Important
Trending

ಚಿಪ್ಪು ಮೀನು ತೆಗೆಯಲು ಹೋಗಿ ನೀರು ಪಾಲಾದ ನತದೃಷ್ಟರು ? ಯುವತಿ ಸೇರಿ ಮೂವರ ದುರ್ಮರಣ

ಅಂಕೋಲಾ : ತಾಲೂಕಿನ ಗ್ರಾಮೀಣ ವ್ಯಾಪ್ತಿಯ  ಅಚವೆ – ಕರಿಕಲ್ಲ್ ಬಳಿ ನದಿ ತೀರದಲ್ಲಿ ಚಿಪ್ಪು ಮೀನು (ಕೊಂಡಗ ) ತೆಗೆಯಲು ಹೋದ ಅಥವಾ ಇತರೆ ಕಾರಣದಿಂದ ತೆರಳಿದ ಸ್ಥಳೀಯ ಯುವತಿ ಮತ್ತು ಆಕೆಯ ಸಂಬಂಧೀಕರೀರ್ವರು ನೀರು ಪಾಲಾದ ಘಟನೆ ಭಾನುವಾರ ನಡೆದಿದೆ. ಪೂಜಾ ಮಹೇಶ ನಾಯ್ಕ ಮತ್ತು ಆಕೆಯ ಸಂಬಂಧಿಗಳಾದ ಕುಮಟಾ ತಾಲೂಕಿನ ಅಘನಾಶಿನಿ ಮೂಲದ ನಾಗೇಂದ್ರ ಹಾಗೂ ಕೋನಳ್ಳಿಯ ದಿಲೀಪ್ ಮೃತ ದುರ್ದೈವಿಗಳು ಎನ್ನಲಾಗಿದೆ.

ನೀರಿನಲ್ಲಿ ಆಕಸ್ಮಿಕವಾಗಿ ಸಿಲುಕಿಕೊಂಡ  ಇವರನ್ನು ಸ್ಥಳೀಯರು ಶೋಧಕಾರ್ಯ ನಡೆಸಿ ನೀರಿನಿಂದ ಮೇಲೆತ್ತುವ ಒಳಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು ಎನ್ನಲಾಗಿದೆ.ಅಗ್ನಿಶಾಮಕ ದಳ,ಪೊಲೀಸ್ ಇಲಾಖೆ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸುತ್ತಿದ್ದಾರೆ. ಜಲ ಅವಗಡದ ಕುರಿತ ಹೆಚ್ಚಿನ ಮಾಹಿತಿಗಳು ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ವಿಲಾಸ್ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button