ಮೃತಪಟ್ಟ ಗೋವನ್ನು ವಾಹನದ ಹಿಂಬದಿಕಟ್ಟಿ ಬೀದಿಬೀದಿಯಲ್ಲಿ ಎಳೆದುಕೊಂಡ ಹೋದ ಐಆರ್‌ಬಿ ವಾಹನ: ಎಲ್ಲೆಡೆ ಕೇಳಿಬರುತ್ತಿದೆ ಆಕ್ರೋಶ
ಭಟ್ಕಳ: ಹಿಂದೂ ಸಂಪ್ರದಾಯದಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ. ಹಿಂದೂಗಳು ಗೋವನ್ನು ಗೋಮಾತೆ ಎಂದು ಪೂಜಿಸುತ್ತಾರೆ., ಗೋವಿಗೆ ಅತ್ಯಂತ ವಿಶೇಷ ಪೂಜನೀಯ ಸ್ಥಾನವನ್ನು ನೀಡಿ ಆರಾಧಿಸುವ ದೇಶದಲ್ಲೇ ಇಂಥದೊAದು ಘಟನೆ ನಡೆದಿದೆ. ಹೌದು, ಅವೈಜ್ಞಾನಿಕ ಕಾಮಗಾರಿಯಿಂದ ಜಿಲ್ಲೆಯಾದ್ಯಂತ ಕುಖ್ಯಾತಿ ಗಳಿಸಿರುವ ಐಆರ್‌ಬಿ, ಇದೀಗ ಮತ್ತೊಂದು ರೀತಿಯಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಪಘಾತದಿಂದ ಮೃತಪಟ್ಟ ಗೋವನ್ನು ವಾಹನದ ಹಿಂಬದಿಕಟ್ಟಿ ಬೀದಿಬೀದಿಗಳಲ್ಲಿ ಎಳೆದುಕೊಂಡು ರವಾನಿಸುವ ಹೇಯ ಕೃತ್ಯಕ್ಕೆ ಇದೀಗ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಬೈಂದೂರು ತಾಲೂಕಿನ ಪಕ್ಕದ ಶಿರೂರು ಟೋಲ್ 1033 ಸಿಬ್ಬಂದಿಗಳು ಅಪಘಾತದಿಂದ ಮೃತಪಟ್ಟ ಗೋವನ್ನು ವಾಹನದ ಹಿಂಬದಿಕಟ್ಟಿ ಬೀದಿಬೀದಿಗಳಲ್ಲಿ ಎಳೆದುಕೊಂಡು ರವಾನಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಗೋಪ್ರೇಮಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಅಪಘಾತದಿಂದ ಮೃತಪಟ್ಟ ಗೋವುಗಳನ್ನು ಹಿಂದೂ ಕಾರ್ಯಕರ್ತರು, ಸಾರ್ವಜನಿಕರು ಸೇರಿ ಧಾರ್ಮಿಕ ವಿಧಿ ವಿಧಾನದ ಮೂಲಕ ಅಂತ್ಯಕ್ರಿಯೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿರುತ್ತಾರೆ. ಆದರೆ, ಐಆರ್‌ಬಿ ಮಾತ್ರ ಇಂಥ ದುಷ್ಕೃತ್ಯ ಮಾಡಿರುವುದು ಆಕ್ರೋಕ್ಕೆ ಕಾರಣವಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,
ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091