್ತಿಗಾಗಿ ಸಮುದ್ರಕ್ಕೆ ಇಳಿದು ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿದೆ. ಹೀಗಾಗಿ ಕಡಲಿಗಿಳಿಯದಂತೆ ಎಚ್ಚರಿಸಲಾಗುತ್ತಿದೆ.

ಆದರೂ ಪ್ರವಾಸಕ್ಕೆ ಬರುವ ಪ್ರವಾಸಿಗರು ಮನಸೋ ಇಚ್ಚೆ ವರ್ತಿಸುತ್ತಾ, ಅಪಾಯದ ಮುನ್ಸೂಚನೆ ಅರಿತು ಬೇಕಾಬಿಟ್ಟಿಯಾಗಿ ಫೋಟೋಕ್ಕೆ ಫೋಸ್ ಕೊಡಲು ಮುಂದಾಗಿ ಜೀವ ಕಳೆದುಕೊಳ್ಳುತ್ತಿರುವುದು ದುರಂತವೇ ಸರಿ. ಅದರಲ್ಲೂ ವಿದ್ಯಾವಂತರೇ ಈ ರೀತಿಯಾಗಿ ವರ್ತಿಸುತ್ತಿರುವುದು ವಿಪರ್ಯಾಸ.

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

ವಿಸ್ಮಯ ನ್ಯೂಸ್ ಕುಮಟಾ

Back to top button