Focus News
Trending

“ಯುವ ಜನಾಂಗದ ಉತ್ತಮ “ಆರೋಗ್ಯ”ಕ್ಕೆ ಸ್ವಾಮಿ ವಿವೇಕಾನಂದರ ನುಡಿಗಳು ಸ್ಪೂರ್ತಿಯಾಗಲಿ” – ಡಾ|| ಮಹಾಭಲೇಶ್ವರ ಹೆಗಡೆ

“ಜಗತ್ತಿನಲ್ಲಿಯೇ ಯುವ ಜನಾಂಗಕ್ಕೆ ಸ್ಪೂರ್ತಿ ಎಂದರೆ ಸ್ವಾಮಿ ವಿವೇಕಾನಂದರು. ಅವರು ಯುವ ಶಕ್ತಿಗೆ ಕರೆ ನೀಡಿದ “ಏಳಿ ಎದ್ದೇಳಿ, ಗುರಿ ತಲಪುವವರೆಗೂ ಪ್ರಯತ್ನ ಬಿಡದಿರಿ” ಮಾತು ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ಇಂದಿನ ಯುವ ಶಕ್ತಿಗೆ ಸಾಮಾಜಿಕ ಜಾವಬ್ದಾರಿಗಳ ಅರಿವು ಮುಖ್ಯವಾಗಿದೆ. ಸಾಮಾಜಿ ಜಾಲತಾಣಗಳನ್ನು ಉತ್ತಮ ವಿಚಾರಗಳಿಗೆ ಯುವ ಶಕ್ತಿ ಬಳಸಿಕೊಳ್ಳುವಂತಾಗಬೇಕು. ಆರೋಗ್ಯಕರ ಸಮಾಜಕ್ಕೆ ಯುವ ಶಕ್ತಿಯ ಸಕ್ರಿಯ ಭಾಗವಹಿಸುವಿಕೆ ಹೆಚ್ಚಾಗಬೇಕಿದೆ” ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಡಾ|| ಮಹಾಭಲೇಶ್ವರ ಹೆಗಡೆ ಹೇಳಿದರು.

ಅವರು ಹೊನ್ನಾವರ ಸೆಂಟ್ ಇಗ್ನೇಸಿಯಸ್ ಆರೋಗ್ಯ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಉತ್ತರಕನ್ನಡ, ಕರ್ನಾಟಕ ಏಡ್ಸ್ ಪ್ರಿವೆನ್ಸ್ನ್ ಸೊಸೈಟಿ ಬೆಂಗಳೂರು, ಮತ್ತು ರೆಡ್ ರಿಬ್ಬನ್ ಕ್ಲಬ್ ಸೆಂಟ್ ಇಗ್ನೇಶಿಯಸ್ ವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟಿಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮಾತನ್ನು ಮುಂದುವರಿಸುತ್ತಾ “ ಈ ಸಲದ ಯುವ ದಿನಾಚರಣೆಯ ಘೋಷವಾಕ್ಯ “ರಕ್ತ ನೀಡಿ ಜಗತ್ತನ್ನು ಗೆಲ್ಲಿಸಿ” ಆಗಿದ್ದು ಯುವ ಜನತೆ ರಕ್ತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕಾಗಿದೆ.

ನೈತಿಕ ಆರೋಗ್ಯ ಉತ್ತಮಪಡಿಸಿಕೊಳ್ಳುವದರ ಮೂಲಕ ಹೆಚ್.ಐ.ವಿ/ಏಡ್ಸ್ ನಿಂದ ದೂರವಿರಬಹುದಾಗಿದೆ. ನೈತಿಕ ನಡುವಳಿಕೆಗಳು ಉತ್ತಮ ಆರೋಗ್ಯ ಹೆಚ್ಚಿಸಲು ಅನುಕೂಲವಾಗಲಿದೆ. ಒತ್ತಡ ನಿರ್ವಹಣೆಗಾಗಿ ಯಾವುದೇ ಅಡ್ಡದಾರಿ ಹಿಡಿಯದೆ ಉತ್ತಮ ಹವ್ಯಾಸಗಳ ಮೂಲಕ ನಿರ್ವಹಿಸಬಹುದಾಗಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು, ಹೆಚ್.ಐ./ಏಡ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಿಕೆ ಮತ್ತು ರಕ್ತದಾನವನ್ನು ಪ್ರೋತ್ಸಾಹಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಕೊಳ್ಳಬೇಕು” ಎಂದು ಹೇಳಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೆಂಟ್ ಇಗ್ನೇಶಿಯಸ್ ವಿದ್ಯಾಲಯದ ಪ್ರಾಂಶುಪಾಲರಾದ ಸಿಸ್ಟರ್ ಡಯಾನ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ರಕ್ತದಾನಕ್ಕೆ ಪೂರಕವಾದ ದೈಹಿಕ ಸಾರ್ಮಥ್ಯ ಬೆಳಸಿಕೊಳ್ಳಬೇಕು. ರಕ್ತದಾನಕ್ಕೆ ಬೇಕಾದ ಅಂಶಗಳ ಪೂರೈಸಲಾಗದೇ ಸಾಕಷ್ಟು ಯುವತಿಯರು ರಕ್ತದಾನ ಮಾಡಲಾಗುತ್ತಿಲ್ಲ. ಉತ್ತಮ ಆಹಾರ ಸೇವನೆಯಿಂದ ದೈಹಿಕ ಸಾರ್ಮಥ್ಯ ಉತ್ತಮ ಪಡಿಸಿಕೊಳ್ಳುವ ಮೂಲಕ ರಕ್ತದಾನ ಮಾಡಬಹುದಾಗಿದೆ.”ಎಂದು ಹೇಳಿದ್ದರು.

ಜಿಲ್ಲಾ ಮಟ್ಟದ ಕಿರು ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಅರಣ್ಯ ಪದವಿ ಮಹಾವಿದ್ಯಾಲಯ ಸಿರಶಿ,ಎರಡನೇ ಸ್ಥಾನ ಪಡೆದ ಗೋಖಲೆ ಸೆಂಟನರಿ ಕಾಲೇಜ್ ಅಂಕೋಲಾ, ಮೂರನೇ ಸ್ಥಾನ ಪಡೆದ ಸರಕಾರಿ ಪದವಿ ಕಾಲೇಜ್ ಬಾಡ ಕುಮಟಾ ಇವರುಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಪ್ರಶಸ್ತಿ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಮೊನಿಟರಿಂಗ್ ಮತ್ತು ಇವಾಲ್ಯುವೆಶನ್ ಅಧಿಕಾರಿಗಳಾದ ಶ್ರೀಕಾಂತ ಹೀರೆಮಠ ಉಪಸ್ಥಿತರಿದ್ದರು. ಕಾಲೇಜಿನ ಎನ್ ಎಸ್.ಎಸ್ ಅಧಿಕಾರಿಗಳಾದ ಸಿಸ್ಟರ್ ಸುಸೈನಾ ಸ್ವಾಗತಿಸಿದ್ದರು. ಆಪ್ತಸಮಾಲೋಚಕರಾದ ಪ್ರದೀಪ ನಾಯ್ಕ ವಂದಿಸಿದರು. ಹೊನ್ನಾವರ ತಾಲೂಕ ಆಸ್ಪತ್ರೆಯ ಆಪ್ತಸಮಾಲೋಚಕರಾದ ವಿನಾಯಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು.ಆರೋಗ್ಯ ಇಲಾಖೆಯ ವಿನೋಧ, ಉಮೇಶ ಕೆ, ಕಾಲೇಜಿನ ಸಿಬ್ಬಂಧಿಗಳು ಉಪಸ್ಥಿತರಿದ್ದು ಕಾರ್ಯಕ್ರದಲ್ಲಿ ಸಹಕರಿಸಿದರು. 60ಕ್ಕೂ ಹೆಚ್ಚಿನ ನರ್ಸಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button