Focus News

ಡಾ. ಪ್ರೀತಿ ಭಂಡಾರಕರ್ ಅವರಿಗೆ ಕರ್ನಾಟಕ ಸರ್ಕಾರದಿಂದ ಪುರಸ್ಕಾರ

ಡಾ. ಪ್ರೀತಿ ಭಂಡಾರಕರ ಪ್ರಾಚಾರ್ಯರು ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾ ಇವರು ರಾಷ್ಟಿಯ ಶಿಕ್ಷಣ ನೀತಿ – 2020 ನ್ನು ಆಧರಿಸಿ ಪೂರ್ವ ಪ್ರಾಥಮಿಕದಿಂದ ಉನ್ನತ ಪ್ರೌಢಶಿಕ್ಷಣ (5+3+3+4)ದ ವರೆಗೆ ಪಠ್ಯಕ್ರಮ ರಚನೆಗೆ ಕರ್ನಾಟಕ ಸರ್ಕಾರದಿಂದ ಶಿಕ್ಷಣತಜ್ಞರಾಗಿ ಆಯ್ಕೆಯಾಗಿ ‘ಮಾರ್ಗದರ್ಶನ ಹಾಗೂ ಅಪ್ತಸಮಾಲೋಚನೆ’ ವಿಷಯದ ಪೊಸಿಷನ್ ಪೇಪರ್ ರಚನಾ ಸಮಿತಿಯ ಸದಸ್ಯರಾಗಿ ಇವರು ರಚಿಸಿದ ಪಠ್ಯಕ್ರಮದ ಪೊಸಿಷನ್ ಪೇಪರ್ ಕರ್ನಾಟಕ ಸರ್ಕಾರದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಯಿಂದ ಆಯ್ಕೆಯಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು ದೆಹಲಿಗೆ ಕಳುಹಿಸಲ್ಪಟ್ಟಿದೆ.

ಡಾ. ಪ್ರೀತಿ ಭಂಡಾರಕರರವರ ಈ ಕೊಡುಗೆಗಾಗಿ ಇವರು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯಿಂದ ಪುರಸ್ಕೃತರಾಗಿ ಕರ್ನಾಟಕ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರಾದ ಶ್ರೀಯುತ ಬಿ.ಸಿ. ನಾಗೇಶರವರಿಂದ ಪ್ರಶಸ್ತಿ ಪತ್ರದೊಂದಿಗೆ ಪುರಸ್ಕೃತರಾಗಿದ್ದಾರೆ. ಇವರನ್ನು ಕೆನರಾ ಕಾಲೇಜ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರಘು ಕೆ. ಪಿಕಳೆ, ಕಾರ್ಯಾಧ್ಯಕ್ಷರಾದ ಶ್ರೀ ದಿನಕರ ಎಮ್. ಕಾಮತ್, ಕಾರ್ಯದರ್ಶಿಗಳಾದ ಶ್ರೀ ಸುಧಾಕರ ವಿ. ನಾಯಕ್ ಮತ್ತು ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಕೌನ್ಸಿಲ್ ಸದಸ್ಯರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Back to top button