
ಸಿಎಂ ಬಸವರಾಜ್ ಬೊಮ್ಮಾಯಿ ಮನವಿ ಮೇರೆಗೆ ನಾಳೆಯ ( ಡಿಸೆಂಬರ್ 31ರ ) ಕರ್ನಾಟಕ ಬಂದ್ ಕೈ ಬಿಡಲಾಗಿದೆ. ಕನ್ನಡಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಈಗ ಬಂದ್ ಬೇಡ ಎಂದು ಸಿಎಂ ಎರಡು ಬಾರಿ ಮಾತಾಡಿದರು. ಅಲ್ಲದೆ, ಎಂಇಎಸ್ ನಿಷೇಧ ಮಾಡುವ ಭರವಸೆ ನೀಡಿದರು. ಅವರ ಮಾತಿಗೆ ಗೌರವ ಕೊಟ್ಟು ಬಂದ್ ವಾಪಸ್ ಪಡೆಯುವುದಾಗಿ ಸ್ಪಷ್ಟಪಡಿಸಿದರು.
ಬಂದ್ ಬದಲು ನಾಳೆ(ಡಿ. 31) ರ್ಯಾಲಿ (Rally ಮಾಡಲು ತೀರ್ಮಾನವಾಗಿದ್ದು, ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಈ ರ್ಯಾಲಿ ನಡೆಯಲಿದೆ. ಜನವರಿ 22 ರಂದು ಬಂದ್ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
