ಉತ್ತರಕನ್ನಡದಲ್ಲಿ ಇಂದು 719 ಮಂದಿಯಲ್ಲಿ ಕೋವಿಡ್ ಸೋಂಕು? ಒಂದು ಸಾವು: ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ?
ಕಾರವಾರ: ಉತ್ತರಕನ್ನಡದಲ್ಲಿ ಇಂದು 719 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದೇ ವೇಳೆ ಜಿಲ್ಲೆಯಲ್ಲಿ ಒಂದು ಸಾವು ಸಂಭವಿಸಿದೆ. ಕುಮಟಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಕಾರವಾರದಲ್ಲಿ 28 ಭಟ್ಕಳದಲ್ಲಿ 20,ಅಂಕೋಲಾದಲ್ಲಿ 67 ಕುಮಟಾದಲ್ಲಿ 69, ಹೊನ್ನಾವರ 45, ಶಿರಸಿಯಲ್ಲಿ 76, ಸಿದ್ದಾಪುರದಲ್ಲಿ 64, ಯಲ್ಲಾಪುರದಲ್ಲಿ 77, ಮುಂಡಗೋಡ 135 ಹಳಿಯಾಳದಲ್ಲಿ 103, ಹಾಗು ಜೋಯಿಡಾದಲ್ಲಿ 34 ಸೇರಿ ಒಟ್ಟು 679 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಅಂಕೋಲಾ: ತಾಲೂಕಿನಲ್ಲಿ ಶುಕ್ರವಾರ 67 ಕೋವೀಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು 46 ಜನರು ಸೋಂಕು ಮುಕ್ತರಾಗಿದ್ದಾರೆ.
ತಾಲೂಕಿನಲ್ಲಿ ಸೋಂಕಿನಿಂದ ಒಂದು ಸಾವು ಸಂಭವಿಸಿದೆ.ತಾಲೂಕಿನಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 144 ಕ್ಕೆ ತಲುಪಿದೆ ಇವರಲ್ಲಿ 6 ಜನರು ಆಸ್ಪತ್ರೆಯಲ್ಲಿ ಮತ್ತು 138 ಜನರು ಹೋಮ್ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಮೃತರಾದ ಓರ್ವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು,ಈವರೆಗೆ ತಾಲೂಕಿನಲ್ಲಿ ಕರೊನಾದಿಂದ ಮೃತಪಟ್ಟವರ ಒಟ್ಟೂ ಸಂಖ್ಯೆ 75ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್ ಕಾರವಾರ