ಜೊಯಿಡಾ : ತಾಲೂಕಿನ ಉಡಸಾ ಕೈಟಾ ನಾಲಾ ಊರಿನ ರಸ್ತೆ ಮಳೆಗಾಲ ಪ್ರಾರಂಬವಾಗುತ್ತಿದ್ದoತೆ ಸಂಪೂರ್ಣ ಹಾಳಾಗಿದೆ. ರಾಡಿ ಮಣ್ಣಿನಿಂದ ಕೂಡಿದ್ದು, ಜನರ ಮತ್ತು ಶಾಲಾ ಮಕ್ಕಳ ಓಡಾಟಕ್ಕೆ ತೊಂದರೆಯಾಗಿದೆ. ವಯಸ್ಸಾದ ರೋಗಿಗಳನ್ನು ಕಂಬಳಿ ಮೂಲಕ ಕರೆದುಕೊಂಡು ಆಸ್ಪತ್ರೆಗೆ ಒಯ್ಯುತ್ತಿರುವುದು ನೋಡಿದರೆ ಜೊಯಿಡಾ ತಾಲೂಕಿನ ಮೂಲಭೂತ ಸೌಕರ್ಯಗಳ ಸ್ಥಿತಿ ಹೇಗಿದೆ ಎಂಬುದು ತಿಳಿಯಬಹುದಾಗಿದೆ.
ಉಡಸಾ ಕೈಟಾ ನಾಲಾ ಊರಿನಲ್ಲಿ ಸುಮಾರು 13 ಕ್ಕೂ ಹೆಚ್ಚು ಕುಟುಂಬಗಳು ವಾಸವಿದೆ. 12 ಕ್ಕೂ ಹೆಚ್ಚಾ ಶಾಲಾ ಮಕ್ಕಳು ಪ್ರತಿ ದಿನ ಶಾಲೆಗೆ ಹೋಗಬೇಕು ಎಂದರೆ ಇದೆ ಕೊಚ್ಚೆಯಂತಾದ ರಸೆಯಲ್ಲಿ ಸಾಗಬೇಕು. ಸುಮಾರು 3 ಕೀ.ಮಿ ಮಣ್ಣಿನ ರಸ್ತೆಯನ್ನು ಖಡಿಕರಣ ಕೂಡಾ ಮಾಡದೇ ನಿರ್ಲಕ್ಷ ಮಾಡಲಾಗಿದೆ ಎಂಬುದು ಇಲ್ಲಿನ ಸಾರ್ವಜನಿಕರ ಆರೋಪ.
ನಮ್ಮ ಹಿರಿಯರ ಕಾಲದಿಂದ ಇರುವ ಈ ಮಣ್ಣಿನ ರಸ್ತೆ ಇದುವರೆಗೂ ಅಭಿವೃದ್ದಿಯಾಗದೆ ನಿರ್ಲಕ್ಷಕ್ಕೆ ಒಳಗಾಗಿದೆ. ಇದರಿಂದಾಗಿ ನಮ್ಮ ಊರಿನಲ್ಲಿ ಇರುವ ಶಾಲಾ ಮಕ್ಕಳಿಗೆ ಮತ್ತು ಅನಾರೋಗ್ಯಕ್ಕೆ ಒಳಗಾಗಿರುವ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಆದ ಕಾರಣ ನಮಗೆ ಸರ್ವರುತು ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ವಿನಂತಿಸುತ್ತಿದ್ದೇವೆ. ಈ ನಮ್ಮ ಮನವಿಗೆ 15 ದಿನದೊಳಗೆ ಸ್ಪಂದಿಸದೇ ಇದ್ದಲ್ಲಿ ನಾವು ಊರ ಜನರೊಂದಿಗೆ ಸೇರಿ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.
ಇಲ್ಲಿನ ವೃದ್ಧೆಯೊಬ್ಬಳು ಅನಾರೋಗ್ಯಕ್ಕೆ ಒಳಗಾದ ಸಂದರ್ಬದಲ್ಲಿ ಯಾವುದೇ ಅಂಬ್ಯುಲೆನ್ಸ್ ಅಥವಾ ವಾಹನ ಈ ರಸ್ತೆಯಲ್ಲಿ ಹೋಗದೆ ಇರುವ ಕಾರಣ ಇಲ್ಲಿನ ಊರಿನ ಜನರೇ ಸೇರಿಕೊಂಡು ಕಂಬಳಿ ಮೂಲಕ 3 ಕಿ.ಮಿ ಹೊತ್ತುಕೊಂಡು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ವಿಸ್ಮಯ ನ್ಯೂಸ್, ಜೋಯ್ಡಾ