ಹೊನ್ನಾವರ: ವಿದ್ಯುತ್ ಉತ್ಪಾದನೆಗೆ ಬೇಡಿಕೆ ಬಾರದ ಸಂದರ್ಭದಲ್ಲಿ ರೇಡಿಯಲ್ ಗೇಟ್ ಮೂಲಕ ನೀರು ಹೋರ ಬೀಡಲಾಗುವುದು ಎಂದು ವಿದ್ಯುತ್ ನಿಗಮ ನೋಟೀಸ್ ಜಾರಿಮಾಡಿದೆ. ಹೊನ್ನಾವರ ತಾಲೂಕಿನ ಗೇರುಸೋಪ್ಪಾ ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿದ್ದು, ಹೇರಳವಾಗಿ ನೀರು ಹರಿದು ಬರುತ್ತಿದೆ ಇಲ್ಲಿ ಪ್ರತಿನಿತ್ಯ ವಿದ್ಯುತ್ ಉತ್ಪಾದನೆಗೆ 5000 ದಿಂದ 22000 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿತ್ತು. ಒಂದೋಮ್ಮೆ ವಿದ್ಯುತ್ ಬೇಡಿಕೆ ಬಾರದ ಇದ್ದ ಸಂದರ್ಭದಲ್ಲಿ ಗೇರುಸೊಪ್ಪ ಜಲಾಶಯವು ಗರಿಷ್ಟ ಮಟ್ಟವನ್ನು ತಲುಪುವ ಸಾಧ್ಯತೆ ಇರುತ್ತದೆ.
ಗೇರುಸೊಪ್ಪ ಅಣಿಕಟ್ಟಿನ ಸುರಕ್ಷಾ ದೃಷ್ಟಿಯಿಂದ ವಿದ್ಯುತ್ ಉತ್ಪಾದನೆಯಿಂದ ಹೊರಬರುವ ಪ್ರಮಾಣದಷ್ಟೇ ನೀರನ್ನು ಅಂದರೆ ಗುಷ್ಠ 22.000 ಕ್ಯೂ ಸೆಕ್ ವರಗಿನ ನೀರನ್ನು ರೇಡಿಯಲ್ ಗೇಟಗಳ ಮೂಲಕ ಹೊರಬಿಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ